Advertisement

ದ.ಕ.: ಕೋವಿಡ್ ಗೆ 3 ಬಲಿ, 247 ಮಂದಿಗೆ ಪಾಸಿಟಿವ್‌

12:24 AM Aug 26, 2020 | mahesh |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 247 ಮಂದಿಗೆ ಕೊರೊನಾ ದೃಢಪಟ್ಟಿದೆ. ಮೂವರು ಮೃತಪಟ್ಟಿದ್ದಾರೆ. ಒಟ್ಟು ಮೃತರ ಸಂಖ್ಯೆ 319ಕ್ಕೇರಿದೆ. ಮಂಗಳವಾರ 218 ಮಂದಿ ಗುಣಮುಖರಾಗಿದ್ದಾರೆ.

Advertisement

85 ಮಂದಿಗೆ ಸೋಂಕಿತರ ಸಂಪರ್ಕದಿಂದ, 72 ಮಂದಿ ಇನ್‌ಫ್ಲೂಯೆನ್ಜ ಲೈಕ್‌ ಇಲ್‌ನೆಸ್‌, 11 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ, ಓರ್ವನಿಗೆ ಡೊಮೆಸ್ಟಿಕ್‌ ಟ್ರಾವೆಲ್‌ ಮೂಲಕ ಸೋಂಕು ತಗಲಿದೆ. 78 ಮಂದಿಯ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ.

ಸೋಂಕಿತರಲ್ಲಿ 171 ಮಂದಿ ಮಂಗಳೂರು, 45 ಮಂದಿ ಬಂಟ್ವಾಳ, 6 ಮಂದಿ ಪುತ್ತೂರು, ನಾಲ್ವರು ಸುಳ್ಯ, 10 ಮಂದಿ ಬೆಳ್ತಂಗಡಿ ಹಾಗೂ 8 ಮಂದಿ ಹೊರ ಜಿಲ್ಲೆಯವವರು. ಇವರಲ್ಲಿ 62 ಮಂದಿ ಪುರುಷರು, 36 ಮಹಿಳೆಯರು ರೋಗ ಲಕ್ಷಣಗಳನ್ನು ಹೊಂದಿದ್ದಾರೆ. 98 ಮಂದಿ ಪುರುಷರು, 51 ಮಂದಿ ಮಹಿಳೆಯರು ಯಾವುದೇ ರೋಗ ಲಕ್ಷಣ ಹೊಂದಿಲ್ಲ. ಮೃತರಲ್ಲಿ ಓರ್ವ ಮಂಗಳೂರು, ಓರ್ವ ಪುತ್ತೂರು ಹಾಗೂ ಓರ್ವ ಇತರ ಜಿಲ್ಲೆಯವರಾಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 10,778 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಪೈಕಿ 8,136 ಮಂದಿ ಬಿಡುಗಡೆಯಾಗಿದ್ದಾರೆ. 2,323 ಮಂದಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಡಬ, ಪುತ್ತೂರು: 4 ಪ್ರಕರಣ
ಪುತ್ತೂರು: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಮಂಗಳವಾರ 4 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಉಭಯ ತಾಲೂಕುಗಳಲ್ಲಿ ಇಲ್ಲಿಯ ತನಕ ಒಟ್ಟು 574 ಪ್ರಕರಣಗಳು ವರದಿಯಾಗಿವೆ.

Advertisement

ಬಂಟ್ವಾಳ: 45 ಪ್ರಕರಣ
ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಮಂಗಳವಾರ 45 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ವಿಟ್ಲದ 10 ಮಂದಿ, ನರಿಕೊಂಬು, ಕುರ್ನಾಡು, ವಗ್ಗ ತಲಾ ನಾಲ್ವರು, ಕನ್ಯಾನದ ಮೂವರು, ಅಮೂrರು, ವಿಟ್ಲಪಟ್ನೂರು, ಬಂಟ್ವಾಳ, ಬಾಳೆಪುಣಿಯ ತಲಾ ಇಬ್ಬರು ಹಾಗೂ ಪೊಳಲಿ, ಅಮಾrಡಿ, ಅಳಿಕೆ, ಕೊಡಂಗಾಯಿ, ನಗ್ರಿ, ಕುಳ, ಕೈರಂಗಳ, ಇಡ್ಕಿದು, ಶಂಭೂರು, ಗೋಳ್ತಮಜಲು, ಬಿಳಿಯೂರು, ಸೊರ್ನಾಡಿನ ತಲಾ ಒಬ್ಬರು ಬಾಧಿತರಾಗಿದ್ದಾರೆ.

ಮೂಲ್ಕಿ: 2 ಪ್ರಕರಣ
ಮೂಲ್ಕಿ: ತಾಲೂಕು ಕಚೇರಿ ವ್ಯಾಪ್ತಿಯಲ್ಲಿ ಮಂಗಳವಾರ 2 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ. ಕಾರ್ನಾಡು ಸದಾಶಿವ ನಗರದ ಪುರುಷ ಮತ್ತು ಕಾರ್ನಾಡು ಸರಕಾರಿ ಆಸ್ಪತ್ರೆ ಬಳಿಯ ಪುರುಷ ಬಾಧಿತರು.

Advertisement

Udayavani is now on Telegram. Click here to join our channel and stay updated with the latest news.

Next