Advertisement

ದ.ಕ.: ಗುರುವಾರ; ಮೂವರ ಸಾವು, 316 ಪಾಸಿಟಿವ್‌

12:06 AM Sep 04, 2020 | mahesh |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ 316 ಮಂದಿಗೆ ಕೋವಿಡ್ ದೃಢಪಟ್ಟಿದೆ. ಮೂವರು ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 384 ಕ್ಕೆ ಏರಿಕೆಯಾಗಿದೆ. ಗುರುವಾರ 208 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

Advertisement

54 ಮಂದಿಗೆ ಸೋಂಕಿತರ ಸಂಪರ್ಕದಿಂದ, 129 ಮಂದಿಗೆ ಇನ್‌ಫ್ಲೂಯೆನಾl ಲೈಕ್‌ ಇಲ್‌ನೆಸ್‌, 13 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಕೋವಿಡ್ ದೃಢಪಟ್ಟಿದೆ. 120 ಮಂದಿಯ ಸೋಂಕಿನ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ.

ಸೋಂಕಿತರಲ್ಲಿ 190 ಮಂದಿ ಮಂಗಳೂರು, 40 ಮಂದಿ ಬಂಟ್ವಾಳ, 21 ಮಂದಿ ಪುತ್ತೂರು, 16 ಮಂದಿ ಸುಳ್ಯ, 16 ಮಂದಿ ಬೆಳ್ತಂಗಡಿ ತಾಲೂಕು ಹಾಗೂ 33 ಮಂದಿ ಹೊರ ಜಿಲ್ಲೆಯವರು. ಇವರಲ್ಲಿ 112 ಪುರುಷರು, 70 ಮಹಿಳೆಯರು ರೋಗ ಲಕ್ಷಣಗಳನ್ನು ಹೊಂದಿದ್ದಾರೆ. 57 ಮಂದಿ ಪುರುಷರು, 77 ಮಂದಿ ಮಹಿಳೆಯರು ಯಾವುದೇ ರೋಗ ಲಕ್ಷಣ ಹೊಂದಿಲ್ಲ. ಮೃತರಲ್ಲಿ ಇಬ್ಬರು ಮಂಗಳೂರು, ಒಬ್ಬರು ಅನ್ಯ ಜಿಲ್ಲೆಯವರು.

ಈವರೆಗೆ ಒಟ್ಟು 1,01,272 ಮಂದಿಯ ಗಂಟಲ ದ್ರವ ಮಾದರಿ ಪರೀಕ್ಷಿಸಲಾಗಿದೆ. 13,795 ಮಂದಿಗೆ ಕೊರೊನಾ ದೃಢಪಟ್ಟಿದ್ದು, 10,706 ಮಂದಿ ಗುಣಮುಖರಾಗಿದ್ದಾರೆ. ಸದ್ಯ 2,705 ಮಂದಿ ವಿವಿಧ ಆಸ್ಪತ್ರೆಗಳಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next