Advertisement
101 ಮಂದಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ, 176 ಮಂದಿ ಇನ್‌ಫ್ಲೂಯೆನಾl ಲೈಕ್ ಇಲ್‌ನೆಸ್, 9 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಸೋಂಕು ತಗಲಿದೆ. 22 ಮಂದಿಯ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ. ಪೀಡಿತರಲ್ಲಿ 202 ಮಂದಿ ಮಂಗಳೂರು, 37ಮಂದಿ ಬಂಟ್ವಾಳ, 30 ಮಂದಿ ಪುತ್ತೂರು, 10 ಮಂದಿ ಸುಳ್ಯ, 24 ಮಂದಿ ಬೆಳ್ತಂಗಡಿ ಹಾಗೂ 5 ಮಂದಿ ಹೊರ ಜಿಲ್ಲೆಯವರು.168 ಮಂದಿ ಪುರುಷರು, 55 ಮಹಿಳೆಯರು ರೋಗ ಲಕ್ಷಣಗಳನ್ನು ಹೊಂದಿದ್ದಾರೆ. 43 ಮಂದಿ ಪುರುಷರು, 42 ಮಂದಿ ಮಹಿಳೆಯರು ಯಾವುದೇ ರೋಗ ಲಕ್ಷಣ ಹೊಂದಿಲ್ಲ. ಮೃತರಲ್ಲಿ ಐವರು ಮಂಗಳೂರು, ಇಬ್ಬರು ಬಂಟ್ವಾಳ, ಓರ್ವ ಬೆಳ್ತಂಗಡಿ, ಓರ್ವ ಪುತ್ತೂರಿನವರು.