Advertisement
44 ಮಂದಿಗೆ ಸೋಂಕಿತರ ಸಂಪರ್ಕದಿಂದ, 130 ಮಂದಿ ಇನ್‌ಫ್ಲೂಯೆನ್ಜ್ ಲೈಕ್ ಇಲ್‌ನೆಸ್, 9 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಕೊರೊನಾ ದೃಢಪಟ್ಟಿದೆ. 124 ಮಂದಿಯ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ. ಸೋಂಕಿತರಲ್ಲಿ 197 ಮಂದಿ ಮಂಗಳೂರು, 57 ಮಂದಿ ಬಂಟ್ವಾಳ, 14 ಮಂದಿ ಪುತ್ತೂರು, 17 ಮಂದಿ ಸುಳ್ಯ, 14 ಮಂದಿ ಬೆಳ್ತಂಗಡಿ ಹಾಗೂ 8 ಮಂದಿ ಹೊರ ಜಿಲ್ಲೆಯವವರು. ಇವರಲ್ಲಿ 93 ಪುರುಷರು, 52 ಮಹಿಳೆಯರು ರೋಗ ಲಕ್ಷಣಗಳನ್ನು ಹೊಂದಿದ್ದಾರೆ. 75 ಮಂದಿ ಪುರುಷರು, 87 ಮಂದಿ ಮಹಿಳೆಯರು ಯಾವುದೇ ರೋಗ ಲಕ್ಷಣ ಹೊಂದಿಲ್ಲ. ಮೃತರಲ್ಲಿ ನಾಲ್ವರು ಮಂಗಳೂರು, ಓರ್ವ ಮೂಡುಬಿದಿರೆ, ಓರ್ವ ಇತರ ಜಿಲ್ಲೆಯವರಾಗಿದ್ದಾರೆ.
ಮೂಲ್ಕಿ: ಮೂಲ್ಕಿ ವ್ಯಾಪ್ತಿಯಲ್ಲಿ ಶುಕ್ರವಾರ 11 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಮೂಲ್ಕಿ ಸಹಿತ ಬಪ್ಪನಾಡು ಒಡೇರಬೆಟ್ಟು, ಕಿನ್ನಿಗೋಳಿ ಕೇರಿ, ಹಳೆಯಂಗಡಿ, ಮೆನ್ನಬೆಟ್ಟು, ಕೆಮ್ರಾಲ್ ಕೆರೆಮನೆ, ಕಾಪಿಕಾಡು ಅತ್ತೂರು. ಕಿಲ್ಪಾಡಿ ಕೋಡªಬ್ಬು ಸ್ಥಾನ ಬಳಿಯ ನಿವಾಸಿಗಳಲ್ಲಿ ಸೋಂಕು ದೃಢಪಟ್ಟಿದೆ. ಬಂಟ್ವಾಳ: 48 ಮಂದಿಗೆ ಸೋಂಕು
ಬಂಟ್ವಾಳ: ತಾಲೂಕಿನಲ್ಲಿ ಶುಕ್ರವಾರ 48 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕನ್ಯಾನದ 5 ಮಂದಿ, ಬುಡೋಳಿಯ 4, ಮಣಿನಾಲ್ಕೂರು, ನಾವೂರು, ವಿಟ್ಲ, ಸಾಲೆತ್ತೂರಿನ ತಲಾ 3 ಮಂದಿ, ತೆಂಕಕಜೆಕಾರು, ವೀರಕಂಭ, ಮುಡಿಪಿನ ತಲಾ ಇಬ್ಬರು ಹಾಗೂ ಕೊಳ್ನಾಡು, ಸಿದ್ಧಕಟ್ಟೆ, ಕೈಕುಂಜೆ, ಮೇರಮಜಲು, ನರಿಕೊಂಬು, ಮಾಣಿ, ಚೆನ್ನೈತ್ತೋಡಿ, ಪಂಜಿಕಲ್ಲು, ಬಡಗಬೆಳ್ಳೂರು, ಸಂಗಬೆಟ್ಟು, ನೇರಳಕಟ್ಟೆ, ಇರ್ವತ್ತೂರು, ಕಾವಳಮೂಡೂರು, ಬಂಟ್ವಾಳ, ಕಡೇಶ್ವಾಲ್ಯ, ಬಿಳಿಯೂರು, ಕರಿಂಗಾನ, ಕಾಡಬೆಟ್ಟು, ವಲೆಂಗೂರು, ಸೂರಿಕುಮೇರು, ತುಂಬೆಯ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
Related Articles
ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಶುಕ್ರವಾರ ಒಟ್ಟು 14 ಕೊರೊನಾ ಪ್ರಕರಣ ದೃಢಪಟ್ಟಿವೆ. ಕಡಬ ತಾಲೂಕಿನ ರಾಮಕುಂಜದ 38 ವರ್ಷದ ವ್ಯಕ್ತಿಯೊಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಅವರು ಮೃತಪಟ್ಟ ಬಳಿಕ ಪರೀಕ್ಷಾ ವರದಿ ಬಂದಿದ್ದು ಪಾಸಿಟಿವ್ ಬಂದಿತ್ತು.
Advertisement
ಸುಳ್ಯದಲ್ಲಿ 17 ಪ್ರಕರಣಸುಳ್ಯ: ಸುಳ್ಯ ತಾಲೂಕಿನಲ್ಲಿ ಶುಕ್ರವಾರ 17 ಕೋವಿಡ್ ಪ್ರಕರಣ ದೃಢಪಟ್ಟಿದೆ.