ಚಾಮರಾಜನಗರ: ಜಿಲ್ಲೆಯಲ್ಲಿ 8 ಜನ ಕೋವಿಡ್ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. 469 ಹೊಸ ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಡಳಿತ ಭಾನುವಾರದ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಚಾ.ನಗರ ಪಟ್ಟಣದ 36 ವರ್ಷದ ವ್ಯಕ್ತಿ, ಚಾ.ನಗರ ತಾಲೂಕಿನ ಚಂದಕವಾಡಿ ಗ್ರಾಮದ 52 ವರ್ಷದ ಮಹಿಳೆ, ನಲ್ಲೂರು ಮೋಳೆ ಗ್ರಾಮದ 70 ವರ್ಷದ ವೃದ್ಧ, ಅರಳೀಪುರ ಗ್ರಾಮದ 34 ವರ್ಷದ ವ್ಯಕ್ತಿ, ದೇಶೀಗೌಡನಪುರದ 35 ವರ್ಷದ ವ್ಯಕ್ತಿ, ಕೊಳ್ಳೇಗಾಲ ತಾಲೂಕು ಸಿಂಗಾನಲ್ಲೂರು ಗ್ರಾಮದ 56 ವರ್ಷದವ್ಯಕ್ತಿ, ಹನೂರು ತಾಲೂಕು ರಾಮಾಪುರ ಗ್ರಾಮದ 34 ವರ್ಷದ ವ್ಯಕ್ತಿ, ಗುಂಡ್ಲುಪೇಟೆ ತಾಲೂಕಿನ ಚಂಗವಾಡಿ ಗ್ರಾಮದ 39 ವರ್ಷದ ವ್ಯಕ್ತಿ ಕೋವಿಡ್ ಚಿಕಿತ್ಸೆಗೆ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಭಾನುವಾರ ಒಟ್ಟು 537 ಪ್ರಕರಣಗಳು ದೃಢಪಟ್ಟಿದ್ದು, ಇವರಲ್ಲಿ 68 ಪ್ರಕರಣಗಳ ಸೋಂಕಿತರನ್ನು ಪತ್ತೆ ಹಚ್ಚಲಾಗುತ್ತಿದೆ. ಹಾಗಾಗಿ 469 ಪ್ರಕರಣಗಳನ್ನು ಪಟ್ಟಿಗೆ ಸೇರಿಸಲಾಗಿದೆ. 308 ಮಂದಿ ಗುಣಮುಖರಾಗಿದ್ದಾರೆ. 49 ಮಂದಿ ಐಸಿಯುನಲ್ಲಿ ದಾಖಲಾಗಿದ್ದಾರೆ. 1715 ಮಂದಿ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಸ್ತುತ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2596 ಆಗಿದೆ. ಭಾನುವಾರದ ಹೊಸ ಪ್ರಕರಣಗಳಲ್ಲಿ 42 ಮಕ್ಕಳಿದ್ದಾರೆ. 176 ಪ್ರಕರಣಗಳು ಚಾಮರಾಜನಗರ ತಾಲೂಕೊಂದರಲ್ಲೇ ವರದಿಯಾಗಿವೆ.
ಇದನ್ನೂ ಓದಿ : ರಾಜ್ಯದಲ್ಲಿಂದು 37733 ಕೋವಿಡ್ ಪ್ರಕರಣ : 217 ಮಂದಿ ಸಾವು
ಇದುವರೆಗೆ 9084 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ11,859ಕ್ಕೇರಿದೆ. ಭಾನುವಾರ 1843 ಮಾದರಿಗಳನ್ನು ಪರೀಕ್ಷಿಸಲಾಗಿತ್ತು.ಜಿಲ್ಲೆಯಲ್ಲಿ ಇದುವರೆಗೆ 1,54,674 ಮಂದಿಗೆ ಕೋವಿಡ್ ನಿರೋಧಕ ಲಸಿಕೆ ನೀಡಲಾಗಿದೆ.
—————
ಕೋವಿಡ್ ಅಂಕಿ ಅಂಶ ಚಾಮರಾಜನಗರ
ಇಂದಿನ ಪ್ರಕರಣ: 469
ಇಂದು ಗುಣಮುಖ: 308
ಒಟ್ಟು ಗುಣಮುಖ: 9084
ಇಂದಿನ ಸಾವು: 08
ಒಟ್ಟು ಸಾವು: 159
ಸಕ್ರಿಯ ಪ್ರಕರಣಗಳು: 2596
ಒಟ್ಟು ಸೋಂಕಿತರು: 11859