Advertisement
ಬೆಂಗಳೂರಿನಲ್ಲಿ ಜುಲೈ ಅಂತ್ಯಕ್ಕೆ 55 ಸಾವಿರ ಇದ್ದ ಕೋವಿಡ್ ಪ್ರಕರಣಗಳು, ಆಗಸ್ಟ್ ಅಂತ್ಯಕ್ಕೆ 1.29 ಲಕ್ಷ ತಲುಪಿದ್ದವು . ಸದ್ಯ ಸೆಪ್ಟೆಂಬರ್ 22ಕ್ಕೆ ಎರಡು ಲಕ್ಷ ಗಡಿದಾಟಿವೆ. ಜುಲೈಗಿಂತಲೂ ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಸೋಂಕಿ ಗೊಳಗಾದವರ ಸಂಖ್ಯೆ ದುಪ್ಪಟ್ಟಾಗಿದೆ ಎಂಬ ಲೆಕ್ಕಾಚಾರವಿದೆ. ಇದಕ್ಕೆ ಸೋಂಕು ಪರೀಕ್ಷೆಗಳು ಮೂರು ಪಟ್ಟು ಹೆಚ್ಚಳವಾಗಿರುವುದು ಕಾರಣ ಎನ್ನಲಾಗುತ್ತಿದೆ. ಆದರೆ,ಇನ್ನೊಂದೆಡೆ” ಸೋಂಕಿನ ತೀವ್ರತೆಯು ಪ್ರಕರಣಗಳ ಸಂಖ್ಯೆಯನ್ನು ಆಧರಿಸುವುದಿಲ್ಲ. ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಆಧರಿಸಿರುತ್ತದೆ’ ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ. ಈ ಪ್ರಕಾರ ಜುಲೈನಲ್ಲಿ ನಗರದಲ್ಲಿ ಶೇ.24 ರಷ್ಟಿದ್ದ ಸೋಂಕು ಪಾಸಿಟಿವಿಟಿ ದರ ಪ್ರಸ್ತುತ ಶೇ.12ಕ್ಕೆ ಕುಸಿದಿದೆ.
Related Articles
Advertisement
ನಗರದಲ್ಲಿ ಸೋಂಕಿತರ ಸಂಖ್ಯೆ ಏರಿಕೆ : ಬೆಂಗಳೂರು: ನಗರದಲ್ಲಿ ಬುಧವಾರ3,547 ಮಂದಿಗೆ ಕೋವಿಡ್ ತಗುಲಿದೆ. ಸೋಂಕು ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ3536 ಮಂದಿ ಗುಣಮುಖರಾಗಿದ್ದು,23 ಸೋಂಕಿತರ ಸಾವಾಗಿದೆ. ಈ ಮೂಲಕ ನಗರದ ಒಟ್ಟಾರೆ ಸೋಂಕು ಪ್ರಕರಣಗಳು2.04 ಲಕ್ಷಕ್ಕೆ ತಲುಪಿವೆ. ಈ ಪೈಕಿ ಈಗಾಗಲೇ1.61ಲಕ್ಷ ಮಂದಿ ಗುಣಮುಖರಾಗಿದ್ದು,2738 ಮಂದಿ ಮೃತಪಟ್ಟಿದ್ದಾರೆ. ಇಂದಿಗೂ 39,971 ಮಂದಿ
ಆಸ್ಪತ್ರೆ, ಮನೆಗಳಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಮಂಗಳವಾರಕ್ಕೆ ಹೋಲಿಸಿದರೆ ನಗರದಲ್ಲಿ ಸೋಂಕು ಪ್ರಕರಣಗಳು400 ಹೆಚ್ಚಳ ವಾಗಿದ್ದು, ಗುಣಮುಖರು 400ಕಡಿಮೆಯಾಗಿದ್ದಾರೆ. ಇದರಿಂದಾಗಿ ಸಕ್ರಿಯ ಸೋಂಕು ಪ್ರಕರಣಗಳು ತುಸು ಏರಿಕೆಯಾಗಿವೆ. ಸೋಂಕಿತರ ಸಾವು ಒಂದು ಹೆಚ್ಚಳವಾಗಿದೆ.24051 ಸೋಂಕು ಪ್ರಕರಣಗಳು ನಡೆದಿದ್ದು, ಒಟ್ಟಾರೆ ಪರೀಕ್ಷೆಗಳ ಸಂಖ್ಯೆ 14.8 ಲಕ್ಷಕ್ಕೆ ಏರಿಕೆಯಾಗಿದೆ. ಇನ್ನು ನಗರದ ಗುಣಮುಖ ದರ ಶೇ. 79.1, ಮರಣ ದರ ಶೇ.1.34, ಸಕ್ರಿಯ ಪ್ರಕರಣಗಳು ಶೇ.19.5 ರಷ್ಟಿದೆ.
ಎರಡು ತಿಂಗಳಿಂದ ಸೋಂಕು ಪರೀಕ್ಷೆಗಳು ಹೆಚ್ಚಳವಾಗುತ್ತಿದ್ದು, ಅಂತೆಯೇ ಸೋಂಕಿತರ ಸಂಖ್ಯೆಯೂ ಹೆಚ್ಚಳವಾಗಿವೆ. ಆದರೆ, ಪರೀಕ್ಷೆಯಲ್ಲಿ ಸೋಂಕು ದೃಢವಾಗುತ್ತಿರುವ ಪ್ರಮಾಣ ಮೊದಲಿಗಿಂತಲೂ ಕಡಿಮೆಯಾಗಿದೆ.ನಗರದಲ್ಲಿ ನಡೆಯುತ್ತಿರುವಕೊರೊನಾ ಪರೀಕ್ಷೆಗಳಲ್ಲಿ ಶೇ.12 ಪಾಸಿಟಿವಿಟಿ ದರವಿದ್ದು, ಅದು ಶೇ.5ಕ್ಕಿಂತಲೂ ಕಡಿಮೆ ಬರಬೇಕು. ಆಗ ಮಾತ್ರ ಸೋಂಕು ನಿಯಂತ್ರಣದಲ್ಲಿದೆ ಎಂದರ್ಥ. –ಡಾ.ವಿ.ರವಿ, ಮುಖ್ಯಸ್ಥರು, ವೈರಾಲಜಿ ವಿಭಾಗ ನಿಮ್ಹಾನ್ಸ್
-ಜಯಪ್ರಕಾಶ್ ಬಿರಾದಾರ್