Advertisement

ಮತ್ತೆ 2,821 ಪ್ರಕರಣ ಪತ್ತೆ

11:50 AM Aug 31, 2020 | Suhan S |

ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕಿನ ವೇಗ ಯಥಾಸ್ಥಿತಿಯಲ್ಲಿಯೇ ಇದ್ದು ಭಾನುವಾರ ಮತ್ತೆ 2,821 ಕೋವಿಡ್ ಸೋಂಕಿತ ಪ್ರಕರಣಗಳು ಕಂಡು ಬಂದಿವೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 1,27,263 ಕ್ಕೆ ಏರಿಕೆಯಾಗಿದೆ.

Advertisement

ಹಾಗೆಯೇ 2,406 ಜನರು ವಿವಿಧ ಆಸ್ಪತ್ರೆ ಮತ್ತು ಆರೈಕೆ ಕೇಂದ್ರಗಳಿಂದ ಬಿಡುಗಡೆಯಾಗಿದ್ದು ಒಟ್ಟಾರೆ ಇಲ್ಲಿಯ ವರೆಗೂ 86,621 ಮಂದಿ ಗುಣಮುಖರಾಗಿ ಮನೆ ಸೇರಿದ್ದಾರೆ. 27 ಮಂದಿ ಕೋವಿಡ್ ದಿಂದ ಸಾವಿಗೀಡಾಗಿದ್ದು, ಒಟ್ಟು 1,939 ಮೃತರಾಗಿದ್ದಾರೆ. 285 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದರೆ.

8 ದಿನಗಳಲ್ಲಿ 275 ಮಂದಿ ಸಾವು: ನಗರದಲ್ಲಿ ಕಳೆದ ಎಂಟು ದಿನಗಳ ಅಂಕಿ ಅಂಶಗಳನ್ನು ಗಮನಿಸಿದರೆ ಸಿಲಿಕಾನ್‌ ಸಿಟಿಯಲ್ಲಿ ಒಟ್ಟು 275 ಜನರು ಮೃತ ಪಟ್ಟಿದ್ದಾರೆ. ಆ.23 ರಂದು ಈ ಸಂಖ್ಯೆ ಐದಕ್ಕೆ ತಲುಪಿತ್ತು. ಆದರೆ ಇದನ್ನುಹೊರತು ಪಡಿಸಿದರೆ ಸಾವಿನ ಸಂಖ್ಯೆ ಅಧಿಕ ವಾಗುತ್ತಲೆ ಇದೆ. ಹೊಸದಾಗಿ ವೃದ್ಧರ ಸಾವಿನ ಪ್ರಮಾಣ ಏರಿಕೆಯಾಗಿದೆ. ಶೇ.68.48 ಗುಣಮುಖ ಪ್ರಮಾಣ : ಸಿಲಿಕಾನ್‌ ಸಿಟಿಯಲ್ಲಿ ಬಿಡು ಗಡೆಯಾಗುವ ಪ್ರಮಾಣ ಶೇ.68.48 ರಷ್ಟಿದೆ. ಈಗಿರುವ ಒಟ್ಟು ಸೋಂಕಿತರಲ್ಲಿ 78,313 ಪುರುಷರು 48,917 ಮಹಿಳೆ ಯರು ಹಾಗೂ 33 ತೃತೀಯ ಲಿಂಗಿಗಳು ಸೇರಿದ್ದಾರೆ.

ಕಳೆದ 24 ಗಂಟೆಗಳಲ್ಲಿ ದಕ್ಷಿಣದಲ್ಲಿ ಶೇ.17 ರಷ್ಟು, ಬೊಮ್ಮನಹಳ್ಳಿಯಲ್ಲಿ ಶೇ.16  ರಷ್ಟು, ದಾಸರಹಳ್ಳಿ ಮತ್ತು ಮಹ ದೇವಪುರ  ದಲ್ಲಿ ಶೇ.7ರಷ್ಟು, ರಾಜ ರಾಜೇಶ್ವರಿ ನಗರದಲ್ಲಿ ಶೇ.10ರಷ್ಟು, ಯಲಹಂಕದಲ್ಲಿ ಶೇ.6 ರಷ್ಟು ಸೋಂಕಿತ ಪ್ರಕರಣಗಳು ಕಂಡು ಬಂದಿವೆ. ಅಲ್ಲದೆ ದಕ್ಷಿಣ ಭಾಗದಲ್ಲಿ 3,005, ಪಶ್ಚಿಮದಲ್ಲಿ 3,418, ಬೊಮ್ಮನಹಳ್ಳಿ ಯಲ್ಲಿ 1,000 ಮತ್ತು ಯಲಹಂಕ ದಲ್ಲಿ 944 ಸಕ್ರಿಯ ಕಂಟೈನ್ಮೆಂಟ್‌ ವಲಯಗಳಿವೆ. ನಗರದಲ್ಲೀಗ ಒಟ್ಟು ಪಾಸಿಟಿವ್‌ ರೇಟ್‌ ಶೇ.15.11 ರಷ್ಟಿದ್ದು, ಆಕ್ಟೀವ್‌ ರೇಟ್‌ ಶೇ.29.99 ರಷ್ಟಿದೆ. ಅಲ್ಲದೆ ನಿನ್ನೆ 26,266 ಜನರನ್ನು ಪರೀಕ್ಷಿಸಿದ್ದು, ಇದುವ ರೆಗೂ ಕೆ.ಆರ್‌. ಮಾರುಕಟ್ಟೆ ಪ್ರದೇಶದಲ್ಲಿ ಕೋವಿಡ್‌ ಪರೀಕ್ಷೆ ನಡೆಸಲಾಯಿತು. 8,42,277 ಮಂದಿ ತಪಾಸಣೆ ನಡೆದದೆ.

Advertisement

Udayavani is now on Telegram. Click here to join our channel and stay updated with the latest news.

Next