Advertisement

ಕೊರೊನಾ ಜನಕ ಕತೆಗಳು: ಹುಲಿ ಇದ್ದಂಗೆ ಇದ್ದ ಅಪ್ಪನನ್ನು ಸಾಯಿಸಿಬಿಟ್ರು..

10:43 AM May 01, 2021 | Team Udayavani |

ಬೆಂಗಳೂರು: “ನಮ್ಮಪ್ಪ ಹುಲಿ ಇದ್ದಂಗೆ ಇದ್ದ ಸರ್‌.. 88 ಇದ್ದ ಪಲ್ಸ್‌ ರೇಟ್‌(ಸ್ಯಾಚುರೇಶನ್‌) ಆಸ್ಪತ್ರೆಗೆ ಹೋದ ಮೇಲೆ ದಿಢೀರನೆ 30ಕ್ಕೆ ಇಳಿಸಿದ್ರು. ಸಾಯೋದಕ್ಕೂ ಮುಂಚೆ ಅಮ್ಮು.. ಅಮ್ಮು ಎಂದು ಕರೆದರು. ಒಂದು ತೊಟ್ಟು ನೀರು ಬಿಡುತ್ತೇನೆ ಎಂದು ಕಾಲಿಗೆ ಬಿದ್ದರು ವೈದ್ಯರು ಅವಕಾಶ ನೀಡಲಿಲ್ಲ ಸರ್‌..’

Advertisement

ಇದು, ಚಿಕ್ಕಂದಿನಿಂದ ತನ್ನನ್ನು ಸಾಕಿ ಸಲುಹಿದ ತಂದೆಯ ಮುಖವನ್ನು ನೋಡದೆ, ಕೊನೆ ಬಾರಿ ತಂದೆ ಬಾಯಿಗೆ ಒಂದು ಹನಿ ನೀರನ್ನೂ ಬಿಡುವುದಕ್ಕೆಸಾಧ್ಯವಾಗದ ಮಗಳು ತನ್ನ ತಂದೆಯನ್ನು ನೆನೆದು ಸುಮನಹಳ್ಳಿ ಚಿತಾಗಾರದ ಮುಂದೆ ಶುಕ್ರವಾರಗೋಳಾಡುತ್ತಿದ್ದ ಮನಕಲಕುವ ಘಟನೆ.

ಕೋವಿಡ್ ಎರಡನೇ ಅಲೆ ಅಟ್ಟಹಾಸ ರಾಜಧಾನಿ ಜನರನ್ನು ತತ್ತ ರಿಸುವಂತೆಮಾಡಿದೆ. ತಮ್ಮವರನ್ನು ಕಳೆದುಕೊಂಡು ಕುಟುಂಬಸ್ಥರು ಆಸ್ಪತ್ರೆ ಬಳಿ, ಚಿತಾಗಾರಗಳ ಬಳಿ ರೋಧಿಸುತ್ತಿರುವ ದೃಶ್ಯಗಳು ಹೃದಯ ಹಿಂಡುವಂತಿದೆ. “ಬಿಬಿಎಂಪಿ ಕಡೆಯಿಂದ ತಂದೆಗೆ ಬೆಡ್‌ ಏನೋ ಸಿಕ್ತು ಸರ್‌.. ಆದರೆ, ತಂದೆನ ತಗೊಂಡು ಹೋಗಿ ಒಂದು ಕಡೆ ಬಿಸಾಕಿಬಿಟ್ಟರು. 20 ಬಾರಿ ಹೋಗಿ ಕರೆದರೂ ಇಂಜೆಕ್ಷನ್‌ ಕೊಡೋಕೆ ಯಾರೂ ಗತಿ ಇರಲಿಲ್ಲ.

ಇದನ್ನೂ ಓದಿ : ಕೋವಿಡ್ ವಿರುದ್ಧ ಹೋರಾಟಕ್ಕೆ ಸಹಾಯ ಮಾಡಿದ ಜಯದೇವ್ ಉನಾದ್ಕತ್, ನಿಕೋಲಸ್ ಪೂರನ್

ಬಿಬಿಎಂಪಿ ಯಿಂದ ಕೊಟ್ಟಿದ್ದ ಇಂಜೆಕ್ಷನ್‌ ಹಾಕಿಸಲು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ1 ಗಂಟೆಯವರೆಗೆ ವೈದ್ಯರ ಮುಂದೆ ಕಾಯುತ್ತಾ ನಿಂತಿದ್ದೆ ಸರ್‌.. ಹಣ ಕೊಟ್ಟರೆಅವರನ್ನು ಒಂದು ತರ ನೊಡುತ್ತಾರೆ. ನಮ್ಮನ್ನೇಒಂದು ರೀತಿ ನೊಡುತ್ತಾರೆ’ ಎಂದು ತಂದೆಯನ್ನು ಕಳೆದುಕೊಂಡ ಮಗಳು ಕಣ್ಣೀರಾದರು.

Advertisement

“ಏನು ಹೇಳ್ಳೋದು ಸರ್‌. ಎಲ್ಲಾ ನಮ್ಮ ಹಣೆಬರಹ. ಕೋವಿಡ್ ಸೋಂಕು ದೃಢವಾದ ಬಳಿಕ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿ ಸಿದ್ದೆವು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹಣ ಬೇಕು ಎಂದಿದ್ದರೆ, ಹೇಗೋ ಹಣ ಕಲೆಹಾಕಿ ಕೊಡುತ್ತಿದ್ದೆ. ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಈ ರೀತಿಯ ಕೆಟ್ಟ ಆಸ್ಪತ್ರೆ ಎಲ್ಲೂ ಇಲ್ಲ. ಅಯ್ಯೋ ದೇವರೇ, ಯಾರಿಗೂ ಈ ರೀತಿಯ ಸ್ಥಿತಿ ಬರೋದು ಬೇಡ. ಯಾರೂ ಆಸ್ಪತ್ರೆಗೆ ಕೋವಿಡ್ ರೋಗಿಗಳನ್ನು ಕರೆದುಕೊಂಡು ಹೋಗಬೇಡಿ. ಸೂಕ್ತ ಚಿಕಿತ್ಸೆ ಕೊಡದೆ ಸಾಯಿಸಿಬಿಡುತ್ತಾರೆ.’ ಎಂದು ಕೈಮುಗಿಯುತ್ತಲೇ ಗೋಳಾಡಿದರು.

ನನ್ನ ಜೀವಾನೆ ನನ್ನ  ತಂದೆ :

“ನನ್ನ ಜೀವಾನೇ ನನ್ನ ತಂದೆಯಾಗಿದ್ದರು ಸರ್‌.. ನಮ್ಮಪ್ಪನಿಗೆಗಂಡು ಮಕ್ಕಳಿಲ್ಲ. ನಾನೆ ಎಲ್ಲಾ. ಮುಂದೆ ನನಗ್ಯಾರು ದಿಕ್ಕು ಎಂದು ದುಃಖಿಸಿದರು. ಹಣ ಇರುವವರಿಗೆ ವೈದ್ಯರು, ಉತ್ತಮ ಚಿಕಿತ್ಸೆ ನೀಡುತ್ತಾರೆ. ಬಡವರು ಹೋದರೆ ನಿರ್ಲಕ್ಷ್ಯ ಮಾಡುತ್ತಾರೆ. ಅದರಂತ ಕೆಟ್ಟ ಆಸ್ಪತ್ರೆ ಇನ್ನೊಂದಿಲ್ಲ. ಅಲ್ಲಿನ ಶೌಚಾಲಯ(ಬಾತ್‌ ರೂಂ)ಗಳನ್ನು ನೋಡಿದರೆ, ಆರೋಗ್ಯವಾಗಿ ರೋರಿಗೂ ಕೋವಿಡ್ ಬರುತ್ತದೆ.ನಾಲ್ಕು ದಿನಗಳಿಂದ ತಂದೆಯ ಜೊತೆಯಲ್ಲೇ ಇದ್ದೆ ಸರ್‌. ಒಂದು ತೊಟ್ಟು ನೀರು ಬಿಡಲು ಆಗಲಿಲ್ಲ. ಕಾಲು ಹಿಡಿದುಕೊಂಡರೂ ಐಸಿಯು ಒಳಗೆ ಬಿಡಲಿಲ್ಲ ಎಂದು ಆಕ್ರಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next