Advertisement

384 ಪಾಸಿಟಿವ್‌; 192 ಮಂದಿ ಗುಣಮುಖ

02:55 PM Aug 22, 2020 | Team Udayavani |

ಬೆಳಗಾವಿ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಮತ್ತೆ ಶುಕ್ರವಾರ ಹೆಚ್ಚಳವಾಗಿದ್ದು, ಒಂದೇ ದಿನ 384 ಜನರಿಗೆ ಸೋಂಕು ತಗುಲಿದೆ. 7 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ. ಇನ್ನೊಂದೆಡೆ 192 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

Advertisement

ಬೆಳಗಾವಿಯ 65 ವರ್ಷದ ವೃದ್ಧೆ, 60 ವರ್ಷದ ವೃದ್ಧ, 73 ವರ್ಷದ ವೃದ್ಧ, ಬೆಳಗಾವಿಯ 65 ವರ್ಷದ ವೃದ್ಧೆ, 74 ವರ್ಷದ ವೃದ್ಧೆ, 60 ವರ್ಷದ ವೃದ್ಧೆ ಹಾಗೂ 53 ವರ್ಷದ ವ್ಯಕ್ತಿ ಕೋವಿಡ್ ಗೆ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ ಒಟ್ಟು 151ಕ್ಕೆ ಏರಿಕೆಯಾಗಿದೆ.

384 ಹೊಸ ಪ್ರಕರಣಗಳಿಂದ 9447 ಸೋಂಕಿತರು ಆಗಿದ್ದು, ಒಂದೇ ದಿನ 192 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿ ಇಲ್ಲಿಯವರೆಗೆ 5206 ಜನ ಬಿಡುಗಡೆ ಆದಂತಾಗಿದೆ. ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್‌-19 ವಾರ್ಡ್‌ನಲ್ಲಿ ಸದ್ಯ 4140 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇಂದಿನವರೆಗೆ 75126 ಜನರ ಮೇಲೆ ನಿಗಾ ಇಡಲಾಗಿದೆ. ಇದುವರೆಗೆ 25513 ಜನರು 14 ದಿನಗಳ ಕಾಲ ಗೃಹ ನಿಗಾದಲ್ಲಿದ್ದರೆ, ಒಟ್ಟು 6545 ಜನರು 14 ದಿನಗಳ ಗೃಹ ನಿಗಾ ಪೂರ್ಣಗೊಳಿಸಿದ್ದರೆ, 38928 ಜನರು 28 ದಿನಗಳ ಗೃಹ ನಿಗಾ ಅವಧಿ ಮುಕ್ತಾಯಗೊಳಿಸಿದ್ದಾರೆ.

ಇಂದಿನವರೆಗೆ 73830 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, 62247 ವರದಿ ನಕಾರಾತ್ಮಕವಾಗಿದೆ. ಇನ್ನೂ 1201 ಜನರ ವರದಿ ಬರುವುದು ಬಾಕಿ ಇದೆ. ಸೋಂಕಿನಿಂದ ಒಟ್ಟು 151 ಜನ ಬಲಿಯಾದಂತಾಗಿದೆ ಎಂದು ಜಿಲ್ಲಾ ವೈದ್ಯಕೀಯ ವರದಿ ತಿಳಿಸಿದೆ.

ಬೈಲಹೊಂಗಲ: 21 ಜನರಿಗೆ ಸೋಂಕು : ಶುಕ್ರವಾರ ತಾಲೂಕಿನಲ್ಲಿ 21 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಪಟ್ಟಣದ ವಿದ್ಯಾನಗರದ 52 ವರ್ಷದ ಮಹಿಳೆ, ದಾನಮ್ಮದೇವಿ ಉಪ ನಗರದ 30 ವರ್ಷದ ಮಹಿಳೆ ಹಾಗೂ 36 ವರ್ಷದ ಪುರುಷ, ಎಂ.ಜಿ. ಕಾಲೋನಿಯ 30 ವರ್ಷದ ಪುರುಷ, 30 ವರ್ಷದ ಮಹಿಳೆ, 4 ವರ್ಷದ ಮಗು, ಆಶ್ರಯ ನಗರದ 20 ವರ್ಷದ ಯುವತಿ, ಬಸವ ನಗರದ 66 ವರ್ಷದ ಮಹಿಳೆ, ಮೌನೇಶ್ವರ್‌ ನಗರದ 22 ವರ್ಷದ ಮಹಿಳೆ, ಕಡಬಿ ಗಲ್ಲಿಯ 55 ವರ್ಷದ ಮಹಿಳೆ, ಬಾಗವಾನ್‌ ಚಾಳದ 37 ವರ್ಷದ ಪುರುಷ ಹಾಗೂ ತಾಲೂಕಿನ ಬೆಳವಡಿ-3, ನೇಸರಗಿ, ಬುಡರಕಟ್ಟಿ, ಮದಲಬಾವಿ, ಎಂ.ಕೆ. ಹುಬ್ಬಳ್ಳಿ, ನೇಗಿನಹಾಳ, ನಯಾನಗರ್‌, ಹುಣಶೀಕಟ್ಟಿಯಲ್ಲಿ ತಲಾ ಒಂದೊಂದು ಕೇಸ್‌ ಪತ್ತೆಯಾಗಿವೆ. ಬೈಲಹೊಂಗಲ ಕೊರೊನನಾ ಚಿಕಿತ್ಸಾ ಕೇಂದ್ರದಿಂದ ಶುಕ್ರವಾರ 6 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ತಾಲೂಕು ಆರೋಗ್ಯಾಧಿ ಕಾರಿ ಡಾ| ಎಸ್‌.ಎಸ್‌. ಸಿದ್ದನ್ನವರ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next