Advertisement
ಸೆಪ್ಟೆಂಬರ್ ಅಂತ್ಯಕ್ಕೆ ದೇಶದ ಮಹಾನಗರಗಳಾದ ಪೂನಾ, ಮುಂಬೈ, ದೆಹಲಿ, ಚೆನ್ನೆಗಳಲ್ಲಿ ಸೋಂಕಿನ ತೀವ್ರತೆ ಇಳಿಕೆಯಾಯಿತು. ಆದರೆ,ಬೆಂಗಳೂರಿನಲ್ಲಿ ಮಾತ್ರ ದುಪ್ಪಟ್ಟಾಯಿತು. ಈ ವೇಳೆ ನಿತ್ಯ ಐದು ಸಾವಿರಕ್ಕೂ ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆದರೆ, ಗುಣಮುಖರ ಸಂಖ್ಯೆ ಎರಡು ಸಾವಿರ ಆಸುಪಾಸಿನಲ್ಲಿತ್ತು. ಇದರ ಪರಿಣಾಮ ಸಕ್ರಿಯ ಪ್ರಕರಣಗಳ ಸಂಖ್ಯೆ (ಪಾಸಿಟಿವ್ ಕೇಸ್) 65 ಸಾವಿರಕ್ಕೆ ಹೆಚ್ಚಳವಾದವು. ಅ. 8 ರಂದು ಮಹಾನಗರಗಳ ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನಕ್ಕೇರಿತು. ಈ ಮೂಲಕ ಹೆಚ್ಚು ಸೋಂಕಿತರಿರುವ ನಗರ ಎಂಬ ಅಪಖ್ಯಾತಿಗೂ ಒಳಗಾಗಿತ್ತು.
Related Articles
Advertisement
ಡಾ.ಬಾಲಾಜಿ ಪ್ರಸಾದ್ ಚಿಕಿತ್ಸೆಗೆ 25 ಲಕ್ಷ ರೂ. ನೆರವು :
ಬೆಂಗಳೂರು: ನೂರಕ್ಕೂ ಹೆಚ್ಚು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿ ” ಕೋವಿಡ್ ವಾರಿಯರ್ ಹೀರೋ’ ಎಂದೇ ಹೆಸರಾಗಿದ್ದ ಮೂತ್ರಪಿಂಡತಜ್ಞ ಡಾ. ಬಾಲಾಜಿ ಪ್ರಸಾದ್ ಅವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 25 ಲಕ್ಷ ರೂ. ನೀಡಲು ಸರ್ಕಾರ ನಿರ್ಧರಿಸಿದೆ. ನಗರದ ಡಾ.ಬಾಲಾಜಿ ಪ್ರಸಾದ್ ಅವರು 100ಕ್ಕೂ ಹೆಚ್ಚು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು. ಬಳಿಕ ಅವರಿಗೂ ಕೋವಿಡ್ ಕಾಣಿಸಿಕೊಂಡು ಶೇಷಾದ್ರಿಪುರದ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ. 37 ದಿನದಿಂದ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ 26 ದಿನಗಳಿಂದ ವೆಂಟಿಲೇಟರ್ ಅಳವಡಿಸಲಾಗಿದೆ. ಈ ನಡುವೆ ಅವರ ಶ್ವಾಸಕೋಶಕ್ಕೆ ಹಾನಿಯಾಗಿದ್ದರಿಂದ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದಕ್ಕಾಗಿ ಲಕ್ಷಾಂತರ ರೂ. ವೆಚ್ಚವಾಗಲಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಕೋರಿದ್ದರು. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದ ಸಚಿವ ಡಾ.ಕೆ.ಸುಧಾಕರ್ ಅವರು ನೆರವು ನೀಡಿಕೆ ಬಗ್ಗೆ ತ್ವರಿತ ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ಸಚಿವರ ಪ್ರಯತ್ನದ ಫಲವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 25 ಲಕ್ಷ ರೂ. ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳ ಪರಿಹಾರ ನಿಧಿ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.