Advertisement

ಮುದ್ದೇಬಿಹಾಳ ಕಸ್ತೂರಬಾ ವಸತಿ ಶಾಲೆಯ 11 ಮಕ್ಕಳಿಗೆ ಕೋವಿಡ್ ಪಾಸಿಟಿವ್

12:09 PM Jan 15, 2022 | Suhan S |

ಮುದ್ದೇಬಿಹಾಳ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದ ಹೊರವಲಯದಲ್ಲಿರುವ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯದ 100 ವಿದ್ಯಾರ್ಥಿನಿಯರ ಪೈಕಿ 11 ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

Advertisement

ಆದರೆ ಈ ವಿದ್ಯಾರ್ಥಿನಿಯರಿಗೆ ರೋಗ ಲಕ್ಷಣಗಳು ಇಲ್ಲದಿರುವುದು ಅಚ್ಚರಿ ಮೂಡಿಸಿದೆ. ನೆಗಡಿ, ಕೆಮ್ಮು, ಜ್ವರ ಇರುವ ವಿದ್ಯಾರ್ಥಿನಿಯರ ಆರ್ಟಿಪಿಸಿಆರ್ ತಪಾಸಣೆಯಲ್ಲಿ ಪಾಸಿಟಿವ್ ಬಂದಿಲ್ಲ. ಇವರಿಗೆ ಆರೋಗ್ಯ ಇಲಾಖೆಯಿಂದ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

ಹಾಸ್ಟೇಲಿನ ಒಂದು ಭಾಗದಲ್ಲಿ 80, ಇನ್ನೊಂದು ಭಾಗದಲ್ಲಿ 20 ವಿದ್ಯಾರ್ಥಿನಿಯರು ವಾಸವಿದ್ದಾರೆ. ಇವರಲ್ಲಿ 20 ವಿದ್ಯಾರ್ಥಿನಿಯರುಗ ವಾಸವಿರುವ ಭಾಗದಲ್ಲಿ ಯಾವುದೆ ತೊಂದರೆ ಕಾಣಿಸಿಕೊಂಡಿಲ್ಲ. 80 ವಿದ್ಯಾರ್ಥಿನಿಯರು ವಾಸವಿರುವೆಡೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿವೆ.

ಪಾಸಿಟಿವ್ ಕಂಡುಬಂದ ವಿದ್ಯಾರ್ಥಿನಿಯರನ್ನು ಇತರೆ ವಿದ್ಯಾರ್ಥಿಗಳಿಂದ ಪ್ರತ್ಯೇಕಿಸಿದ್ದು ಅವರನ್ನು ಮನೆಗಳಿಗೆ ಕಳಿಸಿ ಹೋಮ್ ಐಸೋಲೇಶನ್ನಿಗೆ ಕ್ರಮ ಕೈಕೊಳ್ಳಲು ಸಿದ್ದತೆ ನಡೆದಿವೆ. ಏತನ್ಮದ್ಯೆ ತಾಲುಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ ಅವರು ವಸತಿನಿಲಯಕ್ಕೆ ಭೇಟಿ ನೀಡಿ ಚಿಕಿತ್ಸೆ ಮತ್ತು ಮುಂಜಾಗರೂಕತೆಗೆ ಕ್ರಮ ಕೈಕೊಂಡಿದ್ದಾರೆ. ವಿದ್ಯಾರ್ತಿನಿಯರಿಗೆ ಬಿಸಿಯಾದ ಆಹಾರ, ಬಿಸಿ ನೀರು, ಶುದ್ಧ ನೀರು ಸೇರಿ ಹಲವು ಆರೋಗ್ಯಕ್ಕೆ ಪೂರಕ ಸೌಲಭ್ಯ ಒದಗಿಸಲು ವಸತಿನಿಲಯದ ಮೇಲ್ವಿಚಾರಕರಿಗೆ ಸೂಚಿಸಲಾಗಿದೆ.

ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಸ್ಥಳದಲ್ಲಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next