Advertisement

ಕೋವಿಡ್ ಸೋಂಕಿತರ ಜತೆಗೆ ಮರಣವೂ ಏರಿಕೆ

08:26 PM May 27, 2021 | Team Udayavani |

ಬಂಟ್ವಾಳ: ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗಗಳಲ್ಲಿಯೂ ಕೊರೊನಾ ವ್ಯಾಪಕವಾಗಿ ಹಬ್ಬಿದ್ದು, ಸುಮಾರು 20 ದಿನಗಳ ಅಂಕಿಅಂಶಗಳನ್ನು ಗಮಿಸಿದರೆ ಒಮ್ಮೆ ಪ್ರಕರಣಗಳು ಗಣನೀಯ ಏರಿಕೆಯಾಗಿದ್ದು, ಸದ್ಯಕ್ಕೆ ಸ್ವಲ್ಪ ಇಳಿಮುಖವಾಗಿದೆ. ಸೋಂಕಿನ ಜತೆಗೆ ಸಾವಿನ ಪ್ರಮಾಣವೂ ಏರಿದ್ದು, ಮೇ 3ಕ್ಕೆ ಗ್ರಾಮೀಣ ಭಾಗದಲ್ಲಿ 6 ಮಂದಿ ಮೃತಪಟ್ಟಿದ್ದರೆ ಮೇ 26ಕ್ಕೆ 44ಕ್ಕೇರಿದೆ.

Advertisement

ಮೇ 3ರ ಬಳಿಕ ತಾ.ಪಂ. ಪ್ರತಿನಿತ್ಯ ಗ್ರಾ.ಪಂ.ಗಳಿಂದ ವರದಿ ತರಿಸಿಕೊಂಡು ಫಾಲೋಅಪ್‌ ಮಾಡುತ್ತಿದೆ. ಮೇ 3ರ ಬಳಿಕ ಕೆಲವು ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದರೂ, ಸದ್ಯಕ್ಕೆ ಒಂದು ಸಾವಿರ ದಷ್ಟು ಸಕ್ರಿಯ ಪ್ರಕರಣಗಳಿವೆ. ಮೇ 26ರ ವರದಿ ಪ್ರಕಾರ ತಾಲೂಕಿನ 58 ಗ್ರಾ.ಪಂ.ಗಳ ಪೈಕಿ ಚೆನ್ನೈತ್ತೋಡಿ ಗ್ರಾ.ಪಂ.ನಲ್ಲಿ ಅತ್ಯಧಿಕ 89 ಸಕ್ರಿಯ ಪ್ರಕರಣಗಳಿದೆ. ಒಟ್ಟು 8 ಗ್ರಾ.ಪಂ.ಗಳಲ್ಲಿ 30ಕ್ಕೂ ಅಧಿಕ ಪ್ರಕರಣ ಗಳಿವೆ. ಒಟ್ಟು 18 ಗ್ರಾ.ಪಂ.ಗಳಲ್ಲಿ ಸಕ್ರಿಯ ಪ್ರಕರಣ 10ಕ್ಕಿಂತ ಕಡಿಮೆ ಇದ್ದು, ವಿಟ್ಲ ಮುಟ್ನೂರಿನಲ್ಲಿ ಸಕ್ರಿಯ ಪ್ರಕರಣಗಳಿಲ್ಲ.

ಮೃತಪಟ್ಟವರ ವಿವರ :

ಮೇ 3ರ ವರದಿ ಪ್ರಕಾರ, ಕೊಳ್ನಾಡು, ಪುದು, ಬಾಳೆಪುಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ತಲಾ ಇಬ್ಬರು ಮೃತಪಟ್ಟಿದ್ದರು. ಮೇ 26ರ ವರದಿ ಪ್ರಕಾರ, ಬಾಳೆಪುಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅತೀ ಹೆಚ್ಚು ಅಂದರೆ 4 ಮಂದಿ ಮೃತಪಟ್ಟಿದ್ದು, ಉಳಿದಂತೆ ಅಮ್ಟಾಡಿ, ತುಂಬೆ ಗ್ರಾ.ಪಂ.ನಲ್ಲಿ ತಲಾ 3 ಮಂದಿ, ಕರೋಪಾಡಿ, ಗೋಳ್ತ ಮಜಲು, ಕಾವಳಪಡೂರು, ಕೊಳ್ನಾಡು, ಮಂಚಿ, ಪುದು, ಉಳಿ ತಲಾ ಇಬ್ಬರು ಮೃತಪಟ್ಟಿದ್ದಾರೆ. ಬಾಳ್ತಿಲ, ಇಡಿRದು, ಇರಾ, ಕೇಪು, ಮಾಣಿ, ನರಿಂಗಾನ, ಪಂಜಿಕಲ್ಲು, ಪುಣಚ, ರಾಯಿ, ಸಜೀಪಮೂಡ, ಸಜೀಪಮುನ್ನೂರು, ಸರಪಾಡಿ, ವೀರಕಂಭ, ಮಣಿನಾಲ್ಕೂರು, ಇರ್ವತ್ತೂರು, ಬೋಳಂತೂರು, ಅರಳ, ನೆಟ್ಲಮುಟ್ನೂರು, ಸಾಲೆತ್ತೂರು ಹಾಗೂ ಕಳ್ಳಿಗೆ ಗ್ರಾ.ಪಂ.ಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಮೇ 26ರ ವರೆಗೆ ಅಳಿಕೆ, ಅನಂತಾಡಿ, ಬಡಗಬೆಳ್ಳೂರು, ಬಡಗಕಜೆಕಾರು, ಚೆನ್ನೈತ್ತೋಡಿ, ಕಡೇಶ್ವಾಲ್ಯ, ಕನ್ಯಾನ, ಕರಿಯಂಗಳ, ಕಾವಳಮೂಡೂರು, ಕೆದಿಲ, ಕುಕ್ಕಿಪಾಡಿ, ಕುರ್ನಾಡು, ಮೇರಮಜಲು, ನರಿಕೊಂಬು, ನಾವೂರು, ಫಜೀರು, ಪೆರ್ನೆ, ಪೆರುವಾಯಿ, ಪಿಲಾತಬೆಟ್ಟು, ಸಜೀಪನಡು, ಸಂಗಬೆಟ್ಟು, ವಿಟ್ಲಪಟ್ನೂರು, ವಿಟ್ಲ ಮುಟ್ನೂರು, ಅಮ್ಮುಂಜೆ, ಮಾಣಿಲ, ಬರಿ ಮಾರು, ಪೆರಾಜೆ, ಸಜೀಪಪಡು ಗ್ರಾ.ಪಂ.ನಲ್ಲಿ ಯಾರೂ ಕೊರೊನಾದಿಂದ ಮೃತ ಪಟ್ಟಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next