ಪಣಜಿ : ರಾಜ್ಯ ಸರ್ಕಾರ ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ವಿಧಿಸಿರುವ ಕೆಲ ನಿರ್ಬಂಧಗಳ ಹೊರತಾಗಿಯೂ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ.
ರಾಜ್ಯದಲ್ಲಿ ಕೋವಿಡ್ ಸಕ್ರೀಯ ಪ್ರಕರಣಗಳ ಸಂಖ್ಯೆ 10,000 ಗಡಿ ದಾಟಿದೆ. ಸದ್ಯ ಪ್ರತಿದಿನ 1000 ಕ್ಕೂ ಹೆಚ್ಚು ಜನರಿಗೆ ಕರೋನಾ ಸೋಂಕು ದೃಢಪಡುತ್ತಿದ್ದು ಆತಂಕ ಹೆಚ್ಚುವಂತೆ ಮಾಡಿದೆ.
ಗೋವಾ ರಾಜ್ಯದಲ್ಲಿ ಇದುವರೆಗೂ 11,25,058 ಜನರು ಕೋವಿಡ್ ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆ ಪಡೆದವರ ಶೇಖಡಾವಾರು ಪ್ರಮಾಣ ಶೇ 96 ರಷ್ಟಿದೆ. ಇನ್ನೂ ಸುಮಾರು 50,000 ಜನರು ಕೋವಿಡ್ ಎರಡನೇಯ ಲಸಿಕೆ ಪಡೆದುಕೊಂಡಿಲ್ಲ. 15 ರಿಂದ 18 ವರ್ಷದೊಳಗಿನ ಶೇ 68 ರಷ್ಟು ಮಕ್ಕಳು ಕೋವಿಡ್ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದರೂ ಕೂಡ ರಾಜ್ಯದಲ್ಲಿ ನೈಟ್‍ಕಫ್ರ್ಯೂ ಅಥವಾ ವೀಕೆಂಡ್ ಕಫ್ರ್ಯೂನಂತಹ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿಲ್ಲ. ಬದಲಾಗಿ ಸಭೆ ಸಮಾರಂಭಗಳಿಗೆ ಕೆಲ ನಿರ್ಬಂಧ ವಿಧಿಸಲಾಗಿದೆ.
ಇದನ್ನೂ ಓದಿ : ರೈಲ್ಲಿನಲ್ಲೇ ಮಹಿಳೆ ಆತ್ಮಹತ್ಯೆ ಯತ್ನ, ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಮಹಿಳೆಯ ರಕ್ಷಣೆ