ಮಾರ್ಚ್ 31 ರಿಂದ ಸತತವಾಗಿ ಐದು ದಿನಗಳು ಹೊಸ ಪ್ರಕರಣಗಳು ನಾಲ್ಕು ಸಾವಿರಕ್ಕೂ ಅಧಿಕ ವರದಿಯಾಗಿವೆ. ಭಾನುವಾರವು 1.2 ಲಕ್ಷ ಸೋಂಕು ಪರೀಕ್ಷೆಗಳಾಗಿದ್ದು, ಶೇ 3.8 ರಷ್ಟು ಪಾಸಿಟಿವಿಟಿ ದರ ಕಂಡು ಬಂದಿದೆ. ಅಂದರೆ, ಸೋಂಕು ಪರೀಕ್ಷೆಗೊಳಗಾದ 100 ಮಂದಿಯಲ್ಲಿ ನಾಲ್ಕು ಮಂದಿಗೆ ಸೋಂಕು ತಗುಲಿದೆ. ಇನ್ನು ಮರಣ ದರ ಶೇ 0.3 ರಷ್ಟು ದಾಖಲಾಗಿದೆ. ಶನಿವಾರಕ್ಕೆ ಹೋಲಿಸಿದರೆ ಹೊಸ ಪ್ರಕರಣಗಳು 200, ಸಾವು ನಾಲ್ಕು ಕಡಿಮೆಯಾಗಿವೆ.
Advertisement
ಭಾನುವಾರ ಅತಿ ಹೆಚ್ಚು ಬೆಂಗಳೂರು 2787, ಮೈಸೂರು 260, ಕಲಬುರಗಿ 170, ಬೆಂಗಳೂರು ಗ್ರಾಮಾಂತರ 155, ಬೀದರ್ 147, ತುಮಕೂರು 107, ಹಾಸನ 104, ಧಾರವಾಡ 100, ದಕ್ಷಿಣ ಕನ್ನಡ 83, ಮಂಡ್ಯ 79, ಉಡುಪಿ 73 ಪ್ರಕರಣಗಳು ವರದಿಯಾಗಿವೆ. ಹಾವೇರಿ, ಕೊಪ್ಪಳ, ಕೊಡಗು, ವಿಜಯಪುರ, ಯಾದಗಿರಿ, ರಾಮನಗರ, ಗದಗದಲ್ಲಿ ಪ್ರಕರಣಗಳು 20ಕ್ಕೂ ಕಡಿಮೆ ದಾಖಲಾಗಿವೆ. ಬೆಂಗಳೂರು 8, ಕಲಬುರಗಿ 3, ಧಾರವಾಡ 2, ಹಾಸನ ಮತ್ತು ತುಮಕೂರು ತಲಾ ಒಬ್ಬರು ಸೇರಿ 15 ಸೋಂಕಿತರು ಮೃತಪಟ್ಟಿದ್ದಾರೆ.