Advertisement
ಹೊನ್ನಾವರ: ಕಳೆದೆರಡು ತಿಂಗಳಲ್ಲಿ ತಾಲೂಕು ಆಡಳಿತ ಸಂಪ್ರದಾಯದಂತೆ ಜಾತ್ರೆ ಆಚರಿಸಲು, 50 ಜನ ಮಿತಿಯಲ್ಲಿ ಮದುವೆ ನಡೆಸಲು ಅನುಮತಿ ಕೊಟ್ಟಿದ್ದೇ ತಪ್ಪಾಯಿತೇನೋ ಎಂಬಂತೆ ಹಳ್ಳಿಗಳಲ್ಲಿ ಕೊರೊನಾ ಕಾಡ್ಗಿಚ್ಚಿನಂತೆ ಹಬ್ಬಿದೆ.
Related Articles
Advertisement
ಬಾಯ್ತುಂಬ ರಸಗವಳ ತುಂಬಿಕೊಂಡು ಅದನ್ನು ಉಗಿದರೆ ಅಲ್ಲಿ ಇನ್ನೊಬ್ಬ ಬಾಯೊ¤ಳೆದರೆ ಅವನಿಗೆ ಸೋಂಕು ಖಂಡಿತ. ಕವಳದ ಸ್ಪ್ರೆà ಕೊರೊನಾ ವಾಹಕ ಎಂದು ಡಾ| ಪ್ರಕಾಶ ನಾಯ್ಕ, ಡಾ| ಗಜಾನನ ಭಟ್ ಹೇಳುತ್ತಾರೆ. ಕೊರೊನಾ ಎರಡನೇ ಅಲೆಯನ್ನು ಹಗುರವಾಗಿ ಪರಿಗಣಿಸಿದ ಕಾರಣ ಗಂಭೀರ ಪರಿಸ್ಥಿತಿ ಉಂಟಾಗಿದೆ.
ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ 14ಜನ ಮೃತಪಟ್ಟಿದ್ದಾರೆ. 791ಸೋಂಕಿತರು ಪತ್ತೆಯಾಗಿದ್ದಾರೆ. 752ಜನ ಗುಣಮುಖರಾಗಿದ್ದಾರೆ. ಹಳ್ಳಿಯ ಮನೆಮನೆಗಳಲ್ಲಿ ಜನ ಟಿವಿ ನೋಡುತ್ತಾರೆ. ಆಸ್ಪತ್ರೆಯಲ್ಲಿ ಜಾಗವಿಲ್ಲ, ಆಕ್ಸಿಜನ್ ಇಲ್ಲ, ಆಂಬ್ಯುಲೆನ್ಸ್ ಇಲ್ಲ, ಕೊನೆಗೆ ಸತ್ತರೆ ಹೆಣ ಸುಡಲೂ ಸ್ಥಳವಿಲ್ಲ. ಗಂಗಾನದಿಯಲ್ಲಿ ಹೆಣ ತೇಲಿಬರುತ್ತಿದೆ. ಈ ಪರಿಸ್ಥಿತಿಯನ್ನು ನೋಡಿಯೂ ಹಳ್ಳಿಯ ಜನ ಜ್ವರ ಬಂದರೆ ಔಷಧ ಅಂಗಡಿಗೆ ಹೋಗಿ ಡೋಲಾ 650, ವಿಕ್ಸ್‌ಎಕ್ಷನ್500, ಫೆರಾಸಿಟಮೋಲ್ ನುಂಗುತ್ತಾರೆ.
ಮರುದಿನ ಹಳ್ಳಿಯ ವೈದ್ಯರಲ್ಲಿ ಹೋಗುತ್ತಾರೆ. ಕುಟುಂಬ ವೈದ್ಯನ ಪಾಲಿಗೆ ರೋಗಿ ಕಾಮಧೇನು. ಅವರು ಒಂದಿಷ್ಟು ಗುಳಿಗೆ ಕೊಡುತ್ತಾರೆ, ಕೊನೆಗೆ ಉಸಿರು ಬಿಡಲಾಗದ ಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆಗೆ ಬರುವಾಗಲೇ ಬೆಡ್ ಉಂಟಾ, ಆಕ್ಸಿಜನ್ ಉಂಟಾ, ವೆಂಟಿಲೇಟರ್ ಉಂಟಾ, ಡಾಕ್ಟರ್ ಒಳಗೆ ಬರುತ್ತಾರಾ ಎಂದು ಕೇಳುತ್ತಾ ಬರುತ್ತಾರೆ, ಅವರಿವರಿಂದ ಫೋನ್ ಮಾಡಿಸುತ್ತಾರೆ, ಚಡಪಡಿಸುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ವೈದ್ಯರು ಜೀವ ಉಳಿಸಲು ತುಂಬ ಶ್ರಮಪಡಬೇಕಾಗುತ್ತದೆ. ವೈದ್ಯಕೀಯ ಸಿಬ್ಬಂದಿಯದೂ, ಅವರ ಸಹಾಯಕರದೂ ಒಂದು ಜೀವ. ವರ್ಷದಿಂದ ದಣಿವಿಲ್ಲದೇ ದುಡಿಯುತ್ತಿದ್ದಾರೆ, ಜನ ಇದನ್ನು ಅರ್ಥಮಾಡಿಕೊಳ್ಳಬೇಕು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್ ಮತ್ತು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಎಲ್ಲ ಶಾಸಕರು ವ್ಯವಸ್ಥೆಗೆ ಬೆಂಬಲವಾಗಿ ನಿಂತು ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ವ್ಯಾಕ್ಸಿನ್ ಬರುತ್ತಲೇ ಇದೆ, ಅವಸರ ಮಾಡದೆ ಸುಮ್ಮನೆ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕೋವಿಡ್, ಸೋಂಕು,