ವಾಷಿಂಗ್ಟನ್: ವಿಶ್ವದಾದ್ಯಂತ ಕೋವಿಡ್ -19 ವೈರಸ್ ಹರಡುವಿಕೆ ಮುದುವರಿದಿದೆ. ಗುರುವಾರ ಮಧ್ಯಾಹ್ನದ ವೇಳೆಗೆ ಜಗತ್ತಿನಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ 84 ಲಕ್ಷ ದಾಟಿದೆ.
ಗುರುವಾರ ಮಧ್ಯಾಹ್ನದ ವೇಳೆಗೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 84,25,667ಕ್ಕೂ ಅಧಿಕ ಏರಿಕೆಯಾಗಿದೆ. ಅಲ್ಲದೆ 4,51,831 ಮಂದಿ ಕೋವಿಡ್ -19 ವೈರಸ್‌ಗೆ ಬಲಿಯಾಗಿದ್ದಾರೆ. ಈ ವರೆಗೆ ಜಗತ್ತಿನಲ್ಲಿ 44,34,075 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 35,39,761 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಶ್ವದ ದೊಡ್ಡಣ್ಣ ಅಮೆರಿಕ ಸೋಂಕಿತರ ಪಟ್ಟಿಯಲ್ಲೂ ಮುಂದಿದ್ದು, ಅಲ್ಲಿ ಈ ವರೆಗೆ 22,34,854 ಕೊರೊನಾ ಪ್ರಕರಣಗಳು ಪತ್ತೆ ಯಾಗಿವೆ. 1,19,943 ಮಂದಿ ಮೃತಪಟ್ಟಿದ್ದಾರೆ. 9,18,796 ಮಂದಿ ಗುಣಮುಖರಾಗಿದ್ದು, 11,96,115 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿತರ ಪಟ್ಟಿಯಲ್ಲಿ ಬ್ರಜಿಲ್, ರಷ್ಯಾ, ಭಾರತ ಕ್ರಮವಾಗಿ ಎರಡು, ಮೂರು, ನಾಲ್ಕನೇ ಸ್ಥಾನವನ್ನು ಹೊಂದಿದೆ. ಬ್ರಜಿಲ್‌ನಲ್ಲಿ 9,60,309, ರಷ್ಯಾದಲ್ಲಿ 5,61,091, ಭಾರತದಲ್ಲಿ 3,68,557 ಮಂದಿ ಸೋಂಕಿತರು ಪತ್ತೆ ಯಾಗಿದ್ದಾರೆ.