Advertisement
ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 174 , ಹರಿಹರದಲ್ಲಿ 28, ಜಗಳೂರಿನಲ್ಲಿ 17, ಚನ್ನಗಿರಿಯಲ್ಲಿ 42, ಹೊನ್ನಾಳಿಯಲ್ಲಿ 36 ಹಾಗೂ ಹೊರ ಜಿಲ್ಲೆಯ 12 ಜನರು ಒಳಗೊಂಡಂತೆ 309 ಸೋಂಕಿತರು ಗುಣಮುಖರಾಗಿದ್ದಾರೆ.
Related Articles
Advertisement
ಇದನ್ನೂ ಓದಿ :ದ.ಕ. ಜಿಲ್ಲೆಯಲ್ಲಿ 1006 ಮಂದಿಗೆ ಕೋವಿಡ್ ದೃಢ; ದಾಖಲೆಯ 15 ಮಂದಿ ಸಾವು
ಜಿಲ್ಲೆಯಲ್ಲಿ ಕೊರೊನಾದಿಂದ ಹತ್ತು ಜನರು ಮೃತಪಟ್ಟಿದ್ದಾರೆ. ದಾವಣಗೆರೆ ತಾಲೂಕಿನ ಅಣಬೇರು ಗ್ರಾಮದ 56 ವರ್ಷದ ವೃದ್ಧೆ, ಕೊಳೇನಹಳ್ಳಿ ಗ್ರಾಮದ 38 ವರ್ಷದ ವ್ಯಕ್ತಿ, ದೊಡ್ಡಬಾತಿಯ 62 ವರ್ಷದ ವೃದ್ಧ, ನೇರ್‍ಲಿಗೆ ಗ್ರಾಮದ 47 ವರ್ಷದ ಮಹಿಳೆ, ಆಲೂರು ಗ್ರಾಮದ 60 ವರ್ಷದ ವೃದ್ಧ, ಗೋಪನಾಳ್ ಗ್ರಾಮದ 30 ವರ್ಷದ ಮಹಿಳೆ, ಆನಗೋಡು ಗ್ರಾಮದ 63 ವರ್ಷದ ವೃದ್ಧೆ, ದಾವಣಗೆರೆಯ ಸರಸ್ವತಿ ಬಡಾವಣೆಯ 81 ವರ್ಷದ ವೃದ್ಧೆ, ಚನ್ನಗಿರಿ ತಾಲೂಕಿನ ಹಿರೇಕೋಗಲೂರು ಗ್ರಾಮದ 60 ವರ್ಷದ ವೃದ್ಧೆ, ಹೊನ್ನಾಳಿ ತಾಲೂಕಿನ ರಾಂಪುರ ಗ್ರಾಮದ 58 ವರ್ಷದ ವ್ಯಕ್ತಿ ಮೃತಪಟ್ಟವರು. ಜಿಲ್ಲೆಯಲ್ಲಿ ಈವರೆಗೆ ಕೊರೊನಾದಿಂದ ಜಿಲ್ಲೆಯಲ್ಲಿ 476 ಜನರು ಸಾವನ್ನಪ್ಪಿದ್ದಂತಾಗಿದೆ.
ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ 99 ಸೋಂಕಿತರು ಸಾಮಾನ್ಯ, 475 ಸೋಂಕಿತರು ಆಕ್ಸಿಜನ್, 18 ಸೋಂಕಿತರು ಎನ್‌ಐವಿ, 48 ಸೋಂಕಿತರು ವೆಂಟಿಲೇಟರ್ 28 ಸೋಂಕಿತರು ವೆಂಟಿಲೇಟರ್ ರಹಿತ, 419 ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 530 ಸೋಂಕಿತರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಇದ್ದಾರೆ.
ಶುಕ್ರವಾರ ಜಿಲ್ಲೆಯಲ್ಲಿ ಯಾವುದೇ ಬ್ಯ್ಲಾಕ್ ಫಂಗಸ್ ಪ್ರಕರಣ ಕಂಡು ಬಂದಿಲ್ಲ. ಈವರೆಗೆ ಜಿಲ್ಲೆಯಲ್ಲಿ 91 ಜನರಲ್ಲಿ ಬ್ಯ್ಲಾಕ್ ಫಂಗಸ್ ಕಂಡು ಬಂದಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ 23, ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ13, ಬಾಪೂಜಿ ಆಸ್ಪತ್ರೆಯಲ್ಲಿ ಒಬ್ಬರು ಒಳಗೊಂಡಂತೆ 37 ಜನರು ಗುಣಮುಖರಾಗಿದ್ದಾರೆ. ಜಿಲ್ಲಾ ಆyಸ್ಪತ್ರೆಯಲ್ಲಿ 31, ಎಸ್.ಎಸ್. ಹೈಟೆಕ್‌ನಲ್ಲಿ 21, ಬಾಪೂಜಿ ಮತ್ತು ಕಾಲೇಜ್ ಆಫ್ ಡೆಂಟಲ್ ಸೈನ್ಸೆಸ್‌ನಲ್ಲಿ ತಲಾ ಒಬ್ಬರು ಒಳಗೊಂಡಂತೆ 54 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.