Advertisement

ಕೋವಿಡ್ ಕೇರ್‌ ಸೆಂಟರ್‌ ಆರಂಭ ಅಗತ್ಯ: ಖಾಶೆಂಪುರ

12:15 PM Jul 20, 2020 | Suhan S |

ಬೀದರ: ಜಿಲ್ಲೆಯಲ್ಲಿ ಕೋವಿಡ್ ಕೇಸ್‌ ಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌-19 ಕೇರ್‌ ಸೆಂಟರ್‌ (ಸಿಸಿಸಿ) ತೆರೆಯುವುದು ಅವಶ್ಯಕವಾಗಿದೆ ಎಂದು ಬೀದರ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ ಜಿಲ್ಲಾ ಧಿಕಾರಿ ಮತ್ತು ಡಿಎಚ್‌ಒಗೆ ಸಲಹೆ ನೀಡಿದ್ದಾರೆ.

Advertisement

ಪ್ರಸ್ತಾವನೆಗೆ ಸಂಬಂಧಿಸಿದಂತೆ ನಗರದ ಹೊರವಲಯದ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿವಿ ಆವರಣದಲ್ಲಿರುವ ರೈತರ ವಸತಿ ನಿಲಯವನ್ನು ಕೋವಿಡ್ ಕೇರ್‌ ಸೆಂಟರ್‌ ಆಗಿ ಮಾಡುವ ಸಲುವಾಗಿ ಕಾಯ್ದಿರಿಸಲಾಗಿತ್ತು. ಅದರಂತೆಯೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಇಂದು ಸ್ಥಳ ಪರಿಶೀಲನೆ ಮಾಡಿ ಕೋವಿಡ್ ಕೇರ್‌ ಸೆಂಟರ್‌

ಸ್ಥಾಪಿಸುವ ಕುರಿತು ಚರ್ಚಿಸಲಾಯಿತು. ಜಿಲ್ಲೆಯಲ್ಲಿ ಕೋವಿಡ್ ವೈರಸ್‌ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಕೋವಿಡ್ ಕೇರ್‌ ಸೆಂಟರ್‌ಗಳ ಅವಶ್ಯಕತೆ ಇದೆ. ಕೇರ್‌ ಸೆಂಟರ್‌ ತೆರೆಯುವ ಮೂಲಕ ಉತ್ತಮ ವ್ಯವಸ್ಥೆ ಕಲ್ಪಿಸಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ ಅಧಿಕಾರಿಗಳಿಗೆ ತಿಳಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌., ಇದು ಸಿಸಿಸಿಗೆ ಸೂಕ್ತವಾದ ಸ್ಥಳವಾಗಿದ್ದು, ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಿ ಆದಷ್ಟು ಬೇಗ ಕೋವಿಡ್ ಕೇರ್‌ ಸೆಂಟರ್‌ ಸ್ಥಾಪಿಸುವಂತೆ ಡಿಎಚ್‌ಒ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಡಿಎಚ್‌ಒ ವಿ.ಜಿ. ರೆಡ್ಡಿ, ಆರೋಗ್ಯ ಇಲಾಖೆ ಅಧಿಕಾರಿಗಳು, ಪಶು ವಿವಿ ಅಧಿಕಾರಿಗಳು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next