Advertisement

ಪ್ರತಿ ಗ್ರಾಮಪಂಚಾಯ್ತಿಗೆ ಕೋವಿಡ್‌  ಕ್ಯಾಪ್ಟನ್  ನಿಯೋಜನೆ

05:15 PM May 26, 2021 | Team Udayavani |

ಚಾಮರಾಜನಗರ: ಗ್ರಾಮೀಣ ಪ್ರದೇಶಗಳಲ್ಲಿಕೋವಿಡ್‌ ಸೋಂಕು ಹರಡುವುದನ್ನು ತಡೆಗಟ್ಟಿಕೊರೊನಾ ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ವಿನೂತನ ಚಾಮರಾಜನಗರ ತಾಲೂಕುಕೋವಿಡ್‌ ಕ್ಯಾಪ್ಟನ್‌ ಕಾರ್ಯಕ್ರಮಕ್ಕೆಮಂಗಳವಾರ ಚಾಲನೆ ನೀಡಲಾಯಿತು.

Advertisement

ಜಿಲ್ಲಾಡಳಿತ ಭವನ ಆವರಣದ ಮುಂಭಾಗದಲ್ಲಿ ಮಂಗಳವಾರ ಕೋವಿಡ್‌ ಕ್ಯಾಪ್ಟನ್‌ನೂತನಕಾರ್ಯಕ್ರಮಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ, ಜಿಲ್ಲಾಧಿಕಾರಿ ಡಾ. ಎಂ.ಆರ್‌.ರವಿ,ಎಸ್ಪಿ ದಿವ್ಯಾ, ಜಿಪಂ ಸಿಇಒ ಹರ್ಷಲ್‌ಭೋಯರ್‌ ನಾರಾಯಣ್‌ ರಾವ್‌,ಹೆಚ್ಚುವರಿಡೀಸಿ ಕಾತ್ಯಾಯಿನಿಚಾಲನೆ ನೀಡಿದರು.

ಚಾಮರಾಜನಗರ ತಾಲೂಕಿನ ಪ್ರತಿ ಗ್ರಾಮಪಂಚಾಯಿತಿಗೆ ಒಬ್ಬ ಕೋವಿಡ್‌ ಕ್ಯಾಪ್ಟನ್‌ನಿಯೋಜಿಸಿದ್ದು ಗ್ರಾಮೀಣಭಾಗದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್‌ ತಡೆಗಟ್ಟುವನಿಟ್ಟಿನಲ್ಲಿ ಇವರು ಕಾರ್ಯನಿರ್ವಹಿಸಲಿದ್ದಾರೆ.ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಪಾಸಿಟಿವಿಟಿಕಡಿಮೆ ಮಾಡುವುದು, ರೋಗಿಗಳನ್ನು ತಕ್ಷಣತಪಾಸಣೆ ಮಾಡಿಸುವುದು, ಮರಣದ ಪ್ರಮಾಣ ತಗ್ಗಿಸುವುದು, ಜನರಲ್ಲಿ ವಿಶ್ವಾಸ ಮೂಡಿಸುವುದು ವಿಶೇಷವಾಗಿ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಉಂಟು ಮಾಡುವುದು, ಕೋವಿಡ್‌ ಕ್ಯಾಪ್ಟನ್‌ ಕಾರ್ಯಕ್ರಮದಮಹತ್ತರ ಉದ್ದೇಶವಾಗಿದೆ.

ಈ ವೇಳೆತಹಶೀಲ್ದಾರ್‌ ಚಿದಾನಂದ ಗುರುಸ್ವಾಮಿ,ನೋಡೆಲ್‌ ವೀರಭದ್ರಯ್ಯ, ಹೊನ್ನೇಗೌಡಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next