Advertisement

ಕೋವಿಡ್ ಜಾಗೃತಿ ಮೂಡಿಸಿ ಮದುವೆಯಾದ ಪೊಲೀಸ್‌ ಪೇದೆ

12:32 PM May 30, 2020 | Suhan S |

ಅಥಣಿ: ತಾಲೂಕಿನ ಜನವಾಡ ಗ್ರಾಮದಲ್ಲಿ ನಡೆದ ಮದುವೆಯಲ್ಲಿ “ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹರಿಸಿ ಸುರಕ್ಷಿತವಾಗಿರಿ, ಜೀವನ ಅಮೂಲ್ಯವಾದದ್ದು, ಮಾಸ್ಕ್ ಹಾಗೂ ಸ್ಯಾನಿಟೈಸರ್‌ ಸಮರ್ಪಕವಾಗಿ ಬಳಸಿ’ ಘೋಷಣೆ ಬರೆದ ಪೋಸ್ಟರ್‌ ಹಿಡಿದ ವಧು-ವರರು ಮಾಸ್ಕ್ ಧರಿಸಿ ಕೋವಿಡ್ ಕುರಿತು ಜಾಗೃತಿ ಮೂಡಿಸಿದ್ದು ಗಮನ ಸೆಳೆಯಿತು.

Advertisement

ಮೂಲತಃ ಬೆಂಗಳೂರಿನ ಬೆಳಂದೂರು ಪೊಲೀಸ್‌ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ರಾಮು ಕಾಂಬಳೆ ಅವರು ಮೊದಲೇ ನಿಶ್ಚಯವಾದಂತೆ ದೀಪಾ ಕಾಂಬಳೆ ಎಂಬುವರೊಂದಿಗೆ ಸಪ್ತಪದಿ ತುಳಿದರು. ಇಲ್ಲಿಯೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡು ಮೆಚ್ಚುಗೆ ಪಾತ್ರವಾಗಿದ್ದಾರೆ.ಈ ವೇಳೆ ತೇರದಾಳ ಪೊಲೀಸ್‌ ಠಾಣೆಯ ಪಿಎಸ್‌ಐ ವಿಜಯ ಕಾಂಬಳೆ, ಸಂತೋಷ ಬಡಕಂಬಿ, ಚೇತನ ಶಾನವಾಡ, ನಾಗರಾಜ ಕಟ್ಟಿಮನಿ, ವಿಜಯ ಹೊಸಮನಿ, ಆದಿನಾಥ ಮುತ್ತೂರ, ಗೌತಮ ದೊಡಮನಿ, ಅಶೋಕ ವಾಜಂತ್ರಿ, ಯಮನಪ್ಪ ಬೋದ್ಲಿ, ಸಾಗರ ಮಾಲಾಪೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next