Advertisement

ಕೋವಿಡ್ ತಡೆಗೆ ಪ್ರತಿಜ್ಞೆ , ಕಿರು ನಾಟಕ

04:01 PM Nov 08, 2020 | Suhan S |

ಮೈಸೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನೆ ಸಂಸ್ಥೆ ಹಾಗೂ ಕೇಂದ್ರ ಸರ್ಕಾರದ ವಾರ್ತೆ ಹಾಗೂ ಪ್ರಸಾರ ಇಲಾಖೆ (ಕ್ಷೇತ್ರ ಜನಸಂಪರ್ಕದ ಕಾರ್ಯಾಲಯ) ಸಹಯೋಗದಲ್ಲಿ ಕೋವಿಡ್‌-19 ಕುರಿತು ಪ್ರತಿಜ್ಞಾ ವಿಧಿ ತೆಗೆದುಕೊಳ್ಳುವ ಕಾರ್ಯಕ್ರಮ ಹಾಗೂ ಸ್ನೇಹಜೀವಿ ಕಲಾತಂಡದಿಂದ ಕೋವಿಡ್ ಕುರಿತು ಮುಂಜಾಗ್ರತೆ ತೆಗೆದುಕೊಳ್ಳುವ ಕಿರು ನಾಟಕ ಪ್ರದರ್ಶನ ಮತ್ತು ಜನಪದ ಹಾಡಿನ ಮೂಲಕ ಅರಿವುಕಾರ್ಯಕ್ರಮ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

Advertisement

ನಗರದ ಜಯದೇವ ಆಸ್ಪತ್ರೆ ಮುಂಭಾಗ ಮತ್ತು ಕುಂಬಾರಕೊಪ್ಪಲಿನ ಸಿದ್ಧಾಪ್ಪಾಜಿ ದೇವಸ್ಥಾನದ ಆವರಣದಲ್ಲಿ ಹಾಗೂ ಹೆಬ್ಟಾಳ ಸೂರ್ಯ ಬೇಕರಿ ಸರ್ಕಲ್‌ ಹತ್ತಿರ ಕಾರ್ಯಕ್ರಮವನ್ನು ಸಾರ್ವಜನಿಕರ ಸಹಕಾರದಿಂದ ಯಶಸ್ವಿಯಾಗಿ ಪ್ರದರ್ಶನವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಮೈಸೂರಿನ ಶ್ರೀಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್‌. ಸದಾನಂದ, ಹರ್ಷ ಬಸಪ್ಪ, ಡಾ. ಸಂತೋಷ್‌, ಪಾಲಿಕೆ ಸದಸ್ಯರಾದ ಉಷಾ ಕುಮಾರ್‌, ನರ್ಸಿಂಗ್‌ ಸೂಪರ್ಡೆಂಟ್‌ಕೆ.ಹರೀಶ್‌ಕುಮಾರ್‌,ಕ್ಷೇತ್ರಜನಸಂಪರ್ಕ ಅಧಿಕಾರಿ ದರ್ಶನ್‌, ವಾಣಿ, ಸೈಯದ್‌, ಯೋಗಾನಂದ್‌, ರಮೇಶ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮೈಸೂರು: ಎರಡಂಕಿಗೆ ಕುಸಿದ ಕೋವಿಡ್ ಸೋಂಕು :

ಕೆಲ ತಿಂಗಳ ಬಳಿಕ ಜಿಲ್ಲೆಯಲ್ಲಿ ನೂರರ ಒಳಗೆ ಪಾಸಿಟಿವ್‌ ಪ್ರಕರಣ ವರದಿಯಾಗಿದ್ದು ಎರಡಂಕಿಗೆ ಕುಸಿದಿದೆ. ಜೊತೆಗೆ ಸಕ್ರಿಯ ಸೋಂಕಿತರ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ.

Advertisement

ಶನಿವಾರ ಜಿಲ್ಲೆಯಲ್ಲಿ 79 ಮಂದಿಗೆ ಸೋಂಕು ದೃಢಪಟ್ಟಿದ್ದರೆ, ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ 199 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಶನಿವಾರ ಹೊಸದಾಗಿ 79 ಪ್ರಕರಣಗಳು ದಾಖಲಾಗಿದ್ದು,ಜಿಲ್ಲೆಯಒಟ್ಟುಸೋಂಕಿತರ ಸಂಖ್ಯೆ 48,620ಕ್ಕೆ ಏರಿಕೆಯಾಗಿದೆ.

ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 51, ಉಸಿರಾಟದ ತೊಂದರೆ ಇರುವ 19, ವಿಷಮಶೀತ ಜ್ವರದ ಲಕ್ಷಣವಿರುವ 1 ಹಾಗೂ ಇತರೆ 08 ಮಂದಿಗೆ ಸೋಂಕು ತಗುಲಿದೆ. ಸದ್ಯ ಜಿಲ್ಲೆಯಲ್ಲಿ 1,005 ಮಂದಿ ಸಕ್ರಿಯ ಸೋಂಕಿತರಿದ್ದುವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 199 ಮಂದಿ ಗುಣಮುಖರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 46,643ಕ್ಕೆ ಏರಿಕೆಯಾಗಿದೆ.

ಜತೆಗೆ ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದ2ಮಂದಿಸೋಂಕಿತರು ಚಿಕಿತ್ಸೆಫ‌ಲಿಸದೆಮೃತಪಟ್ಟಿದ್ದು,ಇದರೊಂದಿಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 972ಕ್ಕೆ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next