Advertisement
ಬೆಳಗ್ಗೆ ಹೊತ್ತು ಸೊಪ್ಪು, ತರಕಾರಿ ವ್ಯಾಪಾರಕ್ಕಾಗಿ ಬರುವ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ,ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವುದನ್ನುಪರಿಶೀಲಿಸಲಾಯಿತು.
Related Articles
Advertisement
ಬೇಕಾದಷ್ಟೇ ತರಿಸಿಕೊಳ್ಳಿ: ಅಲ್ಲಿವರೆಗೂ ತಕ್ಷಣಕ್ಕೆ ಇಷ್ಟುದೊಡ್ಡ ಮಟ್ಟದ ವ್ಯಾಪಾರ ವಹಿವಾಟನ್ನು ತಾತ್ಕಾಲಿಕವಾಗಿ ಬೇರೆಕಡೆಗೆ ಸ್ಥಳಾಂತರಿಸಿ ವ್ಯವಸ್ಥೆಗೊಳಿಸುವುದುಸಾಧ್ಯವಾಗುವುದಿಲ್ಲವೆಂದು ಮಳೆಗಾಲ ಇರುವುದರಿಂದ ಟ್ರಕ್ಕುಗಳ ಓಡಾಟಕ್ಕೆ ತೊಂದರೆ ಆಗುತ್ತದೆ. ಆದಕಾರಣ ಮಾರುಕಟ್ಟೆ ಪ್ರಾಂಗಣದ ಒಳಗೆ ವ್ಯವಹರಿಸುವದಲ್ಲಾಳಿ ಮಂಡಿಯವರು ಅವರಿಗೆ ಇರುವ ಸ್ಥಳಾವಕಾಶದಲ್ಲಿ ಮಾತ್ರ ರೈತರಿಂದ ಟೊಮೆಟೋ ತರಿಸಿಕೊಳ್ಳಬೇಕು, ಹೆಚ್ಚುವರಿ ಟೊಮೆಟೋ ಬರುವ ನಿರೀಕ್ಷೆಇದ್ದಲ್ಲಿ ಅದಕ್ಕೆ ಸೂಕ್ತ ಸ್ಥಳಾವಕಾಶ ವ್ಯವಸ್ಥೆಯನ್ನುಮಂಡಿ ಯವರೇ ಮಾಡಿಕೊಳ್ಳಬೇಕೆಂದು ಸೂಚಿಸಲಾಯಿತು.
ಹೊರ ರಾಜ್ಯದಿಂದ ಬರುವ ವ್ಯಾಪಾರಸ್ಥರು,ಹಮಾ ಲರು ಕಡ್ಡಾಯವಾಗಿ ಕೋವಿಡ್ ಟೆಸ್ಟ್, ವ್ಯಾಕ್ಸಿನೇಶನ್ ಮಾಡಿಸಿಕೊಳ್ಳಬೇಕು. ಇದನ್ನು ದಲ್ಲಾಳಿಮಂಡಿ ಯ ವರು ಖಾತರಿಪಡಿಸಿಕೊಳ್ಳಲುಸೂಚಿಸಲಾಯಿತು.ಸಮಿತಿ ಉಪಾಧ್ಯಕ್ಷ ಎಲ್.ವೆಂಕಟೇಶಪ್ಪ, ಮಾಜಿಅಧ್ಯಕ್ಷ ಟಮಕ ಬಿ.ವೆಂಕಟೇಶಪ್ಪ, ಸದಸ್ಯರಾದ ಸಿ.ಎಂ.ಮಂಜುನಾಥ, ಸಿ.ಎನ್.ರವಿಕುಮಾರ್, ಎ.ಎನ್.ಆರ್.ದೇವರಾಜ್, ನಾರಾಯಣಸ್ವಾಮಿ, ಕೆ.ರವಿಶಂಕರ್, ಭಾಗ್ಯಮ್ಮ, ಆರ್.ಚಂದ್ರೇಗೌಡ, ಎಸ್.ವಿ.ವೆಂಕಟಾಚಲಪತಿ, ಸಹಾಯಕ ನಿರ್ದೇಶಕರು, ಸಮಿತಿಕಾರ್ಯದರ್ಶಿ ಟಿ.ಎಸ್.ರವಿಕುಮಾರ್ ಉಪಸ್ಥಿತರಿದ್ದರು.
ಮಂಜುನಾಥ್