Advertisement
ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕರು, ಕುಂದಾಪುರ ವಿಧಾನಸಭಾ ಕ್ಷೇತ್ರ:
Related Articles
Advertisement
ಹಾಸಿಗೆಗಳ ಸರಕಾರಿ ಕೋವಿಡ್ ಆಸ್ಪತ್ರೆ ಅಲ್ಲದೇ, ಕುಂದಾಪುರ ಹಳೆ ಆದರ್ಶ ಆಸ್ಪತ್ರೆಯನ್ನು 60 ಹಾಸಿಗೆಗಳ ಆಕ್ಸಿಜನ್ ಬೆಡ್‌ಗಳಿರುವ ಸರಕಾರಿ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. ಕಳೆದ ಬಾರಿ ಇದ್ದ ವಿರೋಧ ಈ ಬಾರಿ ಇಲ್ಲ. ಬಿಸಿಎಂ ಹಾಸ್ಟೆಲ್‌ನಲ್ಲಿ ರೆಡ್‌ಕ್ರಾಸ್ ಮೂಲಕ 75 ಹಾಸಿಗೆಗಳ ಐಸೋ ಲೇಶನ್ ಸೆಂಟರ್ ತೆರೆಯಲಾಗಿದೆ. ಅಗತ್ಯವಿದ್ದರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಐಸೋಲೇಶನ್ ಸೆಂಟರ್ ತೆರೆಯಲಾಗುವುದು.
3. ಸೋಂಕು ಹರಡದಂತೆ ಜನರಲ್ಲಿ ಜಾಗೃತಿ ಮೂಡಿ ಸುವ ಕೆಲಸವನ್ನು ಹೇಗೆ ಮಾಡುತ್ತಿದ್ದೀರಿ? ಖುದ್ದಾಗಿ ವಿಶೇಷ ಕ್ರಮಗಳನ್ನು ಕೈಗೊಂಡಿದ್ದೀರಾ?
ರೋಗಲಕ್ಷಣ ಇದ್ದರೆ ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸಿ. ಸ್ವತಃ ಸಾಕಷ್ಟು ಜಾಗರೂಕತೆ ಮಾಡಿದ್ದರೂ ನನಗೆ ಪಾಸಿಟಿವ್ ಬಂದು ಗುಣವಾಗಿದೆ. ಕಳೆದ ಬಾರಿ 3 ಲಕ್ಷ ಮಾಸ್ಕ್ಗಳನ್ನು, ಸ್ಯಾನಿಟೈಸರ್, ಜೀವರಕ್ಷಕಗಳನ್ನು ನೀಡಲಾಗಿದೆ. ಮಾಸ್ಕ್ ಉಪಯೋಗಿಸುವುದು ಹೇಗೆ ಎಂಬ ತರಬೇತಿ ಗಳನ್ನು ಪ್ರತಿ ಹಾಲಿನ ಸೊಸೈಟಿಗಳಲ್ಲಿ ನಡೆಸಲಾಗಿದೆ. ದೈಹಿಕ ಅಂತರ ಕಾಪಾಡುವುದೂ ಸೇರಿದಂತೆ ಎಲ್ಲ ಮುಂಜಾಗ್ರತೆಗಳನ್ನು ಕೈಗೊಳ್ಳಲಾಗುತ್ತಿದೆ.
4. ಪ್ರತಿ ಜಿಲ್ಲೆಯಲ್ಲೂ ಸಾಮಾನ್ಯವಾಗಿ ಕೇಳಿ ಬರು ತ್ತಿರುವ ಸಮಸ್ಯೆ ಆಕ್ಸಿಜನ್ ಕೊರತೆ, ಹಾಸಿಗೆಗಳ ಕೊರತೆ- ನಿಮ್ಮಲ್ಲಿ ಯಾವ ಕ್ರಮ ಕೈಗೊಂಡಿದ್ದೀರಿ?
ಐಸಿಯು, ವೆಂಟಿಲೇಟರ್ ಕೊರತೆ ಇದೆ. ಅದಕ್ಕಾಗಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಉಳಿದಂತೆ ಬೆಡ್ ಕೊರತೆ ಇತ್ಯಾದಿ ಇಲ್ಲ. ಅಗತ್ಯ ಕ್ರಮಗಳನ್ನು ಜರುಗಿಸಲಾಗುತ್ತಿದೆ.
5. ಲಾಕ್‌ಡೌನ್ ಹಿನ್ನೆಲೆಯಲ್ಲಿ ನಿಮ್ಮ ಕ್ಷೇತ್ರದಲ್ಲಿ ಸಂಕಷ್ಟಕ್ಕೀಡಾಗಿರುವ ಬಡ ಕುಟುಂಬ ಗಳು/ಕೂಲಿ ಕಾರ್ಮಿಕರ ನೆರವಿಗೆ ಏನು ಮಾಡುತ್ತಿದ್ದೀರಿ?
ಜನರಿಗೆ ತಿಳುವಳಿಕೆ ಬಂದಿದೆ. ಅಂತಹ ಬೇಡಿಕೆ ಈವರೆಗೆ ಬಂದಿಲ್ಲ. ಕಳೆದ ಬಾರಿ ಬಂದಾಗ ನೀಡಲಾಗಿತ್ತು. ಈ ಬಾರಿ ಜನರು ಅನುಭವದಿಂದ ನಮಗೆ ನಾವೇ ಎಂಬ ಭಾವನೆಯಿಂದ ಬದುಕುತ್ತಿದ್ದಾರೆ.
6. ಕ್ಷೇತ್ರದ ಯುವ/ಸಮುದಾಯ ಸಂಘಟನೆ ಗಳನ್ನು ಕಠಿನ ಪರಿಸ್ಥಿತಿಗೆ ಸಜ್ಜುಗೊಳಿಸಿದ್ದೀರಾ?
ಜನ ತುಂಬ ಸಹನೆಯಿಂದ ಇದ್ದಾರೆ. ಜವಾಬ್ದಾರಿಯನ್ನು ಅರಿತಿದ್ದಾರೆ. ಎಲ್ಲರೂ ಅವರ ಪಾಲಿನ ಕರ್ತವ್ಯವನ್ನು ಮಾಡುತ್ತಿದ್ದಾರೆ.
7. ಜನರು ಕೊರೊನಾ ಸಂಕಷ್ಟ ಸಂಬಂಧ ಯಾವು ದೇ ಕ್ಷಣದಲ್ಲಿ ನಿಮ್ಮನ್ನು ಸಂಪರ್ಕಿಸ ಬಹುದೇ?
ನಾನು ಯಾವುದೇ ಕ್ಷಣದಲ್ಲಿಯಾದರೂ ಲಭ್ಯ. ದೂ: 9448381341***
ಹರೀಶ್ ಪೂಂಜ ಶಾಸಕರು, ಬೆಳ್ತಂಗಡಿ : 1. ನಿಮ್ಮ ಕ್ಷೇತ್ರದಲ್ಲಿ ಕೋವಿಡ್ 19ರ ವಿಷಮ ಪರಿಸ್ಥಿತಿ ನಿಭಾವಣೆಗೆ ಪೂರ್ವಸಿದ್ಧತೆ ಹೇಗೆ ನಡೆದಿದೆ? ಸೋಂಕು ಪ್ರಕರಣಗಳನ್ನು ಗ್ರಾಮಮಟ್ಟದಲ್ಲೇ ನಿಯಂತ್ರಿಸಲು ತಾಲೂಕಿನ 48 ಗ್ರಾ.ಪಂ. ಹಾಗೂ ಬೂತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಉಜಿರೆಯಲ್ಲಿ ಸೇವಾಭಾರತಿ ಜತೆಗೂಡಿ ತೆರೆದಿರುವ ವಾರ್‌ರೂಂ ನಲ್ಲಿ 16 ಮಂದಿ ತುರ್ತು ಸೇವೆ ಕಲ್ಪಿಸುತ್ತಿದ್ದಾರೆ. ಸಂಘ ಸಂಸ್ಥೆಗಳ ಸಹಕಾರದಿಂದ ಉಚಿತ ಆ್ಯಂಬುಲೆನ್ಸ್Õ ಸೇವೆ ಕಲ್ಪಿಸಲಾಗಿದೆ. ಜನರ ಕಷ್ಟ ಆಲಿಸಲು ಗ್ರಾ. ಪಂ. ಅಧ್ಯಕ್ಷರು ಹಾಗೂ ಪ್ರತಿ ವಾರ್ಡ್‌ನ ಸದಸ್ಯರಿಗೆ ಜವಾಬ್ದಾರಿ ವಹಿಸಲಾಗಿದೆ. 2. ಜಿಲ್ಲಾಡಳಿತ, ತಾಲೂಕು ಆಡಳಿತ ಹೊರತುಪಡಿಸಿ ದಂತೆ ಸ್ಥಳೀಯರನ್ನು ಒಗ್ಗೂಡಿಸಿ ಪರ್ಯಾಯ ವ್ಯವಸ್ಥೆ (ಪ್ಲ್ರಾನ್ ಬಿ) ರೂಪಿಸಿದ್ದೀರಾ? ಈಗಾಗಲೇ ಗಣ್ಯರು, ಸಂಘ ಸಂಸ್ಥೆ, ಉದ್ಯಮಿಗಳನ್ನು ಸಂಪರ್ಕಿಸಿ ಯಾವ ರೂಪದಲ್ಲಾದರೂ ಸೇವೆ ಒದಗಿಸುವಂತೆ ಕೋರಲಾಗಿದೆ. ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಿಂದ ಪ್ರತಿ ಗ್ರಾ.ಪಂ.ನಲ್ಲಿ ಸ್ವಯಂಸೇವಕರ ತಂಡ ರಚಿಸಿ ಸೋಂಕಿತರಿಗೆ ಸಹಕಾರ ಒದಗಿಸಲಾಗುತ್ತಿದೆ. 3. ಸೋಂಕು ಹರಡದಂತೆ ಜನರಲ್ಲಿ ಜಾಗೃತಿ ಮೂಡಿ ಸುವ ಕೆಲಸವನ್ನು ಹೇಗೆ ಮಾಡುತ್ತಿದ್ದೀರಿ? ಖುದ್ದಾಗಿ ವಿಶೇಷ ಕ್ರಮಗಳನ್ನು ಕೈಗೊಂಡಿದ್ದೀರಾ? ತಾಲೂಕಿನ 48 ಗ್ರಾ.ಪಂ.ಗಳಲ್ಲಿ ಸಭೆ ನಡೆಸಿದ್ದು, ತಮ್ಮ ವಾರ್ಡ್‌ನ ಮಾಹಿತಿ ಸಂಗ್ರಹಿಸಿ ನೀಡುವಂತೆ ಸದಸ್ಯರಿಗೆ ಸೂಚಿಸಲಾಗಿದೆ. ಶಾಸಕರ ಕಚೇರಿಯಿಂ ದ ಪಂಚಾಯತ್ ಅಧ್ಯಕ್ಷರಿಗೆ ಪ್ರತಿನಿತ್ಯ ಕರೆ ಮಾಡಿ ಮಾಹಿತಿ ಪಡೆಯಲಾಗು ತ್ತಿದೆ. ಪ್ರತಿ ಜಿ.ಪಂ. ಕ್ಷೇತ್ರಕ್ಕೆ ಸಂಚಾಲಕ್ ಮತ್ತು ಸಹ ಸಂಚಾಲಕ್ ರನ್ನು ಪಕ್ಷ ನೇಮಿಸಿದ್ದು, ಕಾರ್ಯ ನಿರ್ವಹಿಸುತ್ತಾರೆ. 4. ಪ್ರತಿ ಜಿಲ್ಲೆಯಲ್ಲೂ ಸಾಮಾನ್ಯವಾಗಿ ಕೇಳಿ ಬರು ತ್ತಿರುವ ಸಮಸ್ಯೆ ಆಕ್ಸಿಜನ್ ಕೊರತೆ, ಹಾಸಿಗೆಗಳ ಕೊರತೆ- ನಿಮ್ಮಲ್ಲಿ ಯಾವ ಕ್ರಮ ಕೈಗೊಂಡಿದ್ದೀರಿ? ಈಗಾಗಲೆ ತಾಲೂಕು ಆಸ್ಪತ್ರೆಯಲ್ಲಿ 34 ಜಂಬೋ ಸಿಲಿಂಡರ್‌ಗಳಿದ್ದು, ಹೆಚ್ಚುವರಿ 16 ಜಂಬೋ ಸಿಲಿಂಡರ್ ತರಿಸಲು ಪತ್ರ ಬರೆಯಲಾಗಿದೆ. ತಾಲೂಕಿನ ಜನತೆಗೆ ಆಕ್ಸಿಜನ್ ಕೊರತೆ ಬಾರದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. 5. ಲಾಕ್‌ಡೌನ್ ಹಿನ್ನೆಲೆಯಲ್ಲಿ ನಿಮ್ಮ ಕ್ಷೇತ್ರದಲ್ಲಿ ಸಂಕಷ್ಟಕ್ಕೀಡಾಗಿರುವ ಬಡ ಕುಟುಂಬ ಗಳು/ಕೂಲಿ ಕಾರ್ಮಿಕರ ನೆರವಿಗೆ ಏನು ಮಾಡುತ್ತಿದ್ದೀರಿ? ಕೂಲಿ ಕಾರ್ಮಿಕರು, ಹಸಿವಿನಿಂದ ಇರುವವರಿಗೆ ಪಕ್ಷ, ದಾನಿಗಳ ಸಹಕಾ ರದಿಂದ ಆಹಾರ ನೀಡಲಾಗುತ್ತದೆ. ಪ್ರತಿ ವಾರ್ಡ್‌ನಲ್ಲಿ ದಿನಕ್ಕೆ 100 ಆಹಾರ ಪೊಟ್ಟಣ ಒದಗಿಸಲಿದ್ದು, ಮತ್ತಷ್ಟು ಅಗತ್ಯವಿದ್ದರೆ ಕ್ರಮ ಕೈಗೊಳ್ಳಲಾಗುವುದು. 6. ಕ್ಷೇತ್ರದ ಯುವ/ಸಮುದಾಯ ಸಂಘಟನೆ ಗಳನ್ನು ಕಠಿನ ಪರಿಸ್ಥಿತಿಗೆ ಸಜ್ಜುಗೊಳಿಸಿದ್ದೀರಾ? ತಾಲೂಕಿನಲ್ಲಿ ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಸಹಕಾರದಿಂದ ಶ್ರೀ ಕ್ಷೇ.ಧ. ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ಕೇರ್ ಸೆಂಟರ್‌ಗೆ 200 ಹಾಸಿಗೆ, ರಜತಾದ್ರಿ ಕಟ್ಟಡದಲ್ಲಿ ಕ್ವಾರಂಟೈನ್ ಕೇಂದ್ರಕ್ಕಾಗಿ 600 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಸಂಘ-ಸಂಸ್ಥೆಗಳನ್ನು ವಿನಂತಿ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರಿಗೆ, ಆಹಾರ ಸಾಮಗ್ರಿ ಸಾಗಾಟಕ್ಕೆ, ಆಸ್ಪತ್ರೆಗೆ ಕರೆತರಲು ವಾಹನ, ಆ್ಯಂಬುಲೆನ್ಸ್ ಉಚಿತ ಸೇವೆ, ಮೃತ ಸೋಂಕಿತರ ದಹನ ಕ್ರಿಯೆ ಸೇರಿದಂತೆ ಎಲ್ಲವನ್ನೂ ಕೈಗೊಳ್ಳಲಾಗುತ್ತಿದೆ. 7. ಜನರು ಕೊರೊನಾ ಸಂಕಷ್ಟ ಸಂಬಂಧ ಯಾವು ದೇ ಕ್ಷಣದಲ್ಲಿ ನಿಮ್ಮನ್ನು ಸಂಪರ್ಕಿಸ ಬಹುದೇ? ನಾನು ಸದಾ ಲಭ್ಯ. ಸೋಂಕಿತರು ಧೈರ್ಯಗುಂದಬಾರದು. ಸಂಪರ್ಕ ಸಂಖ್ಯೆ 9900000207/900757149/9008161300