Advertisement

ದೆಹಲಿಯಲ್ಲಿ ಕೋವಿಡ್ ಅಟ್ಟಹಾಸ : ಒಂದೇ ದಿನಕ್ಕೆ 347 ಬಲಿ

10:30 AM Apr 25, 2021 | Team Udayavani |

ದೆಹಲಿ : ದೆಹಲಿಯದಲ್ಲಿ ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 347 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ 24,103 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ

Advertisement

ಈಗಾಗಲೇ ದೆಹಲಿ ರಾಜ್ಯದಲ್ಲಿ ಲಕ್ ಡೌನ್ ಘೋಷಣೆ ಮಾಡಿ, ಒಂದು ವಾರಗಳೇ ಕಳೆದಿವೆ. ಜನರ ಗುಂಪುಗೂಡುವಿಕೆಯನ್ನು ನಿಯಂತ್ರಿಸಿದರೂ ಕೂಡ ಇಷ್ಟೆಲ್ಲ ಕೋವಿಡ್ ಸೋಂಕು ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಕಳೆದ 24 ಗಂಟೆ ಅಂದ್ರೆ ಶನಿವಾರ ಸಂಜೆ ಕೊನೆಯಾಗುವವರೆಗೆ 74,702  ಮಂದಿಯನ್ನು ಪರೀಕ್ಷೆ ಮಾಡಲಾಗಿದ್ದು, ಅವರಲ್ಲಿ ಶೇ 32.27ರಷ್ಟು ಜನರಿಗೆ ಕೊವಿಡ್ ಸೋಂಕು ದೃಢಪಟ್ಡಿದೆ.

ಪ್ರಸ್ತುತ ದೆಹಲಿಯಲ್ಲಿ 93,080 ಸಕ್ರಿಯ ಪ್ರಕರಣಗಳಿವೆ. ಕಳೆದ ಮಾರ್ಚ್‌ನಿಂದ ಇದುವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 10 ಲಕ್ಷದ ಗಡಿ ದಾಟಿದ್ದು, ಶನಿವಾರ 10,04,782 ತಲುಪಿದೆ. ಇದುವರೆಗೆ ಒಟ್ಟು 13,898 ಜನ ಸಾವಿಗೀಡಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next