Advertisement

ಜಾಗತಿಕ ದಿಗ್ಗಜರ ಜಗ್ಗಾಡಿದ “ಕೋವಿಡ್’

01:48 AM Oct 04, 2020 | mahesh |

ಕೋವಿಡ್ ಬೇಟೆ “ಕಣ್ಣಾಮುಚ್ಚಾಲೆ’ ಆಟದಂತೆ. ವೈರಾಣು ಯಾರನ್ನು ಬೇಕಾದರೂ ಸ್ಪರ್ಶಿಸಿ, “ಔಟ್‌’ ಆಗಿಸಬಲ್ಲದು ಇಲ್ಲವೇ ಆಘಾತ ನೀಡಬಲ್ಲದು! ಇವರು ಜನಸಾಮಾನ್ಯ, ಇವರು ನಾಯಕ… ಊಹೂಂ ಕೊರೊನಾಕ್ಕೆ ಭೇದ ಗೊತ್ತಿಲ್ಲ. “ದೊಡ್ಡಣ್ಣ’ ಖ್ಯಾತಿಯ ರಾಷ್ಟ್ರದ ದೊರೆ ಡೊನಾಲ್ಡ್‌ ಟ್ರಂಪ್‌ಗ್ೂ ಈಗ ಪಾಸಿಟಿವ್‌! ಈ ಮೂಲಕ ಟ್ರಂಪ್‌ “ಸೋಂಕಿತ ವಿಶ್ವನಾಯಕ’ರ ಸಾಲಿನಲ್ಲಿ ನಿಂತಿದ್ದಾರೆ. ಸೋಂಕಿತ ವಿಶ್ವನಾಯಕರ ಪಟ್ಟಿಯಲ್ಲಿ ಮತ್ಯಾರಿದ್ದಾರೆ?

Advertisement

ಭಾರತೀಯ ನಾಯಕರು
ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಇತ್ತೀಚೆಗಷ್ಟೇ ಕೊರೊನಾ ದೃಢಪಟ್ಟಿದೆ. ಕೇಂದ್ರ ಸಚಿವರಾದ ಅಮಿತ್‌ ಶಾ, ಧರ್ಮೇಂದ್ರ ಪ್ರಧಾನ್‌, ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಕೊರೊನಾ ದೃಢಪಟ್ಟ ಪ್ರಮುಖರು. ಸೋಂಕು ದೃಢಪಟ್ಟು, ಅನಂತರ ನೆಗೆಟಿವ್‌ ಕಂಡು ನಿಧನ ಹೊಂದಿದ ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಆರೋಗ್ಯದ ಮೇಲೆ ಕೊರೊನಾ ಗಂಭೀರ ಪರಿಣಾಮ ಬೀರಿತ್ತು. ಕೇಂದ್ರ ಸಚಿವ ಸುರೇಶ್‌ ಅಂಗಡಿ ನಿಧನ ರಾಷ್ಟ್ರ ರಾಜಕಾರಣಕ್ಕಾದ ಬಹುದೊಡ್ಡ ನಷ್ಟ.

ಜೈರ್‌ ಬೋಲ್ಸೊನಾರೋ ಬ್ರೆಜಿಲ್‌ ಅಧ್ಯಕ್ಷ
ಜುಲೈಯ ಇವರಿಗೆ ಸೋಂಕು ದೃಢವಾಗಿತ್ತು. ಮಲೇರಿಯಾ ಗುಳಿಗೆ ಹೈಡ್ರಾಕ್ಸಿಕ್ಲೊರೊಕ್ವಿನ್‌ ಸೇವಿಸಿ ಕೊರೊನಾವನ್ನು ಓಡಿಸಿದರು. ಭಾರತದ ಈ ಔಷಧ ಪರ ಭಾರೀ ಪ್ರಚಾರ ಮಾಡಿದರು.

ಬೋರಿಸ್‌ ಜಾನ್ಸನ್‌ ಇಂಗ್ಲೆಂಡ್‌ ಪ್ರಧಾನಿ
ಕೊರೊನಾ ಸೋಂಕಿಗೆ ಗುರಿಯಾದ ಮೊದಲ ವಿಶ್ವ ನಾಯಕ. ಏಪ್ರಿಲ್‌ನಲ್ಲಿ ಇವರಿಗೆ ಸೋಂಕು ತಗಲಿತ್ತು. ಆಮ್ಲಜನಕ ಬೆಂಬಲದೊಂದಿಗೆ ಕೆಲ ದಿನ ಆಸ್ಪತ್ರೆಗಳಲ್ಲಿದ್ದು, ವೈರಾಣು ವಿರುದ್ಧ ಗೆದ್ದು ಬಂದರು.

ಜೆ.ಒ. ಹೆರ್ನಾಂಡಿಸ್‌ ಹೊಂಡುರಸ್‌ ಅಧ್ಯಕ್ಷ
ಜೂನ್‌ನಲ್ಲಿ ಪಾಸಿಟಿವ್‌ ದೃಢಪಟ್ಟಿತು. ಆಸ್ಪತ್ರೆಗೆ ದಾಖಲಾದ ಹೆರ್ನಾಂಡಿಸ್‌, “ಮೇಝ್ (Mಅಐಘ)’ ಚಿಕಿತ್ಸೆ ಪಡೆದಿದ್ದರು. ಮೈಕ್ರೊಡಾಸಿನ್‌, ಅಝಿತ್ರೊಮೈಸಿನ್‌, ಐವೆರ್ಮೆಕ್ಟಿನ್‌ ಮತ್ತು ಝಿಂಕ್‌ ಸಮಿಶ್ರಿತ ಔಷಧದಿಂದ ಸೋಂಕು ಗುಣಪಡಿಸಿಕೊಂಡರು.

Advertisement

ಅಲೆಜಾಂಡ್ರೊ ಗಿಯಾಮ್ಮಾಟ್ಟೈ, ಗ್ವಾಟೆಮಾಲಾ ಅಧ್ಯಕ್ಷ
ಸೆಪ್ಟrಂಬರ್‌ನಲ್ಲಿ ಸೋಂಕು ತಗಲಿತು. ಚಿಕಿತ್ಸೆ ಪಡೆಯುತ್ತಿರುವಾಗಲೇ “ನನಗೆ ಜ್ವರವಿಲ್ಲ, ಸ್ವಲ್ಪ ಕಫ‌ವಿದೆ’ ಎಂದು ರಾಷ್ಟ್ರವನ್ನುದ್ದೇಶಿಸಿ ಟಿವಿಯಲ್ಲಿ ಭಾಷಣ ಮಾಡಿದ್ದರು. ಸೋಂಕಿದ್ದರೂ ವರ್ಕ್‌ ಫ್ರಂ ಹೋಮ್‌ ಮಾಡಿದ್ದರು.

ಚೇತರಿಸಿಕೊಂಡ ಇತರ ನಾಯಕರು…
ಜೀನೈನ್‌ ಅನೆಝ್, ಬೊಲಿವಿಯಾ ಹಂಗಾಮಿ ಅಧ್ಯಕ್ಷ
ಲೂಯಿಸ್‌ ಅಬಿನಾಡೆರ್‌, ಡೊಮೈನಿಕನ್‌ ಅಧ್ಯಕ್ಷ
ಇಶಾಖ್‌ ಜಹಾಂಗಿರಿ, ಇರಾನ್‌ ಉಪಾಧ್ಯಕ್ಷ
ಯಾಕೋವ್‌ ಲಿಟಮನ್‌, ಇಸ್ರೇಲ್‌ ಆರೋಗ್ಯ ಸಚಿವ
ಗ್ವೇಡ್‌ ಮಂಟಾಶೆ, ದ. ಆಫ್ರಿಕ ಇಂಧನ ಸಚಿವ
ಠುಲಾಸ್‌ ಎನ್‌ಕ್ಸೆಸಿ, ದ. ಆಫ್ರಿಕ ಕಾರ್ಮಿಕ ಸಚಿವ
ರೀಕ್‌ ಮಚಾರ್‌, ಸುಡಾನ್‌ ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next