Advertisement

ಗೋವಾದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ : ಕೋವಿಡ್ ಸೋಂಕಿನ ಭೀತಿಯಲ್ಲಿ ಗೋವಾ ಜನತೆ

04:06 PM Aug 02, 2021 | Team Udayavani |

ಪಣಜಿ : ಗೋವಾ ರಾಜ್ಯದಲ್ಲಿ ಸದ್ಯ ಕರೋನಾ ನಿಯಂತ್ರಣದಲ್ಲಿದೆ. ಆದರೆ ಸದ್ಯ ದೇಶದ ವಿವಿಧ ರಾಜ್ಯಗಳಲ್ಲಿ ಕರೋನಾ ಸೋಂಕು ಹೆಚ್ಚಳವಾಗುತ್ತಿದೆ. ಕಳೆದ ಕೆಲ ದಿನಗಳಿಂದ ವಿವಿಧ ರಾಜ್ಯಗಳ ಪ್ರವಾಸಿಗರು ಗೋವಾಕ್ಕೆ ಆಗಮಿಸುತ್ತಿದ್ದು, ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಗರ್ದಿ ಕಂಡುಬರುತ್ತಿದೆ. ಇದರಿಂದಾಗಿ ಗೋವಾದಲ್ಲಿ ಕರೋನಾ ಸೋಂಕು ಹರಡುವ ಭೀತಿ ಎದುರಾಗಿದೆ.

Advertisement

ಸದ್ಯ ಗೋವಾದ ವಿವಿಧ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಗರ್ದಿ ಕಂಡುಬರುತ್ತಿದೆ. ಗೋವಾದ ಮೀರಾಮಾರ್, ಕಲಂಗುಟ್, ಬಾಗಾ, ದೋನಾಪಾವುಲ್, ಶಿಕೇರಿ, ವಾಗಾತೋರ್ ಬೀಚ್‍ಗಳಲ್ಲಿ ಪ್ರವಾಸಿಗರ ಗರ್ದಿ ಕಂಡುಬರುತ್ತಿದೆ.

ಕರೋನಾದಿಂದಾಗಿ ಪ್ರವಾಸಿಗರ ಅವಲಂಭಿತ ಗೋವಾದಲ್ಲಿ ಭಾರಿ ಪ್ರಮಾಣದಲ್ಲಿ ಉದ್ಯೋಗನಷ್ಠವಾಗಿದೆ. ಪ್ರವಾಸೋದ್ಯಮ ಅವಲಂಭಿತ ಹಲವು ಉದ್ಯೋಗಗಳು ಸದ್ಯ ಬಂದ್ ಆಗಿಯೇ ಇದೆ. ಆದರೆ ಇದೀಗ ವಿವಿಧ ರಾಜ್ಯಗಳಿಂದ ಗೋವಾಕ್ಕೆ ಪ್ರವಾಸಿಗರು ಆಗಮಿಸುತ್ತಿರುವುದು ಕರೋನಾ ಸಂಕಷ್ಟದ ಸಂದರ್ಭದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ :ರಾಷ್ಟ್ರ ಧ್ವಜಕ್ಕೆ ಅಗೌರವ : ಕಣ್ಣು ಮುಚ್ಚಿ‌ ಕುಳಿತ ಉಪ್ಪರಪೇಟೆ ಗ್ರಾ.ಪಂ. ಅಧಿಕಾರಿಗಳು

Advertisement

Udayavani is now on Telegram. Click here to join our channel and stay updated with the latest news.

Next