Advertisement

ವರನ ತಾಯಿಗೆ ಕೋವಿಡ್ ಸೋಂಕು ದೃಢ: ರಾತ್ರೋರಾತ್ರಿ ಮದುವೆ ರದ್ದು

05:32 PM Jun 26, 2020 | keerthan |

ಗುಳೇದಗುಡ್ಡ( ಬಾಗಲಕೋಟೆ): ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಂದು ಬೆಳಿಗ್ಗೆ ಬಳ್ಳಾರಿಯ ಗುಳೇದಗುಡ್ಡದಲ್ಲಿ ಮದುವೆ ಸಂಭ್ರಮ ಕಳೆಗಟ್ಟುತ್ತಿತ್ತು ವಧು – ವರ ಇಬ್ಬರೂ ಇಷ್ಟೋತ್ತಿಗೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಅಷ್ಟರಲ್ಲಿ ಆವರಿಸಿದ ಕೋವಿಡ್ ಸೋಂಕಿನ ಛಾಯೆ ಎಲ್ಲವನ್ನೂ ಹಾಳು ಮಾಡಿದೆ.

Advertisement

ಬಳ್ಳಾರಿಯ ಯುವಕನ ಜೊತೆ ಗುಳೇದಗುಡ್ಡದ ಯುವತಿಯ‌ ಮದುವೆ ನಿಶ್ಚಯವಾಗಿತ್ತು. ಇತ್ತ ಮದುಮಗ ಹಾಗೂ ಸಂಬಂಧಿಕರು ಬಳ್ಳಾರಿಯಿಂದ ಬಸ್ ಮಾಡಿಕೊಂಡು ಗುರುವಾರ ರಾತ್ರಿಯೆ ವಧುವಿನ ಊರಿಗೆ ಬಂದಿದದ್ದರು. ಶುಕ್ರವಾರ ಬೆಳ್ಳಿಗ್ಗೆ ಮಹೂರ್ತ ನೆರವೇರಬೇಕಿತ್ತು. ಅಷ್ಟರಲ್ಲಿ ವರನ ತಾಯಿಗೆ ಕೋವಿಡ್-19 ಸೋಂಕು ಪಾಸಿಟಿವ್ ಇದೆ ಎಂಬ ಮಾಹಿತಿ ಬಂದಿತ್ತು. ರಾತ್ರಿಯೇ ಗ್ರಾಮಕ್ಕೆ ಭೇಟಿ ನೀಡಿದ ತಾಲೂಕು ಆಡಳಿತ ಸಿಬ್ಬಂದಿ ಮದುವೆ‌ ರದ್ದು ಮಾಡಿ ಸಂಬಂಧಿಕರನ್ನು ವಾಪಸ್ ಕಳಿಸಿದರು.

ವರನ ತಾಯಿ ಬಳ್ಳಾರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಳೇದಗುಡ್ಡದ ಮರಡಿಮಠದ ಸಮೀಪ ಇರುವ ವಧುವಿನ ಸ್ವ ಗೃಹದಲ್ಲಿ ಮದುವೆ ನಡೆಯಬೇಕಿದ್ದ ಪ್ರದೇಶವನ್ನು ಸ್ಯಾನಿಟೈಸ್ ಮಾಡಲಾಗಿದೆ. ಸ್ಥಳಕ್ಕೆ ಬಾಗಲಕೋಟೆ ಉಪವಿಭಾಗಾಧಿಕಾರಿ ಗಂಗಪ್ಪ ಭೇಟಿ‌ನೀಡಿದ್ದಾರೆ.

ನೂರಾರು ಕನಸುಹೊತ್ತು ಸಪ್ತಪದಿಗೆ ಹೆಜ್ಜೆ ಹಾಕುವ ಸಂಭ್ರಮದ ಕ್ಷಣಕ್ಕೂ ಕೋವಿಡ್-19 ಭೀತಿ ಅಡ್ಡಿಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next