Advertisement

Covid: ಡಿ.9 ರಂದೇ ಕಾರವಾರ ಕ್ರಿಮ್ಸ್‌ನಲ್ಲಿ ಕೋವಿಡ್ ಪ್ರಕರಣ ಪತ್ತೆ-ತಡವಾಗಿ ಬೆಳಕಿಗೆ

08:29 PM Dec 19, 2023 | Team Udayavani |

ಕಾರವಾರ: ಡಿ.9 ರಂದೇ ಕಾರವಾರ ಕ್ರಿಮ್ಸ್ ನಲ್ಲಿ ಕೋವಿಡ್ ಪಾಜಿಟಿವ್ ಯುವಕನೋರ್ವನಿಗೆ ಪತ್ತೆಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸದಾಶಿವಗಡದ ಯುವಕ ಹಿಂದಿನ ಕೋವಿಡ್ ಯಲ್ಲಿ ಕೋವಿಡ್ ನಿಂದ ಮುಕ್ತನಾಗಿದ್ದ. ಈಚೆಗೆ ಡಿಸೆಂಬರ್ ಆರಂಭದಲ್ಲಿ ಜ್ವರ ಕಾಣಿಸಿಕೊಂಡಿತು. ಗೋವಾಕ್ಕೆ ಕೆಲಸಕ್ಕೆ ಹೋಗುವ ಮುನ್ನ ಕೋವಿಡ್ ನೆಗೆವಿಟ್ ಪ್ರಮಾಣ ಪತ್ರದ ಕಾರಣ ಮತ್ತೆ ಪರೀಕ್ಷೆಗೆ ಒಳಗಾದಾಗ ಆತನಿಗೆ ಕೋವಿಡ್ ಪಾಜಿಟಿವ್ ಕಾಣಿಸಿಕೊಂಡಿತು.

Advertisement

ಕಾರವಾರ ಮೆಡಿಕಲ್ ಕಾಲೇಜು( ಕ್ರಿಮ್ಸ) ಆಸ್ಪತ್ರೆಯಲ್ಲಿ ವಾರಗಳ ಕಾಲ ಐಸೋಲೇಶನ್‌ಗೆ ಒಳಗಾಗಿ, ಗುಣಮುಖನಾದ ಯುವಕ ನಂತರ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ಡಿಸೆಂಬರ್ 16 ರಂದು ಪಡೆದು ಗೋವಾದಲ್ಲಿ ಕೆಲಸಕ್ಕೆ ಹಾಜರಾದ. ಈ ನಡುವೆ ಆತನ ಮನೆಯವರು ಹಾಗೂ ಸುತ್ತಮುತ್ತಲಿನ ಮನೆಯವರ ಆರೋಗ್ಯ ತಪಾಸಣೆ ಮಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸದಾಶಿವಗಡ ಪರಿಸರದಲ್ಲಿ ಯಾರಿಗೂ ಕೋವಿಡ್ ಇಲ್ಲ ಎಂದು ಖಚಿತ ಮಾಡಿಕೊಂಡಿದೆ ಎಂದು ಡಿಎಚ್‌ಓ , ಡಾ. ನೀರಜ್ ಉದಯವಾಣಿಗೆ ತಿಳಿಸಿದ್ದಾರೆ.

ಕೊವಿಡ್ ಇತರರಿಗೆ ಹರಡಿಲ್ಲ. ಈ ಸಲದ ವೈರಸ್ ಪ್ರಭಾವಶಾಲಿ ಅಲ್ಲ. ಅದು ಮೈಲ್ಡ್ ಆಗಿದೆ. ಆದರೆ ಬಿಪಿ, ಶುಗರ್ ಇರುವವರು ಜಾಗೃತೆಯಿಂದ ಇರಬೇಕು. 60 ವರ್ಷ ಮೇಲ್ಪಟ್ಟವರು ಜ್ವರ,ನೆಗಡಿ ಬಂದರೆ ತಕ್ಷಣ ಪರೀಕ್ಷೆ ಮಾಡಿಸಿಕೊಂಡು, ಗುಣಮುಖರಾಗುವತನಕ ಐಸೋಲೇಟ್ ಆಗಬೇಕು ಎಂದರು.

ಸದಾಶಿವಗಡ ಯುವಕ ಆರೋಗ್ಯವಾಗಿದ್ದು, ಕೆಲಸಕ್ಕೆ ಹೋಗಿದ್ದಾನೆಂದು ಡಿಎಚ್ ಓ ಹೇಳಿದರು‌.

Advertisement

Udayavani is now on Telegram. Click here to join our channel and stay updated with the latest news.

Next