Advertisement

ಕೋವಿಡ್: ರಾಜ್ಯದಲ್ಲಿಂದು 405 ಪಾಸಿಟಿವ್‌ ಪತ್ತೆ; ನಾಲ್ವರ ಸಾವು

08:50 PM Dec 24, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ 405 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಆ ಮೂಲಕ ಪಾಸಿಟಿವ್‌ ದರ ಶೇ. 0.35ಕ್ಕೆ ಹಾಗೂ ಮರಣ ಪ್ರಕರಣ ಶೇ. 0.98ಕ್ಕೆ ಏರಿಕೆಯಾಗಿದೆ.

Advertisement

ಬೆಂಗಳೂರು ನಗರ 254, ಉತ್ತರ ಕನ್ನಡ 32, ದ.ಕ. 20, ಕೋಲಾರ 18, ತುಮಕೂರು 16, ಮೈಸೂರು ಮತ್ತು ಉಡುಪಿ 13, ಕೊಡಗು ಜಿಲ್ಲೆಯಲ್ಲಿ 12 ಪ್ರಕರಣ ದಾಖಲಾಗಿದೆ.

ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಧಾರವಾಡ, ಹಾಸನ, ಮಂಡ್ಯ, ವಿಜಯಪುರ,ರಾಮನಗರ, ಬೆಳಗಾವಿ ಜಿಲ್ಲೆಯಲ್ಲಿ ಬೆರಳೆಣಿಕೆ ಪ್ರಕರಣ ದಾಖಲಾಗಿದೆ.

ಬಾಗಲಕೋಟೆ, ಬಳ್ಳಾರಿ, ಬೀದರ್‌, ಚಿತ್ರದುರ್ಗ,ದಾವಣಗೆರೆ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಅಮೃತಸರದ ಸಯಾಮಿ ಅವಳಿಗೆ ಸಿಕ್ಕಿತು ಸರ್ಕಾರಿ ಉದ್ಯೋಗ!

Advertisement

4 ಮರಣ ಪ್ರಕರಣ
ಬೆಂಗಳೂರು ನಗರ 2, ಬೆಳಗಾವಿ, ಮೈಸೂರು ಜಿಲ್ಲೆಯಲ್ಲಿ ತಲಾ 1ರಂತೆ ಒಟ್ಟು 4 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.

ರಾಜ್ಯಾದ್ಯಂತ ಒಟ್ಟು 7,251 ಸಕ್ರಿಯ ಪ್ರಕರಣಗಳಿವೆ. 267 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next