Advertisement

ಕೋವಿಡ್ 3 ನೇ ಅಲೆಯ ಆತಂಕ : ಮಕ್ಕಳ ಸುರಕ್ಷೆಗೆ ಒತ್ತು ಕೊಡೋಣ…

12:20 AM May 08, 2021 | Team Udayavani |

ದೇಶವು ಕೋವಿಡ್‌ -19 ರ ಎರಡನೇ ಅಲೆಯೊಂದಿಗೆ ಹೋರಾಡುತ್ತಿರುವಂತೆಯೇ ವೈದ್ಯಕೀಯ ತಜ್ಞರು ಈಗಾಗಲೇ ಸಾಂಕ್ರಾಮಿಕ ರೋಗದ ಮೂರನೇ ಅಲೆಯ ಅಪಾಯದ ಸೂಚನೆ ನೀಡಿದ್ದಾರೆ. ಹಲವಾರು ದೇಶಗಳು ಈಗಾಗಲೇ ಕೋವಿಡ್‌ -19 ರ ನಾಲ್ಕನೇ ಅಲೆಗೆ ಸಾಕ್ಷಿಯಾಗಿವೆ.

Advertisement

ಆದರೆ ಭಾರತವು ಮಾರಕ ಎರಡನೇ ಅಲೆಯಿಂದ ಹೊರಬರಲು ಹೆಣಗಾಡುತ್ತಿರುವಾಗ ಮೂರನೇ ಅಲೆಯ ಭಯ ಆವರಿಸಿದೆ. ಆದರೆ ಕೊರೊನಾದ ಮೂರನೇ ಅಲೆ ಯಾವಾಗ ಬರುತ್ತದೆ ಎಂದು ನಿಖರವಾಗಿ ಹೇಳಲಾಗದು ಎಂದು ತಜ್ಞರು ತಿಳಿಸಿರುವರಾದರೂ ಸದ್ಯದಲ್ಲಿಯೇ ಇದು ದೇಶವನ್ನು ಕಾಡುವ ಸಾಧ್ಯತೆಯನ್ನು ಕೂಡ ಅಲ್ಲಗಳೆಯಲಾಗದು ಎಂದು ಹೇಳುವ ಮೂಲಕ ಅಡ್ಡಗೋಡೆಯ ಮೇಲೆ ದೀಪ ಇರಿಸಿದ್ದಾರೆ. ವೈರಸ್‌ನ ಈ ತೆರನಾದ ರೂಪಾಂತರಗಳು ಸಹಜ.

ಸದ್ಯ ದೇಶದ ವಿವಿಧ ರಾಜ್ಯಗಳು ಮತ್ತು ಪ್ರದೇಶಗಳಲ್ಲಿ ಎರಡನೇ ಅಲೆಯಲ್ಲಿ ರೂಪಾಂತರಿತ ವೈರಸ್‌ಗಳು ಸೋಂಕನ್ನು ಹರಡುತ್ತಿವೆ. ಇವುಗಳಲ್ಲಿ ಅತ್ಯಂತ ಅಪಾಯಕಾರಿ ಡಬಲ್‌ ಮ್ಯೂಟೆಂಟ್‌ ವೈರಸ್‌ ಆಗಿದ್ದು, ಇದನ್ನು ವಿಜ್ಞಾನಿಗಳು ಬಿ.1.617 ಎಂದು ಹೆಸರಿಸಿದ್ದಾರೆ. ಈ ರೂಪಾಂತರಿ ವೈರಸ್‌ ಭಾರತದಲ್ಲೇ ತಲೆ ಎತ್ತಿದೆ. ಇಲ್ಲಿಯವರೆಗೆ ಯುಕೆ ರೂಪಾಂತರವಾದ ಸಿಒವಿಐಡಿ, ಬ್ರೆಜಿಲ್‌ ರೂಪಾಂತರ, ದಕ್ಷಿಣ ಆಫ್ರಿಕಾ ರೂಪಾಂತರ ಮತ್ತು ಅಮೆರಿಕದಲ್ಲಿ ಸಹ ಕೋವಿಡ್‌ ವೈರಸ್‌ ಒಂದು ರೂಪಾಂತರವನ್ನು ಹೊಂದಿದೆ. ಇದೇ ವೇಳೆ  ವೈರಸ್‌ನ ಇನ್ನೂ ಹಲವು ರೂಪಾಂತರಗಳನ್ನು ದೇಶದ ವಿವಿಧ ರಾಜ್ಯಗಳಲ್ಲಿ ಗುರುತಿಸಲಾಗಿದೆಯಾದರೂ ಇವಿನ್ನೂ ದೃಢೀಕರಿಸಲ್ಪಟ್ಟಿಲ್ಲ.

ಮೂರನೇ ಅಲೆಯ ಅಪಾಯ ಏನು? :

ಕೋವಿಡ್ ಮೊದಲ ಅಲೆಯ ವೈರಸ್‌ಗಳು ಮನುಷ್ಯನ ದೇಹ ಸೇರಿದ 10 ದಿನಗಳಲ್ಲಿ ಶ್ವಾಸಕೋಶವನ್ನು ಹಾನಿಮಾಡುತ್ತದೆ ಎಂದು ತಜ್ಞರು ಹೇಳಿದ್ದರು. ಆದರೆ ಎರಡನೇ ಅಲೆಯಲ್ಲಿ ಇದರ ತೀವ್ರತೆ ಮತ್ತಷ್ಟು ಹೆಚ್ಚಾಗಲು ಪ್ರಾರಂಭವಾಯಿತು. ಈ ಅವಧಿ 5ರಿಂದ 7 ದಿನಗಳಿಗೆ ಇಳಿಕೆಯಾಗಿದೆ. ಮುಂಬರುವ ಮೂರನೇ ಅಲೆಯಲ್ಲಿ ಇದು 2ರಿಂದ 3 ದಿನಗಳಲ್ಲೇ ಶ್ವಾಸಕೋಶಕ್ಕೆ ದಾಳಿ ಮಾಡಲಿದೆ. ಅಂದರೆ ಮೂರನೇ ಅಲೆಯ ವೈರಸ್‌ ತಗಲಿದ ಎರಡು ಮೂರು ದಿನಗಳಲ್ಲಿ ಗಂಭೀರ ಸ್ವರೂಪದ ಕಾಯಿಲೆಗಳು ಸೋಂಕಿತರನ್ನು ಕಾಡಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

Advertisement

ಮಕ್ಕಳೇ ಟಾರ್ಗೆಟ್‌? :

ಈಗಾಗಲೇ ನಡೆದಿರುವ ಅಧ್ಯಯನಗಳು ಕಂಡುಕೊಂಡಂತೆ ಮೂರನೇ ಅಲೆಯಲ್ಲಿ ಮಕ್ಕಳು ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಮಕ್ಕಳನ್ನು “ಸೂಪರ್‌ ಸ್ಪ್ರೆಡರ್’ ಎಂದೂ ಕರೆಯಲಾಗುತ್ತದೆ. ಒಂದು ಅಧ್ಯಯನದ ಪ್ರಕಾರ ಪ್ರಸ್ತುತ 18 ವರ್ಷದೊಳಗಿನವರು ಭಾರತದ ಒಟ್ಟು ಜನಸಂಖ್ಯೆಯ ಶೇ. 30ರಷ್ಟಿದ್ದಾರೆ. ಹೀಗಾಗಿ ಇವರಿಗೂ ಲಸಿಕೆಯನ್ನು ನೀಡಲೇಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಸದ್ಯ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಪ್ರಕ್ರಿಯೆ ಲಸಿಕೆ ಕೊರತೆಯ ಕಾರಣದಿಂದಾಗಿ ಆಮೆಗತಿಯಲ್ಲಿ ಸಾಗಿರುವಾಗ ಇನ್ನು ಮಕ್ಕಳಿಗೆ ಲಸಿಕೆ ನೀಡಿಕೆ ಪ್ರಕ್ರಿಯೆ ಆರಂಭಗೊಳ್ಳಲು ತಿಂಗಳುಗಳೇ ಬೇಕಾದೀತು. ಇನ್ನು  ಅಧ್ಯಯನದಲ್ಲಿ ಕಂಡುಕೊಂಡಂತೆ 18 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಹಾಕಿದರೂ ಮೂರನೇ ಅಲೆಯ ವೈರಸ್‌ 18 ವರ್ಷದೊಳಗಿನ ಮಕ್ಕಳ ಮೇಲೆ ದಾಳಿ ಮಾಡಲಿದೆ. ಅದರಲ್ಲೂ ವಿಶೇಷವಾಗಿ 6ರಿಂದ 12 ವರ್ಷದೊಳಗಿನ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲೇಬೇಕಿದೆ.

16 ಕೋಟಿ ಜನರಿಗೆ  ಡೋಸ್‌ ? : ದೇಶದಲ್ಲಿ ಈ ವರೆಗೆ ಸುಮಾರು 16.24 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಭಾರತವು ತನ್ನ ಜನಸಂಖ್ಯೆಯ ಸುಮಾರು  ಶೇ.11 ರಷ್ಟು ಜನರಿಗೆ ಮಾತ್ರ ಲಸಿಕೆ ಹಾಕಿದೆ. ಈ ಪೈಕಿ ಲಸಿಕೆಯ ಮೊದಲ ಡೋಸ್‌ ತೆಗೆದುಕೊಂಡವರ ಸಂಖ್ಯೆ ಸುಮಾರು 13 ಕೋಟಿಯಾಗಿದ್ದು ಎರಡೂ ಡೋಸ್‌ಗಳನ್ನು ತೆಗೆದುಕೊಂಡವರ ಸಂಖ್ಯೆ ಸುಮಾರು 3 ಕೋಟಿ. ಈ ಮೂಲಕ ಶೇ.2ರಷ್ಟು ಮಂದಿ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ.

ಲಸಿಕೆಗೆ ಶಿಫಾರಸು :

ಸದ್ಯ ಲಭ್ಯವಿರುವ ಕೋವಿಡ್ ನಿರೋಧಕ ಲಸಿಕೆಯನ್ನು  ಮಕ್ಕಳಿಗೆ ನೀಡಲು ಸಾಧ್ಯವಿಲ್ಲ. ಈಗಾಗಲೇ ಕೊರೊನಾದ ಭೀಕರ ಮುಖವನ್ನು ಕಂಡಿರುವ ವೈದ್ಯ ಲೋಕ ಈ ಮಾತನ್ನು ಒಪ್ಪಿಕೊಳ್ಳುತ್ತದೆ ಯಾದರೂ ಇದು ಅಷ್ಟೊಂದು ಆತಂಕಕಾರಿ ವಿಚಾರವಲ್ಲ ಎಂದು ಹೇಳಿದೆ. 18ಕ್ಕಿಂತ ಕಡಿಮೆ  ವಯಸ್ಸಿನವರಿಗೆ ಪ್ರತ್ಯೇಕವಾದ ಲಸಿಕೆಯನ್ನು ಸಂಶೋಧಿಸಿದರೆ 3ನೇ ಅಲೆಯನ್ನು ಯಶಸ್ವಿಯಾಗಿ ಎದುರಿಸಬಹು ದಾಗಿದೆ. ಈಗಾಗಲೇ ಲಸಿಕೆಯನ್ನು ಸಂಶೋಧಿಸಲಾಗಿರುವುದರಿಂದ ಮಕ್ಕಳಿಗೆ ಲಸಿಕೆ ಸಂಶೋಧಿಸುವುದು ಕಷ್ಟಸಾಧ್ಯವೇ ನಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿ ದ್ದಾರೆ. ಸೋಂಕು ಬಂದ ಬಳಿಕ ಹೋರಾಡು ವುದಕ್ಕಿಂತ ಮೊದಲೇ ಎಚ್ಚೆತ್ತುಕೊಳ್ಳುವುದು ಅತೀ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜನರು ಭಯಭೀತರಾಗುವ ಬದಲು ಒಂದಿಷ್ಟು ಮುಂಜಾಗ್ರತೆ ವಹಿಸುವುದು ಅತೀ ಮುಖ್ಯವಾಗಿದೆ.

ಮಹಾರಾಷ್ಟ್ರ  ಮಕ್ಕಳಿಗಾಗಿ  ಪ್ರತ್ಯೇಕ ವಾರ್ಡ್‌ : ಮೂರನೇ ಅಲೆಯು  ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಲೇ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸರಕಾರವು ಮಕ್ಕಳ ಕಾರ್ಯಪಡೆ ಸ್ಥಾಪಿಸಿದೆ. ಮೊದಲ ಅಲೆಯಲ್ಲಿ ಕಲ್ಯಾಣ್‌ ಡೊಂಬಿವಲಿ ಮಹಾನಗರ ಪ್ರದೇಶದಲ್ಲಿ 5,268 ಮಕ್ಕಳು ಸೋಂಕಿಗೆ ಒಳಗಾಗಿದ್ದರು. ಪ್ರಸ್ತುತ ಎರಡನೇ ಅಲೆಯಲ್ಲಿ ಕೇವಲ 3 ತಿಂಗಳಲ್ಲಿ 2,183 ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕಲ್ಯಾಣ್‌ – ಡೊಂಬಿವಲಿ ಮಹಾನಗರ ಪಾಲಿಕೆ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸೋಂಕಿತ ಮಕ್ಕಳ ಚಿಕಿತ್ಸೆಗಾಗಿ ಡೊಂಬಿವಲಿಯಲ್ಲಿ ಎಲ್ಲ ಸೌಲಭ್ಯಗಳು ಮತ್ತು 50 ಹಾಸಿಗೆಗಳನ್ನು ಹೊಂದಿರುವ ವಿಶೇಷ ಮಕ್ಕಳ ವಾರ್ಡ್‌ ನಿರ್ಮಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಇತರ ಭಾಗಗಳಲ್ಲಿಯೂ ಇಂತಹ ವಿಶೇಷ ವಾರ್ಡ್‌ ಗಳನ್ನು ಸರಕಾರ ನಿರ್ಮಿಸಲಿದೆ.

ತಜ್ಞರು ಹೇಳುವುದೇನು? :

ಕೋವಿಡ್ ಮೊದಲ ಅಲೆಯಲ್ಲಿ ವಯಸ್ಸಾದವರ ಮೇಲೆ ವೈರಸ್‌ ದಾಳಿ ಮಾಡಿತ್ತು. ಆದರೆ ಎರಡನೇ ಅಲೆಯ ವೇಳೆ ಇದು ಯುವ ಮತ್ತು ಮಧ್ಯ ವಯಸ್ಕರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಇನ್ನು ಮುಂದಿನ ಮೂರನೇ ಅಲೆಯಲ್ಲಿ ಇದು ಮಕ್ಕಳಿಗೆ ಅಪಾಯಕಾರಿಯಾಗಿದೆ ಎಂದು ಕೆಲವೊಂದು ಅಧ್ಯಯನ ವರದಿಗಳಲ್ಲಿ ಎಚ್ಚರಿಸಲಾಗಿದೆ. ಆಂಧ್ರಪ್ರದೇಶದಲ್ಲಿ ಈಗ ಪತ್ತೆಯಾಗಿರುವ ರೂಪಾಂತರಿ ವೈರಸ್‌ ಕೂಡ ಅದೇ ರೀತಿಯಲ್ಲಿ  ಹರಡುತ್ತಿದ್ದು 2ರಿಂದ 3 ದಿನಗಳಲ್ಲಿ ರೋಗಿಯನ್ನು ಐಸಿಯುಗೆ ದಾಖಲಿಸುವಂತೆ ಮಾಡುತ್ತಿದೆ. ಇದು ಅತ್ಯಂತ ಗಂಭೀರವಾಗಿದ್ದು, ಸೋಂಕಿತರ ಪಾಲಿಗೆ ಮರಣಾಂತಿಕವಾಗಿದೆ. ಇದು ಉಳಿದ ರೂಪಾಂತರ ಗಳಿಗಿಂತ 15 ಪಟ್ಟು ಹೆಚ್ಚು ಅಪಾಯಕಾರಿ ಎಂಬುದು ತಜ್ಞರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next