Advertisement

ಕೋವಿಡ್ ಮಹಾಮಾರಿ 24 ಗಂಟೆಗಳಲ್ಲಿ ರಾಜ್ಯದ 3 ಪೊಲೀಸರು ಬಲಿ

12:53 PM Aug 06, 2020 | mahesh |

ಮುಂಬಯಿ: ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದ ಮೂರು ಮಂದಿ ಪೊಲೀಸ್‌ ಸಿಬಂದಿಗಳು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಒಟ್ಟು ರಾಜ್ಯದಲ್ಲಿ ಸೋಂಕಿಕೆ ಸಾವನ್ನಪ್ಪಿದ ಸಿಬಂದಿಗಳ ಸಂಖ್ಯೆ 107ಕ್ಕೆ ಏರಿಯಾಗಿದೆ. ರಾಜ್ಯದಲ್ಲಿ 231 ಪೊಲೀಸ್‌ ಸಿಬಂದಿ ಸೋಂಕಿಗೆ ತುತ್ತಾಗಿದ್ದಾರೆ.

Advertisement

ಮೃತ ಮೂವರೂ ಪೊಲೀಸರು ಕುಡಿತದ ಚಟವನ್ನು ಹೊಂದಿದ್ದ ಕಾನ್‌ಸ್ಟೆಬಲ್‌, ಇತರೆ ಕೆಲವು ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮರೋಲ್‌ ಪಿಟಿಎಸ್‌ನಲ್ಲಿ ರಿಸರ್ವ್‌ ಸಬ್‌ ಇನ್ಸ್‌ಪೆಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿದ್ದ ರಂಗನಾಥ್‌ ಅಚ್ಯುತ್‌ ಮಾನೆರ್ಕರ್‌ (51) ಅವರಲ್ಲಿ ಜುಲೈ 25 ರಂದು ಸೋಂಕಿನ ಲಕ್ಷಣಗಳು ಕಂಡುಬಂದಿದ್ದು, ಜೋಗೇಶ್ವರಿಯಲ್ಲಿರುವ ಟ್ರಾಮಾ ಕೇರ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಮಂಗಳವಾರ ನಿಧನ ಹೊಂದಿದರು. 2ನೇ ಪ್ರಕರಣದಲ್ಲಿ ಥಾಣೆ ನಗರ ಪೊಲೀಸ್‌ ಪ್ರಧಾನ ಕಚೇರಿಯ ಕಾನ್‌ಸ್ಟೆಬಲ್‌ ದೀಪಕ್‌ ಕಿಶನ್‌ ಮೋರ್‌ (46) ಅವರು ಜುಲೈ 28ರಿಂದ ಥಾಣೆ ವೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಹ್ಮದ್‌ನಗರ ಜಿಲ್ಲೆಯ ಸೋನೈ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ಸಂಜಯ್‌ ಲಕ್ಷ್ಮಣ್‌ ಪೋಟೆ (32) ಕೂಡ ಚಿಕಿತ್ಸೆ ಸಂದರ್ಭ ಮೃತಪಟ್ಟಿದ್ದಾರೆ ಎಂದು ಅಹ್ಮದ್‌ನಗರ ಪೊಲೀಸ್‌ ಅಧೀಕ್ಷಕ ಅಖೀಲೇಶ್‌ ಸಿಂಗ್‌ ಹೇಳಿದ್ದಾರೆ.

ಈವರೆಗೆ 10 ಅಧಿಕಾರಿಗಳು ಸೇರಿದಂತೆ 9,934 ಮಹಾರಾಷ್ಟ್ರ ಪೊಲೀಸ್‌ ಸಿಬಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದು. ಪ್ರಸ್ತುತ 1,877 ಸಕ್ರಿಯ ಪ್ರಕರಣಗಳಿವೆ. ಈ ವರೆಗೆ ಸೋಂಕಿನಿಂದ 7,950ಕ್ಕೂ ಅಧಿಕ ಸಿಬಂದಿ ಚೇತರಿಸಿಕೊಂಡಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸ್‌ ಸಹಾಯಕ ಇನ್ಸ್‌ಪೆಕ್ಟರ್‌ ಜನರಲ್‌ (ಕಾನೂನು ಮತ್ತು ಸುವ್ಯವಸ್ಥೆ) ವಿನಾಯಕ್‌ ದೇಶಮುಖ್ ಹೇಳಿದ್ದಾರೆ. ಮುಂಬಯಿ ಪೊಲೀಸ್‌ ಸಿಬಂದಿಯಲ್ಲಿ ಸುಮಾರು 3,900 ಮಂದಿ ಸೋಂಕಿಗೆ ತುತ್ತಾಗಿದ್ದು, 56 ಮಂದಿ ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next