Advertisement
ಡಿಸಿ ಕಚೇರಿಯಲ್ಲಿ ಗುರುವಾರ ಕೋವಿಡ್ ನಿಯಂತ್ರಣ ಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಲಸಿಕೆ ಹಾಕಿಕೊಳ್ಳುವುದರಿಂದ ರೋಗನಿರೋಧಕ ಶಕ್ತಿ ವರ್ಧನೆಯಾಗಲಿದೆ. ಆರೋಗ್ಯಪೂರ್ಣ ಜೀವನಸುಲಭವಾಗಲಿದೆ ಎಂದರು.
Related Articles
Advertisement
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಯಶವಂತ ಮದೀನಕರ ಅವರು ಜಿಲ್ಲೆಯ ಕೋವಿಡ್ ತಪಾಸಣೆ, ಲಸಿಕೆ ಹಾಗೂ 2ನೇ ಅಲೆಯ ಪ್ರಕರಣಗಳ ಚಿಕಿತ್ಸೆಗೆ ಮಾಡಿಕೊಂಡಿರುವ ಸಿದ್ಧತೆಗಳನ್ನು ಸಭೆಗೆ ವಿವರಿಸಿದರು. ಮಹಾನಗರ ಪಾಲಿಕೆ ಆಯುಕ್ತಡಾ| ಸುರೇಶ ಇಟ್ನಾಳ, ಹೆಸ್ಕಾಂ ಪ್ರಧಾನವ್ಯವಸ್ಥಾಪಕ ಇಬ್ರಾಹಿಂ ಮೈಗೂರ, ಪ್ರಭಾರ ಅಪರ ಜಿಲ್ಲಾಧಿಕಾರಿ ರುದ್ರೇಶ,
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ|ಎಸ್. ಎಂ. ಹೊನಕೇರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಸು ಜಾತಾ ಹಸವಿಮಠ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ| ಶಶಿ ಪಾಟೀಲ, ಡಾ| ಅಯ್ಯನಗೌಡ ಪಾಟೀಲ, ಡಾ| ಲಕ್ಷ್ಮೀಕಾಂತ ಲೋಕರೆ, ಡಾ| ಮಹೇಶ ಇನ್ನಿತರರಿದ್ದರು.
ಶೇ.99 ಪೊಲೀಸ್ ಸಿಬ್ಬಂದಿಗೆ ಲಸಿಕೆ; ಶ್ಲಾಘನೆ :
ಅವಳಿನಗರ ಪೊಲೀಸ್ ಆಯುಕ್ತಾಲಯ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಶೇ.99.05 ಸಿಬ್ಬಂದಿ ಕೋವಿಡ್ ನಿರೋಧಕ ಲಸಿಕೆ ಹಾಕಿಸಿಕೊಂಡಿರುವುದು ಪ್ರಶಂಸನೀಯ. ಈ ಕಾರ್ಯಕ್ಕೆ ಪ್ರೇರಣೆ ನೀಡಿದ ನಗರ ಪೊಲೀಸ್ ಆಯುಕ್ತ ಲಾಬೂರಾಮ, ಎಸ್‌ಪಿ ಪಿ. ಕೃಷ್ಣಕಾಂತ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹಾಗೂ ಡಿಸಿ ನಿತೇಶ್ ಪಾಟೀಲ ಸಭೆಯಲ್ಲಿ ಅಭಿನಂದಿಸಿದರು.
ಕೋವಿಡ್ ಎರಡನೇ ಅಲೆ ಪರಿಣಾಮವಾಗಿ ಜಿಲ್ಲೆಯಲ್ಲಿ ಎರಡು ಮರಣ ಪ್ರಕರಣಗಳು ವರದಿಯಾಗಿವೆ. ಧಾರವಾಡದ ಮದಾರಮಡ್ಡಿಯ60 ವರ್ಷದ ಪುರುಷರೊಬ್ಬರು ಕಿಮ್ಸ್‌ನಲ್ಲಿ ಹಾಗೂ ಹುಬ್ಬಳ್ಳಿಯ ಗೋಕುಲರಸ್ತೆಯ ರಾಜಧಾನಿ ಕಾಲೋನಿಯ 76 ವರ್ಷದ ಪುರುಷರೊಬ್ಬರು ಎಸ್‌ಡಿಎಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಎರಡೂ ಸಾವು ಮಾ. 28ರಂದು ಸಂಭವಿಸಿವೆ. -ನಿತೇಶ ಪಾಟೀಲ, ಜಿಲ್ಲಾಧಿಕಾರಿ