Advertisement

ಎರಡನೇ ಅಲೆ ತಡೆಗೆ ಜಿಲ್ಲಾಡಳಿತ ಸಿದ್ಧ

05:30 PM Apr 10, 2021 | Team Udayavani |

ಕೊಪ್ಪಳ: ಕೋವಿಡ್‌-19 ಎರಡನೇ ಅಲೆಯೂ ಎಲ್ಲೆಡೆ ಅಬ್ಬರಿಸುತ್ತಿದೆ. ಜಿಲ್ಲೆಯಲ್ಲಿ ಒಂದು ವಾರದಲ್ಲಿ ಸೋಂಕಿತರ ಸಂಖ್ಯೆಯೂ ನೂರರ ಗಡಿ ದಾಟಿದ್ದು, ಜಿಲ್ಲಾಡಳಿತವು ಸೋಂಕಿತರ ಚಿಕಿತ್ಸೆಗೆ ಸಿದ್ಧವಾಗಿದೆ.

Advertisement

ಐಸಿಯು, ವೆಂಟಿಲೇಟರ್‌, ಆಕ್ಸಿಜನ್‌ ವ್ಯವಸ್ಥೆ ಸೇರಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಕಾಯ್ದಿರಿಸಿದೆ. ಇಷ್ಟಾದರೂ ಜಿಲ್ಲೆಯ ಜನತೆ ಸೋಂಕಿನ ಬಗ್ಗೆ ಮೈಮರೆತು ನಿಯಮಗಳನ್ನು ಗಾಳಿಗೆ ತೂರಿ ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದಾರೆ.

ಹೌದು.. ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನ ಬಗ್ಗೆ ಕಳೆದ ವರ್ಷ ಜನರಲ್ಲಿದ್ದ ಭಯ ಈಗ ಕಾಣುತ್ತಿಲ್ಲ. ಜಾಗೃತಿಯೂ ಕಡಿಮೆಯಾಗಿದೆ. ಹಾಗಾಗಿ 2ನೇ ಅಲೆ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದೆ.

13 ಕಡೆ ಕೋವಿಡ್‌ ಕೇರ್‌ ಸೆಂಟರ್‌: ಇನ್ನೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಕ್ರಮೇಣ ಹೆಚ್ಚಳವಾಗುತ್ತಿದ್ದಂತೆ ಜಿಲ್ಲಾಡಳಿತವು ಮತ್ತೆ ಗಂಗಾವತಿ ಹಾಗೂ ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಪ್ರಸ್ತುತ ಕೋವಿಡ್‌ ಆಸ್ಪತ್ರೆ ಆರಂಭಿಸಿದೆ. ಇನ್ನೂ ಮುಂಜಾಗೃತಿಗಾಗಿ ಜಿಲ್ಲೆಯ ಪ್ರಾಥಮಿಕ, ಸಮುದಾಯಿಕ ಆಸ್ಪತ್ರೆ, ಇತರೆ ಆಸ್ಪತ್ರೆಯಲ್ಲಿ ಕೋವಿಡ್‌ಗಾಗಿ ಹಾಸಿಗೆಗಳ ವ್ಯವಸ್ಥೆ ಮಾಡಿ, 870 ಬೆಡ್‌ಗಳನ್ನು ಕಾಯ್ದಿರಿಸಿದೆ. ಇವುಗಳಲ್ಲಿ661 ಆಕ್ಸಿಜನ್‌ ಬೆಡ್‌ಗಳಾಗಿದ್ದರೂ ಪ್ರಸ್ತುತ 231 ಬೆಡ್‌ ಕಾರ್ಯ ನಿರ್ವಹಿಸುತ್ತಿವೆ.

56 ಐಸಿಯು ಬೆಡ್‌ಗಳ ವ್ಯವಸ್ಥೆ: ಇನ್ನೂ ಜಿಲ್ಲೆಯವಿವಿಧ ಆಸ್ಪತ್ರೆಗಳಲ್ಲಿ 56 ಐಸಿಯು ಬೆಡ್‌ಗಳ ವ್ಯವಸ್ಥೆಮಾಡಲಾಗಿದೆ. ಈ ಪೈಕಿ 43 ಕೋವಿಡ್‌ಗಾಗಿಯೇ ಕಾರ್ಯ ನಿರ್ವಹಿಸಲಿವೆ. ಇದಲ್ಲದೇ ಐಸಿಯು ಬೆಡ್‌ಗಳಲ್ಲಿ 51 ಬೆಡ್‌ಗಳಿಗೆ ಆಕ್ಸಿಜನ್‌ ಅಳವಡಿಕೆ ಮಾಡಲಾಗಿದೆ. ಆದರೆ ಪ್ರಸ್ತುತ ಕೊಪ್ಪಳ ಹಾಗೂ ಗಂಗಾವತಿ ಸರ್ಕಾರಿ ಆಸ್ಪತ್ರೆಗಳು ಮಾತ್ರ ಕೋವಿಡ್‌ ಆಸ್ಪತ್ರೆಗಳಾಗಿ ಕಾರ್ಯ ನಿರ್ವಹಿಸುತ್ತಿವೆ.

Advertisement

ಹೋಂ ಐಸೋಲೇಷನ್‌ಗೆ ಒತ್ತು: ಪ್ರಸ್ತುತ ಎರಡನೇಅಲೆಯು ಉಲ್ಬಣಿಸಿದ ಹಿನ್ನೆಲೆಯಲ್ಲಿ ಸೋಂಕುಕಾಣಿಸಿಕೊಂಡ ಪ್ರತಿಯೊಬ್ಬರಿಗೂ ಜಿಲ್ಲಾಡಳಿತವು ಹೋಂ ಐಸೋಲೇಷನ್‌ಗೆ ಒಳಗಾಗುವಂತೆ,ಸರ್ಕಾರದ ನಿಯಮಗಳನ್ನು ಕಡ್ಡಾಯ ಪಾಲನೆಮಾಡುವಂತೆ ಸೂಚನೆ ನೀಡುತ್ತಿದೆ. ತೀವ್ರತರ ತೊಂದರೆ ಎದುರಾದರೆ ಅವರನ್ನು ಮಾತ್ರ ಕೋವಿಡ್‌ ಆಸ್ಪತ್ರೆಗೆದಾಖಲಿಸಿ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದೆ. ಈಪೈಕಿ ಪ್ರಸ್ತುತ 145 ಸಕ್ರಿಯ ಕೋವಿಡ್‌ ಕೇಸ್‌ಗಳಿದ್ದು,133 ಹೋಂ ಐಸೋಲೇಷನ್‌ನಲ್ಲಿದ್ದರೆ, 12 ಜನರಿಗೆಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆಸ್ಪತ್ರೆಗಳ ಸುಧಾರಣೆ: ಕಳೆದ ವರ್ಷ ಸೋಂಕುಉಲ್ಬಣಿಸಿದಾಗ ಜಿಲ್ಲಾಸ್ಪತ್ರೆ ಸೇರಿ ಇತರೆ ಆಸ್ಪತ್ರೆಗಳಲ್ಲಿಬೆಡ್‌ ವ್ಯವಸ್ಥೆ, ಆಕ್ಸಿಜನ್‌ ಹಾಗೂ ಐಸಿಯು ವಾರ್ಡ್ ಗಳಲ್ಲಿ ವೆಂಟಿಲೇಟರ್‌ಗಳ ವ್ಯವಸ್ಥೆಯೇ ಇರಲಿಲ್ಲ.ಇದರಿಂದ ಸಾವು, ನೋವು ಸಂಭವಿಸಿದ್ದವು. 2ನೇ ಅಲೆಯ ವೇಳೆಗೆ ಜಿಲ್ಲೆಯ ವಿವಿಧೆಡೆ ಪೂರ್ವಯೋಜನೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷಕ್ಕಿಂತಈ ವರ್ಷ ಆಸ್ಪತ್ರೆಗಳಲ್ಲಿ ಕೆಲವು ಸೌಲಭ್ಯಗಳು ಲಭ್ಯಇವೆ. ಇದು ಸ್ವಲ್ಪ ಸಮಾಧಾನದ ಸಂಗತಿಯಾಗಿದೆ.

ಸೋಂಕು ಮೈ ಮರೆತ ಜನ: ಜಿಲ್ಲೆಯ ಸಂತೆ, ಮಾರುಕಟ್ಟೆ, ಅಂಗಡಿ-ಮುಂಗಟ್ಟು ಸೇರಿ ಇತರೆಡೆಜನರು ನಿತ್ಯದ ವಹಿವಾಟಿನಲ್ಲಿ ತೊಡಗುತ್ತಿದ್ದಾರೆ. ಆದರೆ ಮಾಸ್ಕ್ ಧರಿಸುವುದು, ಸಾಮಾಜಿಕಅಂತರವನ್ನು ಕಾಪಾಡುವುದು, ಕೈಗೆ ಸ್ಯಾನಿಟೈಸರ್‌ಬಳಕೆ ಮಾಡುವುದು ತುಂಬ ಕಡಿಮೆಯಾಗಿದೆ. ಮಾಸ್ಕ್ಧರಿಸದಿದ್ದರೆ ದಂಡ ಹಾಕುವ ನಿಯಮಗೊತ್ತಿದ್ದರೂ ಜನರು ಮಾಸ್ಕ್ ಧರಿಸುತ್ತಿಲ್ಲ. ಸೋಂಕಿನ ಬಗ್ಗೆ ಜನರು ಮೈಮರೆತು ನಿರ್ಲಕ್ಷ್ಯ ಭಾವನೆ ತಾಳುತ್ತಿರುವುದು ನಿಜಕ್ಕೂ ಜಿಲ್ಲಾಡಳಿತಕ್ಕೆ ಆತಂಕವನ್ನುಂಟು ಮಾಡಿದೆ.

ಕೋವಿಡ್‌ ಎರಡನೇ ಅಲೆಯು ಕಾಣಿಸಿಕೊಂಡಿದೆ. ಜಿಲ್ಲೆಯ ಜನರು ಸೋಂಕಿನ ಬಗ್ಗೆ ಜಾಗೃತರಾಗಿರಬೇಕು. ಕೊಪ್ಪಳ ಹಾಗೂ ಗಂಗಾವತಿಯಲ್ಲಿ ಕೋವಿಡ್‌ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಅಗತ್ಯ ಬಿದ್ದರೆ ವಿವಿಧ ಆಸ್ಪತ್ರೆ ಸೇರಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ನಾವು ಸಿದ್ಧರಿದ್ದೇವೆ.

ಸೋಂಕಿತರ ಚಿಕಿತ್ಸೆಗೆ ಖಾಸಗಿ ಮೋರೆ : ಇನ್ನೂ ಕೊಪ್ಪಳ ಹಾಗೂ ಗಂಗಾವತಿ ತಲಾ ನಾಲ್ಕು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆಗೆ ಸ್ಪಂದಿಸುವಂತೆ ಜಿಲ್ಲಾಡಳಿತ ಸೂಚನೆನೀಡಿದೆ. ಸರ್ಕಾರದ ನಿಯಮದ ಅನ್ವಯಶೇ. 50ರಷ್ಟು ಬೆಡ್‌ಗಳನ್ನು ಕೋವಿಡ್‌ಗಾಗಿಯೇ ಕಾಯ್ದಿರಿಸುವಂತೆಯು ಸೂಚಿಸಿದೆ.

ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್‌ ಚಿಕಿತ್ಸೆಗೆವ್ಯವಸ್ಥೆಯಿದೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿಸರ್ಕಾರದ ದರಕ್ಕೂ ಮೀರಿ ಲಕ್ಷ ಲಕ್ಷಹಣ ವಸೂಲಿ ಮಾಡುತ್ತಿದ್ದು, ಈ ಬಗ್ಗೆಜಿಲ್ಲಾಡಳಿತವೂ ಮೌನವಹಿಸಿರುವುದು ಜನಾಕ್ರೋಶಕ್ಕೂ ಕಾರಣವಾಗಿದೆ. ಈ ಮೊದಲು ಸರ್ಕಾರಿ ಕೋವಿಡ್‌ ಆಸ್ಪತ್ರೆಗಳಲ್ಲಿಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಅವರು ಆಸ್ಪತ್ರೆಯ ಬೆಡ್‌ನ‌ಲ್ಲಿದ್ದಾಗ ವೈದ್ಯರುಒಳಗೆ ತೆರಳುವುದು ಬಿಟ್ಟು, ನರ್ಸ್‌ಗಳ ಮೂಲಕವೇ ಅವರಿಗೆ ಔಷಧಿ ನೀಡುತ್ತಿದ್ದರುಎನ್ನುವ ಆಪಾದನೆ ಬಂದಿತ್ತು. ಜಿಲ್ಲಾಡಳಿತ ಈ ಬಗ್ಗೆ ನಿಗಾ ವಹಿಸಲು ಕೊನೆಗೂ ಕೋವಿಡ್‌ಸೆಂಟರ್‌ನಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಿ ಹೆಚ್ಚು ನಿಗಾ ವಹಿಸಿದೆ.

ಅಲ್ಲದೇ ಪ್ರಸ್ತುತ ಹೋಂ ಐಸೋಲೇಷನ್‌ಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಅಗತ್ಯವಿದ್ದರೆ ಮಾತ್ರ ಆಸ್ಪತ್ರೆಯಲ್ಲಿಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಕಡಿಮೆಯಿದೆ.  -ವಿಕಾಸ ಕಿಶೋರ ಸುರಳ್ಕರ್‌, ಕೊಪ್ಪಳ ಜಿಲ್ಲಾಧಿಕಾರಿ

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next