ಕೊಪ್ಪಳ: ಜಿಲ್ಲೆಯಲ್ಲಿ ಲಾಕ್‌ಡೌನ್ ಜಾರಿ ಮಾಡಿದಾಗಿನಿಂದ ಎಲ್ಲವೂ ರೈತರ ಮೇಲೆಯೇ ಪೆಟ್ಟು ಬೀಳಲಾರಂಭಿಸಿದೆ. ಅವರ ಜಮೀನಿನಲ್ಲಿ ಫಸಲು ಇದೆ. ಆದರೆ ಮಾರಾಟಕ್ಕೆ ಮಾರುಕಟ್ಟೆಯೂ ಸಿಗುತ್ತಿಲ್ಲ. ಬೆಲೆಯೂ ಸಿಗುತ್ತಿಲ್ಲ. ಇದರಿಂದ ತನ್ನ ಕೈಯಾರೆ ಬೆಳೆ ನಾಶ ಮಾಡುವ ಹಂತಕ್ಕೂ ತೆರಳುತ್ತಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ದಾನಿಗಳು ನೆರವಾಗಬೇಕಿದೆ.
ಹೌದು. ತಾಲೂಕಿನ ಓಜಿನಹಳ್ಳಿಯ ಗ್ರಾಮದ ರೈತ ಚಿನ್ನಪ್ಪ ಮೇಟಿ ಅವರ ಜಮೀನಿನಲ್ಲಿ ಬೆಳೆದಿರುವ 3 ಎಕರೆ ಹೂಕೋಸು ನಾಶ ಮಾಡಿ ಕಣ್ಣೀರಿಟ್ಟಿದ್ದಾನೆ. ಪ್ರತಿ ಎಕರೆಗೂ 30-40 ಸಾವಿರ ರೂ. ವೆಚ್ಚ ಮಾಡಿ ಬೆಳೆದಿದ್ದಾನೆ. ಮೂರು ಎಕರೆ ಸೇರಿ 1 ಲಕ್ಷ ರೂ. ವೆಚ್ಚ ಮಾಡಿದ್ದಾನೆ. ಹೊಲದಲ್ಲಿ ಕನಿಷ್ಟ 3 ಲಕ್ಷ ರೂ. ನಷ್ಟು ಹೂಕೋಸು ಇದೆ. ಜಿಲ್ಲಾ ಲಾಕ್‌ಡೌನ್ ಆದ ಬಳಿಕವಂತೂ ಇವರ ಹೂಕೋಸು ಯಾರೂ ಕೇಳದಂತ ಪರಿಸ್ಥಿತಿ ಬಂದಿದೆ. ಇದರಿಂದ ನೊಂದ ರೈತ ಎಷ್ಟಕ್ಕಾದರೂ ಹೋಗಲಿ ಎಂದು ಒಂದು ಟ್ರ್ಯಾಕ್ಟರ್‌ನಲ್ಲಿ ಕೊಪ್ಪಳ ಮಾರುಕಟ್ಟೆಗೆ ಹೂಕೋಸು ತೆಗೆದುಕೊಂಡು ಬಂದರೆ ಖರೀದಿಯೂ ಆಗಲೇ ಇಲ್ಲ. ಇದರಿಂದ ಟ್ರ್ಯಾಕ್ಟರ್ ಖರ್ಚು ಭರಿಸಲಾಗದಂತಹ ಸ್ಥಿತಿ ಎದುರಾಯಿತು.
ಹೀಗೆ ಜಿಲ್ಲೆಯಲ್ಲಿ ಲಾಕ್‌ಡೌನ್ ಆದಾಗಿನಿಂದ ರೈತ ಸಮುದಾಯಕ್ಕೆ ಒಂದಿಲ್ಲೊಂದು ಪೆಟ್ಟು ಬೀಳುತ್ತಿದೆ. ಜಿಲ್ಲೆಯಲ್ಲಿ ರೈತರ ತರಕಾರಿಗೆ ಬೆಲೆಯೇ ಸಿಗುತ್ತಿಲ್ಲ. ಆದರೆ ಮಾರುಕಟ್ಟೆಯಲ್ಲಿ ಯಾವುದೇ ತರಕಾರಿಯಬೆಲೆಯಂತೂ ಕಡಿಮೆ ಇಲ್ಲ. ಆದರೆ ಗ್ರಾಹಕರಿಗೆಮಾತ್ರ ಅಧಿಕ ಬೆಲೆಗೆ ಮಾರುತ್ತಿದ್ದಾರೆ. ಸರ್ಕಾರ ಕೃಷಿ ಉತ್ಪನ್ನ ಮಾರಾಟಕ್ಕೆ ನಿರ್ಬಂಧ ಇಲ್ಲ ಎಂದುಹೇಳುತ್ತಿದ್ದರೂ ರೈತರು ನಷ್ಟ ಅನುಭವಿಸುವುದು ತಪ್ಪಿಲ್ಲ.ಈರುಳ್ಳಿ, ಕುಂಬಳ, ಕಲ್ಲಂಗಡಿ,ಕರಿಬೇವು ಸೇರಿದಂತೆ ಇತರೆ ಉತ್ಪನ್ನವು ಇದೆ. ಆದರೆ ಮಾರುಕಟ್ಟೆಯಲ್ಲಿ ಸಂಕಷ್ಟ ಎದುರಿಸಿ ಜನರು ನೋವು ಅನುಭವಿಸುತ್ತಿದ್ದಾರೆ.
ನೆರವಿಗೆ ಮುಂದಾಗಿ: ಜಿಲ್ಲೆಯ ವಿವಿಧ ಭಾಗದಲ್ಲಿ ರೈತರ ಬಳಿ ಉತ ನ್ನ ಸಾಕಷ್ಟಿದೆ. ಆದರೆ ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಮಾರಾಟ ಮಾಡದೇ ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ನೋವಿಗೆ ಜಿಲ್ಲೆಯದಾನಿಗಳು ಆಸರೆಯಾಗಿ ಕಣ್ಣೀರು ಒರೆಸಬೇಕಿದೆ. ಜಿಲ್ಲಾದ್ಯಂತ ಜನತೆಗೆ ದಾನಿಗಳು ಕಿರಾಣಿ ಕಿಟ್ ವಿತರಣೆ ಮಾಡುತ್ತಿದ್ದಾರೆ. ತರಕಾರಿ ಪೂರೈಸುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿನ ರೈತರ ಬಳಿ ಇರುವ ಉತ ನ್ನವನ್ನೇನೇರ ಖರೀದಿ ಮಾಡಿ ಸಂಕಷ್ಟದಲ್ಲಿರುವವರಿಗೆ ಕೊಟ್ಟರೆ ಎರಡು ಕುಟುಂಬಕ್ಕೆ ಆಸರೆಯಾದಂತಾಗಲಿದೆ. ದಯವಿಟ್ಟುನಮ್ಮ ನೆರವಿಗೆ ಬನ್ನಿ ಎಂದು ಅನ್ನದಾತ ವಲಯ ಗೋಗರೆಯುತ್ತಿದೆ.
ಏನೇ ಖರೀದಿಸಿದ್ರೂ ರೈತರ ಉತ್ಪನ್ನವನ್ನ ಖರೀದಿ ಮಾಡಿ ಎಂದುಕೇಳಿಕೊಳ್ಳುತ್ತಿದ್ದಾರೆ. ಬೆಳೆಯನ್ನು ಯಾರೂ ಖರೀದಿ ಮಾಡದಿದ್ದರೆ ಅನಿವಾರ್ಯವಾಗಿ ಬೆಳೆ ನಾಶ ಮಾಡುವ ಪರಿಸ್ಥಿತಿ ಬರುತ್ತದೆ. ಈಗಾಗಲೇ ಹಲವು ರೈತರುತಮ್ಮ ಬೆಳೆಯನ್ನು ಕೈಯಾರೆ ನಾಶ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಲವರು ರೈತರ ನೆರವಿಗೆಧಾವಿಸಬೇಕಿದೆ.
ನಾವು ಕಷ್ಟಪಟ್ಟು ಹೂಕೋಸು ಬೆಳೆದಿದ್ದೇವೆ. ಕನಿಷ್ಟವೆಂದರೂ 3 ಲಕ್ಷ ರೂ. ಫಸಲಿದೆ.ಆದರೆ ಯಾರೂ ಖರೀದಿಮಾಡುತ್ತಿಲ್ಲ. ನಾವೇ ಕೊಪ್ಪಳಕ್ಕೆ ಟ್ರ್ಯಾಕ್ಟರ್‌ನಲ್ಲಿ ತೆಗೆದುಕೊಂಡು ಹೋಗಿ ಮಾರಾಟಕ್ಕೆ ಮುಂದಾದರೂಖರೀದಿಯಾಗಲಿಲ್ಲ. ಇದರಿಂದ ನಮಗೆ ದಿಕ್ಕು ತಿಳಿಯದಂತಾಗಿ ಬೆಳೆಯನ್ನು ಕೈಯಾರೆ ನಾಶ ಮಾಡುವಂತ ಸ್ಥಿತಿ ಬಂದಿದೆ. ಚಿನ್ನಪ್ಪ ಮೇಟಿ,
-ಓಜಿನಹಳ್ಳಿ ರೈತ