Advertisement

ದೇಶದಲ್ಲಿ ಪ್ರಥಮ ಪ್ರಕರಣ; ಕೋವಿಡ್ 19 ವೈರಸ್ ಗೆ 45 ದಿನದ ನವಜಾತ ಶಿಶು ಸಾವು

09:27 AM Apr 20, 2020 | Nagendra Trasi |

ನವದೆಹಲಿ: 45 ದಿನದ ಪುಟ್ಟ ಹಸುಳೆಗೆ ಮಾರಣಾಂತಿಕ ಕೋವಿಡ್ 19 ಸೋಂಕು ಪರೀಕ್ಷೆ ನಡೆಸಿದ ಬಳಿಕ ಸಾವನ್ನಪ್ಪಿರುವ ಘಟನೆ ನವದೆಹಲಿಯ ಆಸ್ಪತ್ರೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.

Advertisement

ಏಪ್ರಿಲ್ 14ರಂದು ದಿಲ್ಲಿಯ ಕಲಾವತಿ ಸಾರನ್ ಮಕ್ಕಳ ಆಸ್ಪತ್ರೆಗೆ ಶಿಶುವನ್ನು ದಾಖಲಿಸಲಾಗಿತ್ತು. ಏಪ್ರಿಲ್ 16ರಂದು ಮಗುವಿಗೆ ಕೋವಿಡ್ 19 ವೈರಸ್ ತಗುಲಿರುವುದು ವರದಿಯಲ್ಲಿ ದೃಢಪಟ್ಟಿತ್ತು. ಕೋವಿಡ್ ಗೆ ನವಜಾತ ಶಿಶು ಸಾವನ್ನಪ್ಪುವ ಮೂಲಕ ದೇಶದಲ್ಲಿ ಕೋವಿಡ್ ಗೆ ಅತೀ ಎಳೆ ಮಗು ಸಾವನ್ನಪ್ಪಿದ ಪ್ರಕರಣ ದಾಖಲಾಗಿದೆ.

ದೇಶಾದ್ಯಂತ ಹಲವು ನವಜಾತ ಶಿಶುಗಳನ್ನು ಪರೀಕ್ಷಿಸಿದ್ದು, ಪಾಸಿಟಿವ್ ವರದಿ ಬಂದಿರುವುದಾಗಿ ಹೇಳಿದೆ. ಪಿಟಿಐ ವರದಿ ಪ್ರಕಾರ, ಏ.19ರಂದು ಮಹಾರಾಷ್ಟ್ರದ ಪಾಲ್ಗಾಡ್ ಜಿಲ್ಲೆಯ ವಸೈ ವಿರಾರ್ ಮುನ್ಸಿಪಲ್ ವ್ಯಾಪ್ತಿಯಲ್ಲಿ 8ವರ್ಷದ ಮಗುವಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿದೆ.

ಕೆಲವು ದಿನಗಳ ಹಿಂದಷ್ಟೇ ಕೋಲ್ಕತಾದಲ್ಲಿ 21 ತಿಂಗಳ ಮಗುವಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿದೆ. ನಂತರ ಮಗುವನ್ನು ಕೂಡಲೇ ಬಿಜಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next