Advertisement

ಮನೆಯಿಂದಲೇ ಕೆಲಸಕ್ಕೆ ಒಗ್ಗದ ಜಪಾನಿಗರು

12:43 PM Apr 27, 2020 | sudhir |

ಕೋವಿಡ್ ವೈರಸ್‌ ಹೆಚ್ಚಾದ ಬಳಿಕ ಹಠಾತ್‌ ಜಪಾನ್‌ ಕಂಪೆನಿಗಳೆಲ್ಲವು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಉದ್ಯೋಗಿಗಳಿಗೆ ಸೂಚಿಸಿದವು. ಆದರೆ ಕಡಿಮೆ ತಂತ್ರ ಜ್ಞಾನದಿಂದಾಗಿ ಜಪಾನ್‌ ನೌಕರರು ಪರದಾಟ ನಡೆಸಿದ್ದಾರೆ ಎಂಬುದು ಅಧ್ಯಯನದಿಂದ ಬಹಿರಂಗಗೊಂಡಿದೆ. ಮನೆಯಲ್ಲಿ ಕೆಲಸ ನಿರ್ವಹಿಸಲು ಬೇಕಾಗಿರುವ ಕನಿಷ್ಠ ಸಲಕರಣೆಗಳು ಕೂಡ ಜಪಾನ್‌ ಜನರ ಬಳಿ ಇರಲಿಲ್ಲ. ಇದರಿಂದಾಗಿ ಲಾಕ್‌ಡೌನ್‌ ಘೋಷಣೆಯಾದ ಬೆನ್ನಲ್ಲೇ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಖರೀದಿಸಲು ಉದ್ಯೋಗಿಗಳು ಮುಗಿಬಿದ್ದರು.

Advertisement

ಜತೆಗೆ ಹೆಚ್ಚಿನ ಕಚೇರಿಗಳಲ್ಲಿ ಇನ್ನೂ ಕೂಡ ಕಾರ್ಪೋರೇಟ್‌ ಸಂಸ್ಕೃತಿ ಇರುವುದು ಲಾಕ್‌ಡೌನ್‌ ವೇಳೆ ಜಪಾನ್‌ಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇ ಮೇಲ್‌ ಇದ್ದರೂ ಅಲ್ಲಿನ ಹೆಚ್ಚಿನ ಜನ ಈಗಲೂ ಫ್ಯಾಕ್ಸ್‌ ಅನ್ನೇ ಅವಲಂಬಿಸುತ್ತಿದ್ದಾರೆ. ಇದು ಲಾಕ್‌ಡೌನ್‌ ಸಮಯದಲ್ಲಿ ಮನೆಯಿಂದ ಕೆಲಸಕ್ಕೆ ಅಡ್ಡಿಯನ್ನುಂಟು ಮಾಡಿದೆ, ಜತೆಗೆ ಹೈ ಸ್ಪೀಡ್‌ ಇಂಟರ್ನೆಟ್‌ ಕೂಡ ಇರಲಿಲ್ಲ.

ಇದೀಗ ಮನೆಯಲ್ಲಿ ಕಂಪ್ಯೂಟರ್‌ ಇಲ್ಲದಿದ್ದರೂ ಮೊಬೈಲ್‌ ಮೂಲಕ ಟೆಲಿವರ್ಕಿಂಗ್‌ ಅನ್ನು ಜಪಾನ್‌ ಕಂಪೆನಿಗಳು ಆರಂಭಿಸಿದೆ. ಆನ್‌ಲೈನ್‌ ಮೂಲಕ ಸಾವಿರಾರು ನೌಕರರಿಗೆ ತರಬೇತಿ ನೀಡಿದ ಬಳಿಕ ಟೆಲಿವರ್ಕಿಂಗ್‌ ಆರಂಭಿಸಲಾಗಿದೆ. ಇದರಿಂದಾಗಿ ಅಲ್ಪ ಸ್ವಲ್ಪ ಕೆಲಸವನ್ನು ಜಪಾನ್‌ ಉದ್ಯೋಗಿಗಳು ಮಾಡುವಂತಾಗಿದೆ.w

Advertisement

Udayavani is now on Telegram. Click here to join our channel and stay updated with the latest news.

Next