Advertisement
ಹಾಗೆ ನೋಡಿದರೆ ಸಿಂಗಾಪುರ ಹೆಚ್ಚು ಪ್ರವಾಸಿಗರನ್ನು ಹೊಂದಿರುವ ಮತ್ತು ಮುಖ್ಯ ಏರ್‌ಪೋರ್ಟ್‌ಗಳುಳ್ಳ ಪ್ರದೇಶವಾಗಿದೆ. ಚೀನದ ಪ್ರವಾಸಿಗರು, ಉದ್ಯೋಗಸ್ಥರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶ ಅದಾಗಿದೆ. ಚೀನದಲ್ಲಿ ವೈರಸ್ ಭೀತಿ ಹೆಚ್ಚಾಗುತ್ತಿದ್ದ ಸಂದರ್ಭದಲ್ಲೇ ಸಾವಿನ ಸಂಖ್ಯೆಯೂ ಏರಿಕೆಯಾಗತೊಡಗಿತು.
ಕೋವಿಡ್ 19 ವೈರ ಸನ್ನು ಅತ್ಯಂತ ತುರ್ತಾಗಿ ಹತ್ತಿಕ್ಕುತ್ತಿರುವ ದೇಶಗಳ ಪೈಕಿ ಸಿಂಗಾಪುರ ಒಂದಾಗಿದೆ. ಸಿಂಗಾಪುರದಲ್ಲಿ ಕೊರೊನಾದಿಂದಾಗಿ ಇದುವರೆಗೂ ಒಂದೇ ಒಂದು ಸಾವು ಸಂಭವಿಸದಿರುವುದು ಕೂಡ ಗಮನ ಸೆಳೆದಿದೆ. ಕೊರೊನಾ ಪೀಡಿತರನ್ನು ಅತ್ಯಂತ ವೇಗವಾಗಿ ಪತ್ತೆ ಹೆಚ್ಚಿರುವುದು ಒಳ್ಳೆಯ ಕ್ರಮವಾಗಿದೆ. ಸೋಂಕು ತಗುಲಿರುವ ಶಂಕೆ ಇರುವ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿತ್ತು. ಯಾರೂ ಕೂಡ ಪರೀಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಸೂಕ್ತ ಕ್ರಮವಹಿಸಿದ ಸಿಂಗಾಪುರ, ಸೋಂಕು ಪೀಡಿತರನ್ನು ಪ್ರತ್ಯೇಕಿಸಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುತ್ತಿದೆ. ಇದರಲ್ಲಿ ಸಿಂಗಾಪುರ ಆರೋಗ್ಯ ಇಲಾಖೆಯ ಕಾರ್ಯ ಮೆಚ್ಚಲೇಬೇಕು.
Related Articles
Advertisement
ಜನರಿಗೆ ಮಾಹಿತಿಸೋಂಕಿನ ಮಾಹಿತಿಯನ್ನು ಜನರಿಗೆ ತಿಳಿಸಿ ಭಯಭೀತರಾಗದಂತೆ ನಿಗಾವಹಿಸಿತ್ತು. ಅಲ್ಲದೇ ಸೋಂಕು ಪೀಡಿತರನ್ನು ಗುರುತಿಸಿ ಅವರನ್ನು ಸಮಾಜದಿಂದ ಪ್ರತ್ಯೇಕಿಸಿ ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಸಿಂಗಾಪುರ ಇಡೀ ದೇಶಕ್ಕೆ ಮಾದರಿಯಾಯಿತು. ಹೊರ ದೇಶಗಳಿಂದ ಜನರು ಬರದಂತೆ ನಿರ್ಬಂಧ ವಿಧಿಸಲಾಗಿದ್ದು, ತನ್ನ ಪ್ರಜೆಗಳಿಗೆ ಯಾವುದೇ ವಿದೇಶ ಪ್ರವಾಸ ಕೈಗೊಳ್ಳದಂತೆಯೂ ಸೂಚಿಸಿದೆ. ಸರಕಾರ ಹೊರಡಿಸುವ ಮಾರ್ಗಸೂಚಿಗಳನ್ನು ಪ್ರಜೆಗಳು ನಿಷ್ಠೆಯಿಂದ ಪಾಲಿಸುತ್ತಿದ್ದಾರೆ. 27ರಿಂದ ಹೆಲ್ತ್ ಡಿಕ್ಲೆರೇಶನ್
ಸಿಂಗಾಪುರಕ್ಕೆ ಮಾರ್ಚ್ 27ರ ಬಳಿಕ ಆಗಮಿಸುವ ಎಲ್ಲರೂ ತಮ್ಮ ಆರೋಗ್ಯ ಮಾಹಿತಿಯನ್ನು ಕಡ್ಡಾಯವಾಗಿ ನೀಡಲೇಬೇಕು ಎಂದು ಅಲ್ಲಿನ ಸರಕಾರ ಸೂಚಿಸಿದೆ. ಇದನ್ನು ವಿದೇಶಿಗರೂ ಮತ್ತು ಸಿಂಗಾಪುರದ ಪ್ರಜೆಗಳೂ ನೀಡಲೇಬೇಕಾಗಿದೆ. ಸಿಂಗಾಪುರದಲ್ಲಿ ಒಟ್ಟು 455 ಪ್ರಕರಣಗಳು ದಾಖಲಾಗಿದ್ದು, 144 ಮಂದಿ ಸುಧಾರಿಸಿದ್ದಾರೆ. 309 ಮಂದಿಯಲ್ಲಿ ಈಗ ಸೋಂಕು ಕಂಡು ಬಂದಿದೆ. ಇಬ್ಬರು ಬಲಿಯಾಗಿದ್ದಾರೆ.