Advertisement

ದ.ಕ.: ಹಸುಳೆಯಲ್ಲಿ ಕೋವಿಡ್ ಸೋಂಕು ; ಸಜಿಪನಡು ಗ್ರಾಮಕ್ಕೆ ದಿಗ್ಬಂಧನ

09:40 AM Mar 28, 2020 | Hari Prasad |

ಬಂಟ್ವಾಳ: ಜ್ವರ ಮತ್ತು ತೀವ್ರ ಸ್ವರೂಪದ ಉಸಿರಾಟದ ತೊಂದರೆಯಿಂದ ಮಾರ್ಚ್ 23ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ 10 ತಿಂಗಳ ಮಗುವಿಗೆ ಇದೀಗ ಕೋವಿಡ್ 19 ವೈರಸ್ ಸೋಂಕು ತಗಲಿರುವುದು ಮಗುವಿನ ಗಂಟಲು ಸ್ರಾವ ಪರೀಕ್ಷಾ ವರದಿಯಿಂದ ಇಂದು ಸಾಬೀತುಗೊಂಡಿದೆ.

Advertisement

ಈ ಹಿನ್ನಲೆಯಲ್ಲಿ ಕೊವಿಡ್ 19 ಸೋಂಕು ಮಗುವಿನ ಪೋಷಕರು ವಾಸವಿದ್ದ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದಲ್ಲಿ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಇದೀಗ ಪೂರ್ತಿ ಗ್ರಾಮವನ್ನು ಕ್ವಾರೆಂಟೈನ್ ಮಾಡಲಾಗಿದೆ. ಹೀಗಾಗಿ ಈ ಗ್ರಾಮದಿಂದ ಯಾರು ಹೊರ ಹೋಗದಂತೆ ಮತ್ತು ಈ ಗ್ರಾಮಕ್ಕೆ ಯಾರೂ ಪ್ರವೇಶಿಸದಂತೆ ಜಿಲ್ಲಾಡಳಿತವು ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.

ಇದೀಗ ಮಗುವಿನ ಆರೋಗ್ಯ ಸ್ಥಿತಿಯು ಸ್ಥಿರವಾಗಿದೆ ಮತ್ತು ಈ ಮಾರಣಾಂತಿಕ ಸೋಂಕು ಗ್ರಾಮದಲ್ಲಿ ಇತರರಿಗೆ ಹರಡದಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯು ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಮಾರ್ಚ್ 24ರಂದು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು ಮತ್ತು ಆ ವರದಿ ಮಾರ್ಚ್ 26ರಂದು ಕೈಸೇರಿದ ಸಂದರ್ಭದಲ್ಲಿ ಈ ಮಗುವಿನಲ್ಲಿ ಕೋವಿಡ್ 19 ಸೋಂಕು ಪಾಸಿಟಿವ್ ಆಗಿರುವುದು ಪತ್ತೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next