Advertisement

ಮಲೇರಿಯಾ ಔಷಧ ಶೋಧಕ ಪಿ.ಸಿ.ರಾಯ್‌

09:27 AM Apr 13, 2020 | Hari Prasad |

ಕೋವಿಡ್ 19 ವೈರಸ್‌ ಸೋಂಕನ್ನು ಹಿಮ್ಮೆಟ್ಟಿಸುವ ಪ್ರಬಲ ಅಸ್ತ್ರ ಎಂದೇ ನಂಬಲಾಗಿರುವ, ಮಲೇರಿಯಾ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್‌ (ಎಚ್‌ಸಿಕ್ಯು) ನಿಂದಾಗಿ ಭಾರತೀಯ ರಸಾಯನಶಾಸ್ತ್ರದ ಪಿತಾಮಹ ಪ್ರಫ‌ುಲ್ಲ ಚಂದ್ರ ರಾಯ್‌ ಅವರು ಹಾಗೂ ಅವರು ಸ್ಥಾಪಿಸಿದ್ದ ಕಂಪನಿಯೊಂದು ಬೆಳಕಿಗೆ ಬಂದಿದೆ. ಅವರು ಶ್ರಮ ವಹಿಸಿ ಸಂಶೋಧಿಸಿದ ಔಷಧವನ್ನು ಅಮೆರಿಕ, ಇಸ್ರೇಲ್‌, ಬ್ರೆಜಿಲ್‌ ಸೇರಿದಂತೆ ಹಲವಾರು ರಾಷ್ಟ್ರಗಳು ಭಾರತದಿಂದ ತರಿಸಿಕೊಂಡಿವೆ.

Advertisement

ಪ್ರಫ‌ುಲ್ಲ ಚಂದ್ರ ರಾಯ್‌ ಅವರು 1892ರಲ್ಲಿ ಬೆಂಗಾಲ್‌ ಕೆಮಿಕಲ್ಸ್‌ ಆಂಡ್‌ ಫಾರ್ಮಾಸ್ಯೂಟಿಕಲ್ಸ್‌ ಲಿಮಿಟೆಡ್‌ ಸಂಸ್ಥೆಯನ್ನು ಸ್ಥಾಪಿಸಿದ್ದರು. ವಿಶೇಷವೆಂದರೆ ಭಾರತದಲ್ಲಿ ಮಲೇರಿಯಾ ನಿರೋಧಕ ಔಷಧ ಉತ್ಪಾಧಿಸುತ್ತಿದ್ದ ಸಾರ್ವಜನಿಕ ಕ್ಷೇತ್ರದ ಏಕೈಕ ಕಂಪನಿ ಎಂಬ ಹೆಗ್ಗಳಿಕೆ ಕೋಲ್ಕತಾ ಮೂಲದ ಬೆಂಗಾಲ್‌ ಕೆಮಿಕಲ್ಸ್‌ ಆಂಡ್‌ ಫಾರ್ಮಾಸ್ಯೂಟಿಕಲ್ಸ್‌ನದ್ದಾಗಿದೆ. ಆದರೆ ಕಂಪನಿಯು ಎಚ್‌ಸಿಕ್ಯು ಉತ್ಪಾದನೆಯನ್ನು ದಶಕದ ಹಿಂದೆಯೇ ನಿಲ್ಲಿಸಿದ್ದು, ಶೀಘ್ರವೇ ಔಷಧ ಉತ್ಪಾದನೆ ಪುನರಾರಂಭಕ್ಕೆ ಅನುಮತಿ ಪಡೆಯುವುದಾಗಿ ಕಂಪನಿ ಪ್ರತಿನಿಧಿಗಳು ತಿಳಿಸಿದ್ದಾರೆ.

ರಾಯ್‌ ಅವರು ಏಕಾಂಗಿಯಾಗಿ ಕಂಪನಿ ಸ್ಥಾಪಿಸಿ ಮುನ್ನಡೆಸುವ ಮೂಲಕ ಬೆಂಗಾಲದಲ್ಲಿ ಯುವಜನರಿಗೆ ಪ್ರೇರಣೆಯಾಗಿದ್ದರು. 1887ರಲ್ಲಿ ಎಡಿನ್ ಬರ್ಗ್‌ ವಿವಿಯಿಂದ ಡಿಎಸ್‌ಸಿ ಪದವಿ ಪಡೆದ ರಾಯ್‌ ಅವರು, ಪ್ರಸಿಡೆನ್ಸಿ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ಬೋಧನೆ ಮಾಡುತ್ತಿದ್ದರು.

ಬಳಿಕ 700 ರೂ. ಬಂಡವಾಳ ಹೂಡುವ ಮೂಲಕ ಬೆಂಗಾಲ್‌ ಕೆಮಿಕಲ್‌ ವರ್ಕ್ಸ್ ಸ್ಥಾಪಿಸಿ, ಅಲ್ಲಿ ಉತ್ಪಾದಿಸಿದ ಆಯುರ್ವೇದ ಉತ್ಪನ್ನಗಳನ್ನು 1893ರ ಭಾರತೀಯ ವೈದ್ಯಕೀಯ ಸಮ್ಮೇಳನದಲ್ಲಿ ಪ್ರಸ್ತುತಪಡಿಸಿದ್ದರು. ಬಳಿಕ 1901ರಲ್ಲಿ ಪ್ರಫ‌ುಲ್ಲ ಚಂದ್ರ ರಾಯ್‌ ಅವರು 2 ಲಕ್ಷ ರೂ. ಹೂಡಿಕೆಯೊಂದಿಗೆ ಬೆಂಗಾಲ್‌ ಕೆಮಿಕಲ್ಸ್‌ ಆಂಡ್‌ ಫಾರ್ಮಾಸ್ಯೂಟಿಕಲ್ಸ್‌ ಲಿಮಿಟೆಡ್‌ ಸಂಸ್ಥೆ ಸ್ಥಾಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next