Advertisement

ಬೀಜಿಂಗ್ ಬೆದರಿಕೆ ನಡುವೆ ಕೋವಿಡ್ 19 ಮೂಲದ ಬಗ್ಗೆ ಸಾಕ್ಷ್ಯ ಇದೆ ಎಂದ ಚೀನಾ ವೈರಾಲಜಿಸ್ಟ್!

01:07 PM Sep 14, 2020 | Nagendra Trasi |

ಬೀಜಿಂಗ್/ನವದೆಹಲಿ:ದೇಶ, ವಿದೇಶಗಳಲ್ಲಿ ಕೋವಿಡ್ 19 ಸೋಂಕು ಈಗಾಗಲೇ ಅಪಾರ ಸಾವು, ನೋವಿಗೆ ಕಾರಣವಾಗಿದ್ದು, ಇದೀಗ ಕೋವಿಡ್ 19 ಸೋಂಕು ಚೀನಾದ ವುಹಾನ್ ನ ಲ್ಯಾಬೋರೇಟರಿಯಲ್ಲಿಯೇ ಉತ್ಪಾದಿಸಲಾಗಿದೆ. ಅಷ್ಟೇ ಅಲ್ಲ ಈ ಬಗ್ಗೆ ತನ್ನಲ್ಲಿ ಸಾಕ್ಷ್ಯ ಇದ್ದಿರುವುದಾಗಿ ಚೀನಾದ ವೈರಾಲಜಿಸ್ಟ್(ಸೂಕ್ಷ್ಮ ರೋಗಾಣು ಶಾಸ್ತ್ರಜ್ಞೆ) ಡಾ. ಲಿ ಮೆಂಗ್ ಯಾನ್ ಸ್ಫೋಟಕ ಸತ್ಯವನ್ನು ಬಹಿರಂಗಗೊಳಿಸಿದ್ದಾರೆ.

Advertisement

ಕೋವಿಡ್ 19 ರೋಗಾಣು ಹರಡುವಿಕೆ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆಯೇ ಚೀನಾ ವಿರುದ್ಧ ಆರೋಪಿಸಿದ್ದರು. ಆದರೆ ಚೀನಾ ಅದನ್ನು ಅಲ್ಲಗಳೆದಿತ್ತು. ನ್ಯೂಸ್ 18 ವರದಿ ಪ್ರಕಾರ, ವುಹಾನ್ ಪ್ರಯೋಗಾಲಯದಲ್ಲಿಯೇ ಮಾರಣಾಂತಿಕ ಕೋವಿಡ್ 19 ಸೋಂಕನ್ನು ತಯಾರಿಸಲಾಗಿದೆ ಎಂದು ಲಿ ಆರೋಪಿಸಿರುವುದಾಗಿ ವಿವರಿಸಿದೆ.

ಕೋವಿಡ್ ಸೋಂಕು ಯಾವುದೇ ಪ್ರಾಣಿ ಅಥವಾ ಮಾಂಸ ಮಾರಾಟ ಮಾರುಕಟ್ಟೆಯಿಂದ ಹರಡಿಲ್ಲ, ಇದು ನಗರದೊಳಗೆ ಇರುವ ಸೂಕ್ಷ್ಮ ರೋಗಾಣು ಪ್ರಯೋಗಾಲಯದಿಂದಲೇ ಹರಡಿರುವುದಕ್ಕೆ ಸಾಕ್ಷ್ಯ ಇದೆ ಎಂದು ಲೀ ಹೇಳಿದ್ದಾರೆ.

ಇದನ್ನೂ ಓದಿ: ಕೋವಿಡ್ 19 ವೈರಸ್ ಮೂಲದ ಶೀತಲಸಮರ: ಅಮೆರಿಕಕ್ಕೆ ಹುಷಾರ್ ಎಂದ ಚೀನಾ!

ಡಾ.ಲಿ ಮೆಂಗ್ ಯಾನ್ ಯೂಟ್ಯೂಬ್ ನಲ್ಲಿ ಬಿಡುಗಡೆಗೊಳಿಸಿರುವ ವಿಡಿಯೋದಲ್ಲಿ, ಈ ಸೂಕ್ಷ್ಮ ರೋಗಾಣು ಹರಡುವಿಕೆ ಹಿಂದೆ ಮನುಷ್ಯನ ಕೈವಾಡ ಇದ್ದಿರುವುದು ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.

Advertisement

ಚೀನಾ ಸರ್ಕಾರದ ಪರ ಮಾಹಿತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ನಂತರ ಡಾ.ಲೀ ಮೆಂಗ್ ಯಾನ್ ಹಾಂಗ್ ಕಾಂಗ್ ಸ್ಕೂಲ್ ಪಬ್ಲಿಕ್ ಹೆಲ್ತ್ ನಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಕೋವಿಡ್ 19 ಮಾರಣಾಂತಿಕ ಸೋಂಕು ಹೇಗೆ ಹರಡಿದೆ ಎಂಬುದು ತನಗೆ ತಿಳಿದಿದೆ ಎಂಬುದಾಗಿ ಬಹಿರಂಗವಾಗಿ ಹೇಳಿರುವುದಾಗಿ ವರದಿ ತಿಳಿಸಿದೆ.

ರಹಸ್ಯ ಸ್ಥಳದಲ್ಲಿ ಮಾತನಾಡಿರುವ ಲೀ, ತನ್ನ ಜೀವದ ಸುರಕ್ಷತೆ ದೃಷ್ಟಿಯಿಂದ ತಾನು ಅಮೆರಿಕಕ್ಕೆ ಪರಾರಿಯಾಗುತ್ತಿರುವುದಾಗಿ ವಿಡಿಯೋದಲ್ಲಿ ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ಮೌನವಾಗಿದ್ದು, ಹುಷಾರಾಗಿರುವಂತೆ ತನಗೆ ಎಚ್ಚರಿಕೆ ಕೂಡಾ ನೀಡಲಾಗಿತ್ತು ಎಂದು ಲೀ ತಿಳಿಸಿದ್ದಾರೆ.

ಇದನ್ನೂ ಓದಿ: ಹೇಗೆ ಬಂತು….?ಎರಡು ತಿಂಗಳ ಬಳಿಕ ಚೀನಾದಲ್ಲಿ ಕೋವಿಡ್-19 ಒಂದು ಪ್ರಕರಣ ಪತ್ತೆ!

ಏತನ್ಮಧ್ಯೆ ಡಾ.ಲೀ ದೇಶ ತೊರೆಯುವ ಮುನ್ನವೇ ಚೀನಾ ಅಧಿಕಾರಿಗಳು ಆಕೆಯ ಆರೋಪ ಅಲ್ಲಗಳೆದಿದ್ದು, ಎಲ್ಲಾ ಮಾಹಿತಿಯನ್ನು ಡಿಲೀಟ್ ಮಾಡಿದ್ದಾರೆ. ಅಲ್ಲದೇ ತನ್ನ ಬಗ್ಗೆ ಜನರು ವದಂತಿ ಹರಡಿಸಬೇಕು ಎಂದು ಸೂಚನೆ ನೀಡಿರುವುದಾಗಿ ಲೀ ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next