Advertisement

ಇಟಲಿಯಲ್ಲಿ ಹತ್ತು ಸಾವಿರ ಜನರನ್ನು ಬಲಿ ಪಡೆದುಕೊಂಡ ಕೋವಿಡ್ 19 ಮಹಾಮಾರಿ

09:25 AM Mar 29, 2020 | Hari Prasad |

ರೋಮ್: ವಿಶ್ವದಲ್ಲೇ ಕೋವಿಡ್ 19 ವೈರಸ್ ಬಾಧೆಗೆ ತೀವ್ರವಾಗಿ ಒಳಪಟ್ಟ ಯುರೋಪಿನ ದೆಶವಾಗಿರುವ ಇಟಲಿಯಲ್ಲಿ ಈ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 10 ಸಾವಿರಕ್ಕೇರಿದೆ.

Advertisement

ಒಂದೇ ದಿನದಲ್ಲಿ 889 ಕೋವಿಡ್ 19 ಸೋಂಕಿತ ವ್ಯಕ್ತಿಗಳ ಸಾವಿನ ಪ್ರಕರಣ ದಾಖಲಾಗುವುದರೊಂದಿಗೆ ಇಟಲಿಯಲ್ಲಿ ಈ ಮಹಾಮಾರಿಗೆ ಬಲಿಯಾದವರ ಸಂಖ್ಯೆ 10,023ಕ್ಕೆ ಏರಿದಂತಾಗಿದೆ.

ಇಟಲಿಯ ಬಳಿಕ ಕೋವಿಡ್ 19 ಅತೀ ಹೆಚ್ಚು ಬಾಧಿಸಿರುವ ಯುರೋಪಿನ ಇನ್ನೊಂದು ದೇಶವಾಗಿರುವ ಸ್ಪೈನ್ ನಲ್ಲಿ ಶನಿವಾರದವರೆಗೆ ಈ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5,690ಕ್ಕೆ ಏರಿದೆ. ಇಲ್ಲಿ 24 ಗಂಟೆಗಳಲ್ಲಿ 832 ಕೋವಿಡ್ ಸೋಂಕಿತರು ಸಾವಿಗೀಡಾಗಿದ್ದಾರೆ ಎಂದು ಇಲ್ಲಿನ ಆರೋಗ್ಯ ಸಚಿವಾಲಯದ ಮಾಹಿತಿಗಳು ತಿಳಿಸಿವೆ.

ಅಮೆರಿಕಾದಲ್ಲಿ ಕೋವಿಡ್ 19 ಸೋಂಕಿಗೆ ಒಳಗಾಗಿರುವವರ ಸಂಖ್ಯೆ 1 ಲಕ್ಷದ 4 ಸಾವಿರಕ್ಕೇರಿದೆ. ಇಲ್ಲಿ ಈಗಾಗಲೇ 1700 ಜನರು ಈ ಮಹಾಮಾರಿಗೆ ಜೀವತೆತ್ತಿದ್ದಾರೆ ಎಂದು ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾನಿಲಯದ ಅಂಕಿ-ಅಂಶಗಳ ಮಾಹಿತಿಯಿಂದ ತಿಳಿದುಬಂದಿದೆ.

ಜಗತ್ತನ್ನೇ ಸ್ತಬ್ಧಗೊಳಿಸಿರುವ ಈ ಸಾಂಕ್ರಾಮಿಕ ಮಹಾಮಾರಿಗೆ ಪ್ರಪಂಚದಲ್ಲಿ ಈಗಾಗಲೇ 27 ಸಾವಿರ ಜನ ಸಾವಿಗೀಡಾಗಿದ್ದಾರೆ. ಒಟ್ಟು 6 ಲಕ್ಷಕ್ಕೂ ಹೆಚ್ಚಿನ ಜನರು ಈಗಾಗಲೇ ಸೋಂಕಿತರಾಗಿದ್ದಾರೆ. ಇವರಲ್ಲಿ 1 ಲಕ್ಷದ 31 ಸಾವಿರ ಜನರು ಚೇತರಿಸಿಕೊಂಡಿದ್ದಾರೆ ಎಂಬುದು ಈ ಕ್ಷಣದ ಮಾಹಿತಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next