Advertisement

ಇನ್ನೂ ಎರಡು ವರ್ಷಗಳವರೆಗೆ ಮರುಕಳಿಸುತ್ತಲೇ ಇರುತ್ತಾ ಕೋವಿಡ್ ಜಗನ್ಮಾರಿ?

08:18 AM May 04, 2020 | Hari Prasad |

ವಾಷಿಂಗ್ಟನ್: ಜಗತ್ತನ್ನೇ ನುಂಗಿ ನೀರು ಕುಡಿಯುತ್ತಿರುವ ಕೋವಿಡ್ 19 ವೈರಸ್‌, ಇನ್ನೂ ಎರಡು ವರ್ಷಗಳವರೆಗೆ ಹೀಗೆಯೇ ಅಪ್ಪಳಿಸುತ್ತಿರುತ್ತದೆ.

Advertisement

ಜಗತ್ತಿನ 2/3ರಷ್ಟು ಜನರ ರೋಗನಿರೋಧಕ ಶಕ್ತಿಯನ್ನು ಇದು ಬಲಿಪಡೆಯಲಿದೆ ಎಂದು ಅಮೆರಿಕದ ಮಿನ್ನೆಸೊಟಾ ವಿವಿಯ ಸಾಂಕ್ರಾಮಿಕ ರೋಗಗಳ ಸಂಶೋಧನಾ ಕೇಂದ್ರ ಎಚ್ಚರಿಸಿದೆ.

ವ್ಯಕ್ತಿಗೆ ಸೋಂಕಿನ ಲಕ್ಷಣ ಕಾಣಿಸಿಕೊಳ್ಳುವ ಮೊದಲೇ, ಈ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುವಷ್ಟು ಸಾಮರ್ಥ್ಯ ಹೊಂದಿದೆ. ಇದನ್ನು ನಿಯಂತ್ರಿಸುವುದು ಇನ್‌ಫ್ಲ್ಯೂಯೆಂಜಾಗಿಂತ ದುಸ್ತರವಾಗಿದೆ. ರೋಗ ಲಕ್ಷಣ ಪ್ರಕಟಗೊಳ್ಳುವ ಮುಂಚೆಯೇ ವ್ಯಕ್ತಿಯ ದೇಹದಲ್ಲಿ ಸಂಪೂರ್ಣವಾಗಿ ಸೋಂಕು ತುಂಬಿಕೊಳ್ಳುತ್ತದೆ.

ಅಲ್ಲದೆ, ಕೆಲವು ದೇಶಗಳಲ್ಲಿ ಆರ್ಥಿಕ ಪುನಃಶ್ಚೇತನಕ್ಕಾಗಿ ಲಾಕ್‌ಡೌನ್‌ ಸಡಿಲ ಮಾಡಿರುವುದರಿಂದ ಕೋವಿಡ್ ವೈರಸ್ ಅಲೆ ಸುಮಾರು 2022ನೇ ಇಸವಿಯವರೆಗೂ ಮುಂದುವರಿಯುವ ಸಾದ್ಯತೆ ಇದೆ ಮಾತ್ರವಲ್ಲದೇ ಜನರ ನಡುವೆ ಪುನರಾವರ್ತಿತ ಸೋಂಕಿನ ರೂಪದಲ್ಲಿ ಈ ಮಾರಕ ವೈರಾಣು ಜೀವಿಸಲಿದೆ ಎಂದು ಅದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next