Advertisement

ವಿಶ್ವದಾದ್ಯಂತ ಕೋವಿಡ್-19ಗೆ ಬಲಿಯಾದವರ ಸಂಖ್ಯೆ 3,282ಕ್ಕೆ ಏರಿಕೆ: ವಿಶ್ವ ಆರೋಗ್ಯ ಸಂಸ್ಥೆ

10:40 PM Mar 20, 2020 | Mithun PG |

ಮಾಸ್ಕೋ: ಜಗತ್ತಿನಾದ್ಯಂತ ಕೊರೊನಾ ಮಾಹಾಮಾರಿಗೆ ಬಲಿಯಾದವರ ಸಂಖ್ಯೆ 3,282ಕ್ಕೆ ತಲುಪಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ  2,241 ಹೊಸ ಸೋಂಕಿತರು ಪತ್ತೆಯಾಗಿದ್ದು 84 ಜನರು ಮೃತಪಟ್ಟಿದ್ದಾರೆ ಎಂದು ಎಎನ್ ಐ ವರದಿ ಮಾಡಿದೆ.

Advertisement

ಮಾತ್ರವಲ್ಲದೆ ವಿಶ್ವದಾದ್ಯಂತ ಸೋಂಕು ಪೀಡಿತರ ಸಂಖ್ಯೆ 95,333ಕ್ಕೆ ತಲುಪಿದ್ದು ಇದರಲ್ಲಿ 80,565 ಜನರು ಚೀನಾ ಪ್ರಜೆಗಳು ಎಂದು ವಿಶ್ವ ಸಂಸ್ಥೆ ತಿಳಿಸಿದೆ.

2019 ರ ಡಿಸೆಂಬರ್ ನಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕಂಡುಬಂದಿದ್ದ ಕೋವಿಡ್ 19 ವೈರಸ್ ಇದೀಗ ಜಗತ್ತಿನಾದ್ಯಂತ ವ್ಯಾಪಿಸಿದ್ದು,  ಜನವರಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ‘ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು’ ಘೋಷಿಸಿತ್ತು.

ಅಮೆರಿಕಾದಲ್ಲಿ ಕೊರೊನಾ ವೈರಸ್ ಗೆ ಬಲಿಯಾದವರ ಸಂಖ್ಯೆ 12ಕ್ಕೆ ಏರಿದೆ. ಮಾತ್ರವಲ್ಲದೆ 53 ಜನರಿಗೆ ಹೊಸದಾಗಿ ಸೋಂಕು ಇರುವುದು ಧೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next