Advertisement

ಗೊಂದಲ ಬೇಡ! ಏ.28ರ ಸಂಜೆ 4ರಿಂದ ಲಸಿಕೆ ನೋಂದಣಿ ಶುರು, ನೋಂದಣಿಯಲ್ಲಿ ಈ ತಪ್ಪು ಮಾಡಬೇಡಿ

11:01 AM Apr 28, 2021 | Team Udayavani |

ನವದೆಹಲಿ:ಕೋವಿಡ್ ಲಸಿಕೆ ಹಾಕಿಸಿಕೊಳ್ಳುವವರಿಗೆ ಕೋ ವಿನ್‌ ವೆಬ್‌ಸೈಟ್‌, ಆರೋಗ್ಯ ಸೇತು ಆ್ಯಪ್‌ ಮೂಲಕ ನೋಂದಣಿ ಏ.28ರಿಂದ ಶುರುವಾಗಲಿದೆ. ಸಂಜೆ 4ಗಂಟೆಗೆ ನೋಂದಣಿ ಶುರುವಾಗಲಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರು ನೋಂದಣಿ ಮಾಡಿಸಿಕೊಳ್ಳಲು ಅವಕಾಶ ಲಭ್ಯವಾಗಲಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

Advertisement

ಇಂದಿನಿಂದ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ನೋಂದಣಿ ಮಾಡಿಕೊಳ್ಳಬಹುದು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಕೋ ವಿನ್ ವೆಬ್ ಸೈಟ್, ಆರೋಗ್ಯ ಸೇತು ಆ್ಯಪ್ ಮತ್ತು ಉಮಂಗ್ ಆ್ಯಪ್ ಮೂಲಕ ನೋಂದಾಯಿಸಲು ಹಲವು ಮಂದಿ ಪ್ರಯತ್ನಪಟ್ಟಿದ್ದರು. ಆದರೆ ನೋಂದಣಿ ಆಗದೆ ಜನರು
ಗೊಂದಲಕ್ಕೊಳಗಾಗಿದ್ದರಿಂದ ಕೇಂದ್ರ ಸರಕಾರ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇಂದು ಸಂಜೆ 4ಗಂಟೆಯಿಂದ ನೋಂದಾಯಿಸಬಹುದಾಗಿದೆ ಎಂದು ವಿವರಿಸಿದೆ.

ಆಧಾರ್‌ ಕಾರ್ಡ್‌, ಡ್ರೈವಿಂಗ್‌ ಲೈಸನ್ಸ್‌, ಪ್ಯಾನ್‌ ಕಾರ್ಡ್‌ ಅಥವಾ ಪೆನ್ಶನ್ ಪಾಸ್‌ ಪುಸ್ತಕವನ್ನು ದಾಖಲೆಗಳಾಗಿ ಕೊಡಲಾಗಿದೆ. ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕು. ಇದರ ಜತೆಗೆ ಕೇಂದ್ರ ಸರ್ಕಾರದ “ಉಮಂಗ್‌’ ವೆಬ್‌ಸೈಟ್‌ ಮೂಲಕವೂ ನೋಂದಣಿ ಮಾಡಿಕೊಳ್ಳಲು ಅವಕಾಶ ಇದೆ. ಮೇ 1ರಿಂದ ಮೂರನೇ ಹಂತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ.

ಕೋ ವಿನ್ ಪೋರ್ಟಲ್ ನಲ್ಲಿ ನೋಂದಣಿ ಹೇಗೆ?
1)cowin.gov.inಗೆ ಲಾಗ್‌ಇನ್‌ ಆಗಿ ನಿಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿ

2)ಮೊಬೈಲ್‌ಗೆ ಬರುವ ಒನ್‌ ಟೈಮ್‌ ಪಾಸ್‌ವರ್ಡ್‌ ನಮೂದಿಸಿ.

Advertisement

3)ನಂತರ ವೆರಿಫೈ ಬಟನ್‌ ಒತ್ತಿ.

4)ಲಸಿಕೆ ನೋಂದಣಿ ಎಂಬ ಪುಟ ತೆರೆಯುತ್ತದೆ. ಅಲ್ಲಿ ನಿಮ್ಮ ಫೋಟೋ ಇರುವ ಗುರುತಿನ ಚೀಟಿ (4ಆಯ್ಕೆಗಳು)ಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕು.

5)ನಿಮ್ಮ ಹೆಸರು, ವಿಳಾಸ ಲಿಂಗ, ವಾಸಸ್ಥಳ ನಮೂದಿಸಿ.

6)ಬಳಿಕ ರಿಜಿಸ್ಟರ್‌ ಎಂಬ ಬಟನ್‌ ಒತ್ತಿ. ಆಗ ಯಶಸ್ವಿ ನೋಂದಣಿ ಬಗ್ಗೆ ಸಂದೇಶ ಬರುತ್ತದೆ ಮತ್ತು ಅಕೌಂಟ್‌ ಡಿಟೇಲ್ಸ್‌ ಎಂಬ ಪುಟ ಓಪನ್‌ ಆಗುತ್ತದೆ.

7)ಇಲ್ಲಿ ನೀವು ಲಸಿಕೆ ಪಡೆಯುವ ದಿನಾಂಕ, ಇಷ್ಟಾದ ಬಳಿಕ ನಿಮ್ಮ ವ್ಯಾಪ್ತಿಯಲ್ಲಿ ಇರುವ ಲಸಿಕಾ ಕೇಂದ್ರ/ಆಸ್ಪತ್ರೆಗಳ ವಿವರ ಸ್ಕ್ರೀನ್‌ ಮೇಲೆ ಮೂಡುತ್ತದೆ. ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳನ್ನು ಆಯ್ಕೆ ಮಾಡಬಹುದು.

8)ಒಂದೇ ಮೊಬೈಲ್‌ ಸಂಖ್ಯೆಯಿಂದ ಐವರ ಹೆಸರು ನೋಂದಾಯಿಸಬಹುದು.

ಆರೋಗ್ಯ ಸೇತು ಆ್ಯಪ್ ಮೂಲಕ ನೋಂದಣಿ ಹೇಗೆ?
1)ಆರೋಗ್ಯ ಸೇತು ಆ್ಯಪ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಿ
2)ನಿಮ್ಮ ಮೊಬೈಲ್ ಸಂಖ್ಯೆ ಬಳಸಿಕೊಂಡು ಆರೋಗ್ಯ ಸೇತು ಆ್ಯಪ್ ನಲ್ಲಿ ಹೆಸರನ್ನು ನೋಂದಾಯಿಸಿ. ಮೊಬೈಲ್‌ಗೆ ಬರುವ ಒನ್‌ ಟೈಮ್‌ ಪಾಸ್‌ವರ್ಡ್‌ ನಮೂದಿಸಿ.
3)ನಂತರ ಲಸಿಕೆ ನೋಂದಣಿ ಟ್ಯಾಬ್ ಕ್ಲಿಕ್ ಮಾಡಿ.
4)ಈ ಪುಟದಲ್ಲಿ ಲಸಿಕೆ ನೋಂದಣಿಗೆ ಅಗತ್ಯವಿರುವ ವಿವರವನ್ನು ತುಂಬಿಸಿ.

ಇವು ಅತ್ಯಗತ್ಯ:
1) ಲಸಿಕೆ ಪಡೆಯಲು ಹೆಸರನ್ನು ಮೊದಲೇ ನೋಂದಾಯಿಸಿ
2)ಕೋ ವಿನ್, ಆರೋಗ್ಯ ಸೇತು ಅಥವಾ ಉಮಂಗ್ ಆ್ಯಪ್ ನಲ್ಲಿ ಆನ್ ಲೈನ್ ಮೂಲಕ ಹೆಸರು ನೋಂದಾಯಿಸಿ
3)ಒಂದೇ ಮೊಬೈಲ್ ಸಂಖ್ಯೆಯ ಮೂಲಕ ನೋಂದಾಯಿಸಿ. ಲಸಿಕೆ ಪಡೆಯಲು ತೆರಳುವಾಗ ಒಂದು ದಾಖಲೆ ಪತ್ರವನ್ನು ತೆಗೆದುಕೊಂಡು ಹೋಗಿ.
4)ನೋಂದಣಿಗೆ ಬಳಸಿದ ಗುರುತು ಪತ್ರದ ದಾಖಲೆಯನ್ನು ತೆಗೆದುಕೊಂಡು ಹೋಗಬೇಕು
5)ನಿಗದಿತ ದಿನಾಂಕ ಮತ್ತು ಸಮಯಕ್ಕೆ ಸರಿಯಾಗಿ ಲಸಿಕಾ ಕೇಂದ್ರಕ್ಕೆ ತೆರಳಿ
6)ಲಸಿಕೆ ಪಡೆದ ನಂತರ 30ನಿಮಿಷಗಳ ಕಾಲ ಲಸಿಕೆ ಕೇಂದ್ರದಲ್ಲಿ ಕುಳಿತುಕೊಳ್ಳಿ
7)ಒಂದು ವೇಳೆ 30 ನಿಮಿಷದಲ್ಲಿ ಯಾವುದೇ ಅಡ್ಡಪರಿಣಾಮ ಕಂಡುಬಂದರೂ ಲಸಿಕಾ ಕೇಂದ್ರದವರಿಗೆ ಮಾಹಿತಿ ನೀಡಿ.

ಈ ತಪ್ಪು ಮಾಡಬೇಡಿ:
1)ಅಪಾಯಿಂಟ್ ಮೆಂಟ್ ಇಲ್ಲದೆ ಲಸಿಕಾ ಕೇಂದ್ರಕ್ಕೆ ಹೋಗಬೇಡಿ
2)ವಿವಿಧ ಫ್ಲ್ಯಾಟ್ ಫಾರಂಗಳಲ್ಲಿ ನೋಂದಣಿ ಬೇಡ
3)ನೋಂದಣಿಗೆ ವಿವಿಧ ಮೊಬೈಲ್ ನಂಬರ್, ಐಡಿ ಪ್ರೂಫ್ ಬಳಸಬೇಡಿ
4)ಲಸಿಕೆ ಪಡೆಯುವ ದಿನ ಮದ್ಯ ಅಥವಾ ಇನ್ನಿತರ ಅಮಲು ಪದಾರ್ಥ ಸೇವಿಸಬೇಡಿ
5)ಯಾವುದೇ ಅಡ್ಡಪರಿಣಾಮ ಬೀರಿದರೂ ಭೀತಿಗೆ ಒಳಗಾಗಬೇಡಿ
6)ಎರಡನೇ ಡೋಸ್ ಗಾಗಿ ಮತ್ತೆ ನೋಂದಣಿ ಮಾಡುವ ಅಗತ್ಯವಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next