Advertisement

ನಂಜನಗೂಡಿನ ಜುಬಿಲೆಂಟ್ ಕಾರ್ಖಾನೆಯಲ್ಲಿ ತಯಾರಾಗಲಿದೆಯೇ ಕೋವಿಡ್ ಗೆ ಔಷಧಿ?

08:26 AM May 14, 2020 | Hari Prasad |

ಮೈಸೂರು: ಕೋವಿಡ್ ವೈರಸ್ ಹಾಟ್ ಸ್ಪಾಟ್ ಆಗು ಮೂಲಕ ಜಿಲ್ಲೆಯ ಜನರ ನಿದ್ದೆ ಗೆಡಿಸಿದ್ದ ನಂಜನಗೂಡಿನ ಜುಬಿಲೆಂಟ್ ಕಾರ್ಖಾನೆಯು ಇದೀಗ ಕೋವಿಡ್ ವೈರಸ್ ಗೆ ಔಷಧ ತಯಾರಿಸಲು ಮುಂದಡಿಯಿಟ್ಟಿದೆ.

Advertisement

ರಾಜ್ಯ ಸರ್ಕಾರದಿಂದ ನಂಜನಗೂಡಿನ ಕಾರ್ಖಾನೆಯ ಪುನಾರಂಭಕ್ಕೆ ಅನುಮತಿ ದೊರೆತರೆ ಸದ್ಯದಲ್ಲಿಯೇ ನಂಜನಗೂಡಿನ ಜುಬಿಲೆಂಟ್ ಕಾರ್ಖಾನೆಯಲ್ಲಿ ಕೋವಿಡ್ ಔಷಧಿ ಉತ್ಪಾದನಾ ಕಾರ್ಯ ಪ್ರಾರಂಭವಾಗಲಿದೆ ಎಂದು ತಿಳಿದುಬಂದಿದೆ.

ಅಮೆರಿಕದ ಗಿಲೀಡ್ ಸೈನ್ಸಸ್ ಸಂಸ್ಥೆಯು ಕೋವಿಡ್ ಮಹಾಮಾರಿಗೆ ಔಷಧಿಯೊಂದನ್ನು ಪತ್ತೆಹಚ್ಚಿದ್ದು, ಆ ಔಷಧವನ್ನು ಅಮೆರಿಕದಲ್ಲಿ ಈಗಾಗಲೇ ಬಳಕೆ ಮಾಡಲಾಗುತ್ತಿದೆ.

ಗಿಲೀಡ್ ಸೈನ್ಸಸ್ ಸಂಸ್ಥೆ ಕಂಡು ಹಿಡಿದ ‘ರೆಮ್ಡೆಸಿವಿರ್’ನ ಔಷಧವನ್ನು ಭಾರತ ಸೇರಿದಂತೆ 128 ದೇಶಗಳಲ್ಲಿ ಉತ್ಪಾದನೆ ಮಾಡುವ ಹಕ್ಕನ್ನು ಇದೀಗ ಜುಬಿಲೆಂಟ್ ಕಂಪನಿ ಪಡೆದುಕೊಂಡಿದೆ.

ಕೋವಿಡ್ ಸೋಂಕು ಕರ್ನಾಟಕದಲ್ಲಿ ಹಬ್ಬುತ್ತಿದ್ದ ಪ್ರಾರಂಭದ ದಿನಗಳಲ್ಲಿ ಸೋಂಕಿನ ಹಾಟ್ ಸ್ಪಾಟ್ ಆಗಿ ಈ ಜುಬಿಲೆಂಟ್ ಕಂಪನಿ ಕುಖ್ಯಾತಿ ಪಡೆದುಕೊಂಡಿತ್ತು. ಜಿಲ್ಲೆಯಲ್ಲಿ 90 ಕೋವಿಡ್ ಸೋಂಕಿತರ ಪೈಕಿ 72 ಸೋಂಕಿತರು ಜುಬಿಲೆಂಟ್‌ ನೇರ ಸಂಪರ್ಕ ಹೊಂದಿದವರೇ ಆಗಿದ್ದರು. ಈ ಕಾರಣಕ್ಕೆ ಈ ಕಂಪನಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ, ಇದೀಗ ಜುಬಿಲೆಂಟ್ ಕಂಪನಿ ಕೋವಿಡ್ ಔಷಧ ತಯಾರಿಕೆಯ ಹಕ್ಕು ಪಡೆಯುವ ಮೂಲಕ ದೇಶದ ಗಮನ ಸೆಳೆದಿದೆ.

Advertisement

ನಂಜನಗೂಡು ಸೇರಿದಂತೆ ದೇಶದ ಏಳು ಕಡೆಗಳಲ್ಲಿ ಜುಬಿಲೆಂಟ್ ಕಾರ್ಖಾನೆಗಳು ಇವೆ. ನಂಜನಗೂಡು ಹೊರತುಪಡಿಸಿ ಉಳಿದ ಎಲ್ಲ ಕಡೆ ಶೀಘ್ರದಲ್ಲಿಯೇ ಕಾರ್ಖಾನೆಯ ಕೆಲಸ ಕಾರ್ಯಗಳು ಪುನರಾರಂಭಗೊಳ್ಳಲಿದೆ. ನಂಜನಗೂಡಿನಲ್ಲಿ ಕಾರ್ಖಾನೆ ಪ್ರಾರಂಭಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದರೆ ಇಲ್ಲೂ ಕೂಡ ಕೋವಿಡ್ ವೈರಸ್ ಗೆ ಔಷಧ ತಯಾರಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next