ಚಿಕ್ಕಬಳ್ಳಾಪುರ: ಮಹಾಮಾರಿ ಕೋವಿಡ್-19 ಆರ್ಭಟ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಜನ ಸಾಮಾನ್ಯರ ಆರೋಗ್ಯ ರಕ್ಷಣೆ ಗಾಗಿಯೇ ಗ್ರಾಮ ಆರೋಗ್ಯ ಯುವಪಡೆಗಳು ರಚನೆ ಗೊಂಡು ಸದ್ದಿಲ್ಲದೇ ಕೋವಿಡ್ 19 ವಿರುದಟಛಿ ಸಮರ ಸಾರುವ ಮೂಲಕ ಸಾರ್ವಜನಿಕರ ಗಮನ ಸೆಳೆಯುತ್ತಿವೆ.
ಜಿಲ್ಲೆಯಲ್ಲಿ ಹಿಂದುಳಿದ ತಾಲೂಕಾಗಿರುವ ಬಾಗೇಪಲ್ಲಿ ಖ್ಯಾತ ಪ್ರಜಾ ವೈದ್ಯರೆಂದೇ ಖ್ಯಾತಿಯಾಗಿರುವ ಡಾ.ಅನಿಲ್ ಕುಮಾರ್ ಅವಲಪ್ಪ, ಇಂತಹ ವಿನೂತನ ಕಾರ್ಯಕ್ರಮಕ್ಕೆ ಮುಂದಾಗಿದ್ದು, ಕೋವಿಡ್ 19 ವಿರುದ ಈಗಾಗಲೇ ಗ್ರಾಮಗಳಲ್ಲಿ ಜನ ಜಾಗೃತಿ ಮೂಡಿಸುವ ಮೂಲಕ ಉಚಿತವಾಗಿ ರೋಗಿ ಗಳಿಗೆ ಚಿಕಿತ್ಸೆ, ಔಷಧಿ ಒದಗಿಸುತ್ತಾ ಗ್ರಾಮ ಆರೋಗ್ಯ ಯುವ ಪಡೆಗಳನ್ನು ನೇಮಿಸಿ ಕೋವಿಡ್ 19 ವಿರುದಟಛಿ ಕಣ್ಗಾವಲು ಇಟ್ಟಿದ್ದಾರೆ.
ಆರೋಗ್ಯ ಕಿಟ್ ವಿತರಣೆ: ಬಾಗೇಪಲ್ಲಿ ತಾಲೂಕಿನಲ್ಲಿ ಒಂದೊಂದು ಊರಿಗೆ ಹೋಗಿ ಜನರ ಆರೋಗ್ಯ ಪರೀಕ್ಷಿಸಿ ಬರುತ್ತಿರುವ ಡಾ.ಅನಿಲ್ ಕುಮಾರ್ ಅವಲಪ್ಪ ಸಮ್ಮನಾಗು ತ್ತಿಲ್ಲ. ಬದಲಾಗಿ ಗ್ರಾಮದಲ್ಲಿನ ಪ್ರಜ್ಞಾವಂತ ಪದವಿ ಓದಿರುವ ವಿದ್ಯಾರ್ಥಿಗಳನ್ನು ಹಾಗೂ ಯುವಕರನ್ನು ಒಂದು ಕಡೆ ಸಭೆ ಸೇರಿಸಿ ಕೋವಿಡ್ 19 ತಡೆಗೆ ತಂಡಗಳನ್ನು ರಚಿಸಿ ಯಾವೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು, ಸೋಂಕಿನ ಲಕ್ಷಣಗಳೇನು ಎಂಬು ದರ ಬಗ್ಗೆ ತಿಳಿಸಿಕೊಡುತ್ತಿದ್ದಾರೆ.
ಆ ಗುಂಪುಗಳಿಗೆ ರಕ್ತದಲ್ಲಿ ಆಮ್ಲಜನಕ ಪ್ರಮಾಣ ಪರೀಕ್ಷಿ ಸುವ ಪಾಲ್ಸಾಕ್ಸಿ ಮೀಟರ್ ಹಾಗೂ ಉಷ್ಣಾಂಶ ಪರೀಕ್ಷೆ ಮಾಡುವ ಇನಾ#†ರೆಡ್ ಥರ್ಮೋಮೀಟರ್ ಸಹ ಉಚಿತವಾಗಿ ನೀಡಿ ಸಂಶಯಾಸ್ಪದ ವ್ಯಕ್ತಿಗಳನ್ನು ಕಾಲಕಾಲಕ್ಕೆ ಪರೀಕ್ಷಿಸಿ ಜ್ವರ, ಉಷ್ಣಾಂಶ ಹೆಚ್ಚಿದ್ದಾಗ ತಮಗೆ ಮಾಹಿತಿ ನೀಡುವಂತೆ ಯುವ ಪಡೆಗಳಿಗೆ ಡಾ.ಅನಿಲ್ ಮಾರ್ಗದರ್ಶನ ನೀಡಿದ್ದಾರೆ. ಜಿಲ್ಲೆಗೆ ಕೋವಿಡ್ 19 ಪ್ರವೇಶಗೊಂಡ ಬಳಿಕ ಬಾಗೇಪಲ್ಲಿ ಕ್ಷೇತ್ರದಲ್ಲಿ
ಉಚಿತ ವೈದ್ಯಕೀಯ ಸೇವೆಗೆ ಪ್ರತಿ ನಿತ್ಯ ಐದಾರು ಗಂಟೆ ಕಾಲ ಕನಿಷ್ಠ ಆರೇಳು ಗ್ರಾಮಗಳಿಗೆ ತೆರಳಿ ಜನರಿಗೆ ಬಿಪಿ, ಶುಗರ್ ಟೆಸ್ಟ್ ಮಾಡಿ ಕೆಮ್ಮು, ನೆಗಡಿ ಜ್ವರ ಇದ್ದರೆ ಅವರಿಗೆ ಸ್ಥಳ ದಲ್ಲಿಯೇ ಅಗತ್ಯ ಚಿಕಿತ್ಸೆ ನೀಡಿ ಔಷಧಿಗಳನ್ನು ನೀಡುತ್ತಿದ್ದಾರೆ. ಇದುವರೆಗೂ ಐದು ಸಾವಿರಕ್ಕೂ ಹೆಚ್ಚು ಜನರಿಗೆ ಇವರ ಆರೋಗ್ಯ ಸೇವೆ ತಲುಪಿದ್ದು ಸುಮಾರು 100 ಕ್ಕೂ ಹಳ್ಳಿಗಳಿಗೆ ಇದುವರೆಗೂ ತೆರಳಿ ವೈದ್ಯಕೀಯ ಉಪಚಾರ ನೀಡಿ ಬಂದಿದ್ದಾರೆ.
ಸರ್ಕಾರ ಕೋವಿಡ್ 19 ನಿಯಂತ್ರಣಕ್ಕೆ ಗ್ರಾಮೀಣ ಭಾಗದಲ್ಲಿ ಮೊಬೈಲ್ ಕ್ಲಿನಿಕ್‌ಗಳನ್ನು ಸ್ಥಾಪಿಸಿ ಜನರ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು. ಕೋವಿಡ್ 19 ತಡೆಗೆ ಮುನ್ನೆಚ್ಚರಿಕೆ ವಹಿಸಲು ನಾವು ಗ್ರಾಮ ಆರೋಗ್ಯ ಯುವ ಪಡೆ ರಚಿಸಿ ಅವರಿಗೆ ಮಾರ್ಗದರ್ಶನ ನೀಡಿದ್ದೇವೆ.
-ಡಾ.ಅನಿಲ್ ಕುಮಾರ್ ಅವಲಪ್ಪ, ಪ್ರಜಾ ವೈದ್ಯರು
* ಕಾಗತಿ ನಾಗರಾಜಪ್ಪ