Advertisement

ಪಾಕಿಸ್ಥಾನದ ಮಾಜಿ ಕ್ರಿಕೆಟಿಗ ತೌಫಿಕ್‌ ಉಮರ್‌ಗೆ ಕೋವಿಡ್‌-19

10:12 PM May 24, 2020 | Sriram |

ಲಾಹೋರ್‌: ಕೋವಿಡ್‌-19 ಮಹಾಮಾರಿ ಕ್ರಿಕೆಟನ್ನೂ ವ್ಯಾಪಿಸಲು ಮುಂದಾಗಿದೆ. ಪಾಕಿಸ್ಥಾನದ ಮಾಜಿ ಆರಂಭಕಾರ ತೌಫಿಕ್‌ ಉಮರ್‌ ಅವರಿಗೆ ಪಾಸಿಟಿವ್‌ ಇರುವುದು ಪತ್ತೆಯಾಗಿದೆ ಎಂದು “ಕ್ರಿಕೆಟ್‌ ಪಾಕಿಸ್ಥಾನ್‌’ ವೆಬ್‌ಸೈಟ್‌ ವರದಿ ಮಾಡಿದೆ. ಅವರು ಮನೆಯಲ್ಲಿ “ಸೆಲ್ಫ್ ಐಸೊಲೇಶನ್‌’ನಲ್ಲಿದ್ದಾಗ ತಮ್ಮ ದೇಹಸ್ಥಿತಿ ಬಗ್ಗೆ ಮಾಹಿತಿ ನೀಡಿದ ವೇಳೆ ಇದು ತಿಳಿದು ಬಂದಿದೆ.

Advertisement

“ಕಳೆದ ರಾತ್ರಿ ತುಸು ಅನಾರೋಗ್ಯದ ಸೂಚನೆ ಲಭಿಸಿದ್ದರಿಂದ ನಾನೇ ಪರೀಕ್ಷಿಸಿಕೊಂಡಾಗ ಪಾಸಿಟಿವ್‌ ಇರುವುದು ಕಂಡುಬಂತು’ ಎಂದು ತೌಫಿಕ್‌ ಉಮರ್‌ “ಜಿಯೋ ನ್ಯೂಸ್‌ ಚಾನೆಲ್‌’ಗೆ ಹೇಳಿದ್ದಾರೆ.

ನಾಲ್ಕನೇ ಕ್ರಿಕೆಟಿಗ
ತೌಫಿಕ್‌ ಉಮರ್‌ ಕೋವಿಡ್‌-19 ಸೋಂಕಿಗೆ ಒಳಗಾದ ನಾಲ್ಕನೇ ಹಾಗೂ ಪಾಕಿಸ್ಥಾನದ ಎರಡನೇ ಕ್ರಿಕೆಟಿಗ. ಕೋವಿಡ್‌-19 ಆರಂಭಿಕ ಹಂತದಲ್ಲಿದ್ದಾಗ ಇಲ್ಲಿನ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಜಾಫ‌ರ್‌ ಸಫ‌ರಾಜ್‌ (50) ಇದಕ್ಕೆ ಬಲಿಯಾಗಿದ್ದರು. ಉಳಿದಿಬ್ಬರಾದ ಸ್ಕಾಟ್ಲೆಂಡ್‌ ಸ್ಪಿನ್ನರ್‌ ಮಜೀದ್‌ ಹಕ್‌ ಮತ್ತು ದಕ್ಷಿಣ ಆಫ್ರಿಕಾದ ಪ್ರಥಮ ದರ್ಜೆ ಕ್ರಿಕೆಟಿಗ ಸೊಲೊ ಎನ್‌ಕ್ವೆನಿ ಕೊರೊನಾ ಕದನದಲ್ಲಿ ಜಯಶಾಲಿಯಾಗಿದ್ದಾರೆ.

2000ದ ಆರಂಭದಲ್ಲಿ ಅಂತಾ ರಾಷ್ಟ್ರೀಯ ಕ್ರಿಕೆಟನ್ನು ಪ್ರವೇಶಿಸಿದ ತೌಫಿಕ್‌ ಉಮರ್‌ ಓರ್ವ ಪ್ರತಿಭಾನ್ವಿತ ಆಟಗಾರನಾಗಿದ್ದರು. 2003ರ ಪಾಕಿಸ್ಥಾನ ವಿಶ್ವಕಪ್‌ ತಂಡವನ್ನೂ ಪ್ರತಿನಿಧಿಸುವ ಅವಕಾಶ ಅವರಿಗೆ ಸಿಕ್ಕಿತ್ತು. ಎಡಗೈ ಆಟಗಾರನಾಗಿದ್ದ ತೌಫಿಕ್‌ 44 ಟೆಸ್ಟ್‌ಗಳಿಂದ 38ರ ಸರಾಸರಿಯಲ್ಲಿ 2,963 ರನ್‌ ಪೇರಿಸಿದ್ದಾರೆ. 7 ಶತಕ, 14 ಅರ್ಧ ಶತಕ ದಾಖಲಿಸಿದ್ದಾರೆ. ಪದಾರ್ಪಣ ಟೆಸ್ಟ್‌ನಲ್ಲೇ ಶತಕ ಬಾರಿಸಿದ ಹೆಗ್ಗಳಿಕೆ ಇವರದಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next