Advertisement
ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸೋಂಕು ತಗಲಿದ್ದರೆ ಇದರಿಂದ ಶೀಘ್ರ ತಿಳಿಯಲಿದೆ ಎಂದರು.ದಿಲ್ಲಿಯ ನಿಜಾಮುದ್ದೀನ್ ಧಾರ್ಮಿಕ ಸಮಾವೇಶದಲ್ಲಿ ರಾಜ್ಯದಿಂದ ಭಾಗಿ ಯಾಗಿದ್ದವರ ಪೈಕಿ 40 ಮಂದಿಯಲ್ಲಿ ಕೋವಿಡ್ 19 ಸೋಂಕು ದೃಢವಾಗಿದೆ. ರಾಜ್ಯದಿಂದ ಸಮಾವೇಶದಲ್ಲಿ ಭಾಗವಹಿ ಸಿದ್ದವರ ಪೈಕಿ 1,176 ಮಂದಿಯ ಸೋಂಕು ಪರೀಕ್ಷೆ ಮಾಡಲಾಗಿದೆ. 976 ಮಂದಿಯ ವರದಿ ನೆಗೆಟಿವ್ ಬಂದಿದೆ. ಬಾಕಿ 160 ಮಂದಿಯ ಪರೀಕ್ಷಾ ವರದಿ ಬರಬೇಕಿದೆ. ರಾಜ್ಯದವರೇ ಆದ 581 ಮಂದಿ ಸದ್ಯ ಹೊರರಾಜ್ಯಗಳಲಿದ್ದು, ಅವರನ್ನು ಪತ್ತೆ ಮಾಡಿ ತಪಾಸಣ ಕ್ರಮ ಕೈಗೊಳ್ಳುವಂತೆ ಆಯಾ ರಾಜ್ಯಗಳಿಗೆ ಮಾಹಿತಿ ನೀಡಲಾಗಿದೆ ಎಂದರು.
ಕೋವಿಡ್ 19 ಸೋಂಕು ಕುರಿತು ವದಂತಿಗಳು ಹೆಚ್ಚಾಗುತ್ತಿವೆ. ರಾಜ್ಯ ಸರಕಾರ ಆರೋಗ್ಯ ಇಲಾಖೆ ವೆಬ್‌ಸೈಟ್‌ನಲ್ಲಿ ಕೋವಿಡ್ 19 ಸೋಂಕಿನ ಕುರಿತು ಎಲ್ಲ ಮಾಹಿತಿ ಸಿಗುತ್ತದೆ. ವದಂತಿಗಳ ಬಗ್ಗೆಯೂ ಅಲ್ಲಿಯೇ ಮಾಹಿತಿ ಇದ್ದು, ಖಚಿತಪಡಿಸಿ ಕೊಳ್ಳಬಹುದು. ರಾಜ್ಯದ ಯಾವ ಭಾಗದಲ್ಲಿ ಎಷ್ಟು ಕೋವಿಡ್ 19 ಪ್ರಕರಣಗಳಿವೆ ಎಂದು ತೋರಿಸಲು ಡ್ಯಾಶ್‌ಬೋರ್ಡ್ ಸಹ ಇದೆ. ಜತೆಗೆ ಕೋವಿಡ್ 19 ಹೋರಾಟದಲ್ಲಿ ಸರಕಾರದ ಜತೆ ಕೈಜೋಡಿಸಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತೇನೆ ಎಂದರೆ ಅಲ್ಲಿಯೇ ನೋಂದಣಿ ಮಾಡಿಕೊಳ್ಳಬಹುದು ಎಂದು ಸಚಿವರು ತಿಳಿಸಿದರು.