Advertisement
ಈ ವಿಷಯದಲ್ಲಿ ಅದು ದ.ಕೊರಿಯಾವನ್ನು ಮಾದರಿಯನ್ನಾಗಿ ತೆಗೆದುಕೊಂಡಿದ್ದು, ಪಾಸಿಟಿವ್ ಕೇಸ್‌ಗಳು ಗುರುತಿಸುವಿಕೆ, ಪ್ರದೇಶ, ವ್ಯಕ್ತಿಗಳನ್ನು ಗುರುತಿಸಲು ಮೊಬೈಲ್ ಸಾಫ್ಟ್‌ವೇರ್ ಬಳಕೆ ಉತ್ತೇಜನವನ್ನು ಗಮನಿಸಿದೆ. ಈಗಾಗಲೇ ಜರ್ಮನಿ ವಿಶ್ವದಲ್ಲೇ ಅತ್ಯಧಿಕ ವೇಗದಲ್ಲಿ ಕೋವಿಡ್ 19 ಪರೀಕ್ಷೆಯನ್ನು ಅತಿ ವೇಗವಾಗಿ ನಡೆಸುವ ದೇಶವಾಗಿ ಹೊರಹೊಮ್ಮಿದೆ. ಅಲ್ಲಿ ವಾರಕ್ಕೆ 5 ಲಕ್ಷ ಮಂದಿಯ ಪರೀಕ್ಷೆಯನ್ನು ಮಾಡಲಾಗುತ್ತಿದೆ.
Related Articles
Advertisement
ಆದರೆ ಜರ್ಮನಿ ಜನರ ಬಗ್ಗೆ ಇಷ್ಟೊಂದು ಮಾಹಿತಿಗಳನ್ನು ಬಹು ಹಿಂದಿನಿಂದಲೇ ಕಲೆ ಹಾಕುವ ರೂಢಿಯನ್ನು ಹೊಂದಿಲ್ಲ. ಆದ್ದರಿಂದ ಇದನ್ನು ಮುಂದೆ ಪರಿಣಾಮಕಾರಿಯಾಗಿ ಮಾಡಬೇಕೆಂದು ತೀರ್ಮಾನಿಸುತ್ತಿದೆ. ಜತೆಗೆ ಇದನ್ನು ಇಟ್ಟುಕೊಂಡು ರೋಗಿಗಳ ಸಂಪರ್ಕಕ್ಕೆ ಬಂದವರನ್ನು ಪರಿಣಾಮಕಾರಿಯಾಗಿ ಗುರುತಿಸಬಹುದು ಎನ್ನುವ ಅರಿವು ಅದಕ್ಕಾಗಿದೆ. ಅಲ್ಲದೇ ಮುಂದಿನ ಒಂದು ವಾರದಲ್ಲಿ ರೋಗಿಗಳ ಸಂಖ್ಯೆದುಪ್ಪಟ್ಟಾಗುವ ಸಾಧ್ಯತೆ ಇದ್ದು ಕೂಡಲೇ ಪರೀಕ್ಷೆಯನ್ನು ಇನ್ನಷ್ಟು ವೇಗಗೊಳಿಸುವ ಇರಾದೆ ಅದರದ್ದು. ಈ ಕಾರಣ ಮುಂದಿನ ದಿನಗಳಲ್ಲಿ ದೇಶದ ಜನರನ್ನು ಸಾಮೂಹಿಕ ಪರೀಕ್ಷೆಗೆ ಒಳಪಡಿಸುವ ಉದ್ದೇಶವನ್ನೂ ಅಲ್ಲಿಯ ಸರಕಾರ ಹೊಂದಿದೆ.
ಕೋವಿಡ್ 19 ವೈರಸ್ ವಿಚಾರದಲ್ಲಿ ಈಗಾಗಲೇ ಇತರ ನೆರೆಹೊರೆಯ ದೇಶಗಳಿಗಿಂತ ಕಡಿಮೆ ಸಾವಿನ ಪ್ರಮಾಣವನ್ನುಜರ್ಮನಿ ಹೊಂದಿದೆ. ಅಲ್ಲಿನ ಸಾವಿನ ಪ್ರಮಾಣ ಶೇ.08ರಷ್ಟಿದ್ದು ಇದು ಕಳೆದೊಂದು ವಾರದಿಂದ ಶೇ.08ರಷ್ಟಾಗಿತ್ತು. ಇದೇ ವೇಳೆ ಇಟಲಿಯಲ್ಲಿ ಶೇ.11.0 ಮತ್ತು ಸ್ಪೇನ್ ಶೇ.8.3 ಮತ್ತು ಫ್ರಾನ್ಸ್ ಶೇ.6.5 ಮತ್ತು ಬ್ರಿಟನ್‌ನಲ್ಲಿ ಶೇ.6.3ರಷ್ಟಾಗಿತ್ತು.