Advertisement

ಸಾರಿಗೆ ನೌಕರರಿಗೆ ಆಯಾ ಘಟಕದಲ್ಲೇ ಕೋವಿಡ್‌ 19 ಪರೀಕ್ಷೆ

06:39 AM Jun 27, 2020 | Lakshmi GovindaRaj |

ಬೆಂಗಳೂರು: “ಸಾರಿಗೆ ಸಂಸ್ಥೆಗಳ ಎಲ್ಲಾ ನೌಕರರಿಗೆ ಆಯಾ ಘಟಕಗಳ ಮಟ್ಟದಲ್ಲೇ ಕೋವಿಡ್‌ 19 ಪರೀಕ್ಷೆ ನಡೆಸಲಾಗುವುದು’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. “ಸಿಬ್ಬಂದಿ ಆರೋಗ್ಯ ರಕ್ಷಣೆಗೆ ಪ್ರಥಮ ಆದ್ಯತೆ  ನೀಡಲಾಗುತ್ತಿದೆ. ಕೋವಿಡ್‌ 19 ಸೋಂಕು ದೃಢಪಟ್ಟ ಸಿಬ್ಬಂದಿ ಪೂರ್ಣ ಆರೈಕೆ ಜವಾಬ್ದಾರಿಯನ್ನು ಸಾರಿಗೆ ಸಂಸ್ಥೆಗಳೇ ನೋಡಿಕೊಳ್ಳಲಿವೆ’ ಎಂದು ಭರವಸೆ ನೀಡಿದ್ದಾರೆ.

Advertisement

ಎಲ್ಲರಿಗೂ ಕರ್ತವ್ಯ ನಿರ್ವಹಿಸಲು ಅವಕಾಶ ದೊರಕಿಸಲು  ರೊಟೇಷನ್‌ ಆಧಾರದಲ್ಲಿ ಸಿಬ್ಬಂದಿಯನ್ನು ಇದೇ ಮೊದಲ ಬಾರಿಗೆ ನಿಯೋಜಿಸಲಾಗುತ್ತಿದೆ. 55 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಅವರ ಆರೋಗ್ಯ ಸ್ಥಿತಿ ಆಧರಿಸಿ ಉದಾರವಾಗಿ ರಜೆ ಮಂಜೂರು ಮಾಡಲು ನಿರ್ದೇಶನ ನೀಡಲಾಗಿದೆ. ಗರ್ಭಿಣಿ  ಸಿಬ್ಬಂದಿಗೆ ಲಘು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನಾಲ್ಕೂ ಸಂಸ್ಥೆಗಳ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುವ ಕಾರಣ ವರಮಾನ ಇಳಿಮುಖವಾಗಿದ್ದು, ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ  ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗಿದೆ. ಅನಗತ್ಯವಾಗಿದ್ದ ಹೊರಗುತ್ತಿಗೆ ಸಿಬ್ಬಂದಿ ಕಡಿಮೆ ಮಾಡಲಾಗುವುದು. ಗೃಹ ರಕ್ಷಕ ಸಿಬ್ಬಂದಿ ಬದಲಿಗೆ ಸಂಸ್ಥೆಗಳಲ್ಲಿನ ಆಸಕ್ತ ಸಿಬ್ಬಂದಿಯನ್ನೇ ಭದ್ರತಾ ಕೆಲಸಕ್ಕೆ  ನಿಯೋಜಿಸಲಾಗುವುದು. ಮಾಜಿ ಸೈನಿಕರಿಗೆ ಪ್ರಥಮ ಆದ್ಯತೆ ನೀಡಲಾಗುವುದು’ ಎಂದೂ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next